ಬೆಳಗಾವಿ-ಸುವರ್ಣಸೌಧದ ಕೂಗಳತೆಯ ದೂರಿನಲ್ಲಿರುವ ಕೊಂಡಸಕೊಪ್ಪ ಗ್ರಾಮದಲ್ಲರುವ ಅಣ್ಣನ ಮನೆಯಲ್ಲಿ ಪುಟ್ಟ ಕೋಣೆಯಲ್ಲಿ ವಾಸವಾಗಿ,ಸುವರ್ಣ ವಿಧಾನಸೌಧದಲ್ಲಿ ಕೂಲಿ ಮಾಡಿ ಬದುಕುತ್ತಿರುವ ಮಲ್ಲಮ್ಮ ಅನುಭವಿಸುತ್ತಿರುವ ನೋವು ಎಂತಹದ್ದು ಎಂದು ತಿಳಿದರೆ ಮೈಯಲ್ಲಾ ಝುಂ ಅನ್ನುತ್ತದೆ.
ಸುವರ್ಣಸೌಧದ ಘನತೆ ಗೌರವ ಸರ್ಕಾರಕ್ಕೆ ಇನ್ನುವರೆಗೆ ಗೊತ್ತಾಗಿಲ್ಲ.ಈ ವಿಚಾರದಲ್ಲಿ ಮಲ್ಲಮ್ಮ ಅತ್ಯಂತ ಮುಗ್ದೆ .ಸುವರ್ಣಸೌಧದಲ್ಲಿ ದಿನನಿತ್ಯ ಸ್ವಚ್ಚತಾ ಕೆಲಸ ಮುಗಿಸಿ ಮನೆಗೆ ಹೋಗುವದು ಮಲ್ಲಮ್ಮಳ ದಿನಚರಿ,ಇವಳ ಸಹೋದ್ಯೋಗಿ ಸಾಂವಕ್ಕ ಎಂಬುವಳು ಶಾವಗಿ,ಮತ್ತು ಸಂಡಿಗೆ ತಂದು ಕೊಟ್ಟಿದ್ದನ್ನು,ಊಟದ ಬಿಡುವಿನ ಸಂಧರ್ಭದಲ್ಲಿ ಮಲ್ಲಮ್ಮ ಸುವರ್ಣಸೌಧದ ಅಂಗಳದಲ್ಲಿ ಒಣಗಿಸಿ, ಈ ಮಲ್ಲಮ್ಮ ಈಗ ಸುವರ್ಣಸೌಧದ ಮಲ್ಲಮ್ಮಳಾಗಿ ಹೊರ ಹೊಮ್ಮಿದ್ದಾಳೆ. ಶಾವಿಗೆ-ಸಂಡಿಗೆ ಹಾಕಿ ಶೈನ್ ಆದ ಮಲ್ಲಮ್ಮಳಿಗೆ ಈಗ ಆಶ್ರಯ ಮನೆಯ ಭಾಗ್ಯವೂ ಲಭಿಸಿದೆ.
ಸುದ್ದಿ ವಾಹಿನಿಗಳಲ್ಲಿ
ಮಲ್ಲಮ್ಮಳಿಗೆ ಸರ್ಕಾರ ವಜಾ ಮಾಡಿದ್ದು ತಪ್ಪು,ಅವಳಿಗೆ ಆಶ್ರಯ ಮನೆ ಮಂಜೂರು ಮಾಡಲೇಬೇಕು ಎನ್ನುವ ಸುದ್ದಿ ಪ್ರಸಾರವಾದ ಪರಿಣಾಮವಾಗಿ, ಸರ್ಕಾರ ಎಚ್ಚೆತ್ತುಕೊಂಡು ಮಲ್ಲಮ್ಮಳಿಗೆ ಆಶ್ರಯ ಮನೆ ಮಂಜೂರು ಮಾಡಿದೆ.ಜತೆಗೆ ಕೆಲಸದಿಂದ ವಜಾಗೊಂಡ ಮಲ್ಲಳಿಗೆ ಪುನಃ ಕೆಲಸ ಕೊಡಿಸುವಲ್ಲಿ ಸಫಲವಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ವಿಶೇಷ ಕಾಳಜಿ ಮತ್ತು ಮಾನವೀಯತೆ ಯಿಂದಾಗಿ ಪುಟ್ಟ ಕೋಣೆಯಲ್ಲಿ ಬದುಕು ಸಾಗಿಸುತ್ತಿದ್ದ ಶ್ರಮಜೀವಿ ಮಲ್ಲಮ್ಮಳಿಗೆ ಆಶ್ರಯ ಮನೆ ಮಂಜೂರು ಆಗಿದ್ದು ಬಸ್ತವಾಡ ಗ್ರಾಮ ಪಂಚಾಯತಿಯ ಪಿಡಿಓ ಕೊಂಡಸಕೊಪ್ಪ ಗ್ರಾಮದಲ್ಲಿ ಸರ್ಕಾರಿ ಜಾಗೆಯನ್ನು ಗುರುತಿಸಿ ಮನೆ ನಿರ್ಮಾಣದ ಕಾಮಗಾರಿ ಆರಂಭಿಸಲಿದ್ದಾರೆ.
ಸುವರ್ಣ ವಿಧಾನಸೌಧದ ಘನತೆ,ಗೌರವದ ಅರಿವಿಲ್ಲದೇ ಸಹಜವಾಗಿ ಸೌಧದ ಅಂಗಳದಲ್ಲಿ ಶಾವಗಿ,ಸಂಡಿಗೆ ಒಣಗಿಸಿದ ಮಲ್ಲಮ್ಮಳಿಗೆ ಕೊನೆಗೂ ನ್ಯಾಯ ಸಿಕ್ಕಿದೆ.
ಮಲ್ಲಮ್ಮಳಿಗೆ ಒಟ್ಟು ಮೂರು ಜನ ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗ, ಮಕ್ಕಳು ಸಣ್ಣವರಿದ್ದಾಗ ಗಂಡ ಅಗಲಿದ್ದಾನೆ, ಮಲ್ಲಮ್ಮಳ ಅಣ್ಣ,ತನ್ನ ಮನೆಯ ಕೋಣೆಯಲ್ಲಿ ಆಶ್ರಯ ನೀಡಿದ್ದಾನೆ.ಮಲ್ಲಮ್ಮಳ ಅಣ್ಣ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದಾನೆ.ಮಲ್ಲಮ್ಮಳ ಮಗ ಮನಸ್ಸು ಬಂದಾಗ ಮನೆಗೆ ಬಂದು ಹೋಗುತ್ತಾನೆ.ಹೀಗಾಗಿ ಮಲ್ಲಮ್ಮ ಒಂಟಿ ಜೀವನ ಸಾಗಿಸುತ್ತಿದ್ದಾಳೆ. ಸುವರ್ಣಸೌಧದಲ್ಲಿ ಕೂಲಿ ಮಾಡಿ ಬದುಕುತ್ತಿದ್ದು,ಮಲ್ಲಮ್ಮಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅವರು ಮಲ್ಲಳ ನೋವಿಗೆ ಸ್ಪಂದಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ…