ಬೆಳಗಾವಿ-ಬೆಳಗಾವಿ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರದ ಕುರಿತು ಸರ್ಕಾರ ಮೌನಕ್ಕೆ ಶರಣಾಗಿದ್ದು ಸೆಪ್ಟೆಂಬರ್ ಮೊದಲ ವಾರದಲ್ಲಿ ಸುವರ್ಣಸೌಧದ ಗೇಟ್ ಗೆ ಬೀಗ ಜಡಿಯಲಾಗುವದು ಎಂದು ಅಶೋಕ ಪೂಜಾರಿ ಎಚ್ಚರಿಕೆ ನೀಡಿದ್ದಾರೆ
ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಮುಖಂಡರು
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕ ವಿವಿಧ ಮಠಾಧೀಶರ ನೇತೃತ್ವದಲ್ಲಿ ಈ ಭಾಗದ ಅಭಿವೃದ್ಧಿ ಪಡಿಸುವಂತೆ ಹೋರಾಟ ನಡೆಸಲಾಗಿತ್ತು.ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರವಾಗಬೇಕು. ಅದಕ್ಕೆ ಶಕ್ತಿ ತುಂಬಲು ಸೆಕ್ರೆಟರಿ ಕಚೇರಿ ತರವಂತೆ ಸರಕಾರಕ್ಕೆ ಮೂರು ತಿಂಗಳುಗಳ ಕಾಲ ಗಡವು ನೀಡಿದ್ದೇವು.
ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಸರಕಾರಿ ಕಚೇರಿ ಸ್ಥಳಾಂತರಕ್ಕೆ ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಸರಕಾರದ ದುರಾಡಳಿತದಿಂದ ಕೆ-ಶಿಫ್ ಕಚೇರಿಯನ್ನು ದಕ್ಷಿಣ ಕರ್ನಾಟಕಕ್ಕೆ ಸ್ಥಳಾಂತರ ಮಾಡಿರುವುದು ಖಂಡನೀಯ.
ಸರಕಾರದ ಮೇಲೆ ವಿಶ್ವಾಸ ವಿತ್ತು.ಆದರೆ ಈ ಭಾಗದ ಜನರ ಭಾವನೆಯ ಮೇಲೆ ಚೆಲ್ಲಾಟವಾಡುತ್ತಿರುವ ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಸೌಧಕ್ಕೆ ಕಚೇರಿ ಹೋರಾಟ ತಣ್ಣಗೆ ಮಾಡಲು ಸಾಧ್ಯವಿಲ್ಲ ಎಂದರು.
ಎರಡೂ ಪ್ರಮುಖ ಬೇಡಿಕೆಗಳು ಈಡೇರುವರೆಗೂ ಹೋರಾಟ ಮಾಡಲಾಗುವುದು.
ಇದೇ ತಿಂಗಳಲ್ಲಿ ಸ್ಥಳಾಂತರ ಮಾಡಿದ ಕೆ-ಶಿಫ್ ಕಚೇರಿಯನ್ನು ಸ್ಥಳಾಂತರ ಮಾಡಬೇಕೆಂದು ಸಿಎಂಗೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದರು
ಸರಕಾರ ಗಂಭೀರವಾಗಿ ಚಿಂತನೆ ಮಾಡದಿದ್ದರೆ, ಉತ್ತರ ಕರ್ನಾಟಕ ಪ್ರತ್ಯೇಕದ ಕೂಗು ಹೆಚ್ಚಾಗುತ್ತದೆ ಎಂದರು. ನಾಮಕೇ ವಾಸ್ತೆ ಸುವರ್ಣ ವಿಧಾನಸೌಧವಾಗಬಾರದು. ಇಲ್ಲದಿದ್ದರೆ ಅದಕ್ಕೆ ಉತ್ತರ ಕರ್ನಾಟಕ ವಿಕಾಸ ವೇದಿಕೆಯಿಂದ ಸೌಧದ ಗೇಟ್ ಗೆ ಬಿಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.