Breaking News

ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!!

ಮಿನಿಸ್ಟರ್ ಇದ್ರೆ ಹಿಂಗಿರಬೇಕಪ್ಪಾ ….ಅವರೇ ನಮ್ಮ ಹೆಮ್ಮೆಯ ಈಶ್ವರಪ್ಪಾ…!!!

ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ,ಶಕ್ತಿ ಕೇಂದ್ರ ಎಂದು ಭಾಷಣ ಬಿಗಿದು ಪ್ರಚಾರ ಪಡೆಯುವ ಮಿನಿಸ್ಟರ್ ಗಳ ಕೊರತೆ ಇಲ್ಲ ಆದ್ರೆ ಮಿನಿಸ್ಟರ್ ಈಶ್ವರಪ್ಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಸಭೆಗಳನ್ನು ನಡೆಸುವ ಮೂಲಕ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಇತ್ರೀಚಿಗೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಭಾಗ ಮಟ್ಟದ ಅಧಿಕಾರಿಗಳ ಸಭೆ ಕರೆದು ಇಲಾಖೆಯ ಪ್ರಗತಿ ಪರಶೀಲನೆ ನಡೆಸಿ ಸುವರ್ಣ ವಿಧಾನ ಸೌಧವನ್ನು ಕ್ರಿಯಾಶೀಲಗೊಳಿಸಿದ್ದರು

ಕಳೆದ ವಾರ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸುವರ್ಣ ಸೌಧದಲ್ಲಿ ಕೆಡಿಪಿ ಸಭೆ ನಡೆಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು

ಈಗ ಸಚಿವ ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟು ಜನೇವರಿ 6 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಲಾಖೆಯ ಮತ್ತೊಂದು ಕಾರ್ಯಕ್ರಮ ನಡೆಸಿ ಹೊಸ ವರ್ಷದ ಶುಭಾರಂಭ ಮಾಡಲಿದ್ದಾರೆ .

ಜನೇವರಿ 6 ರಂದು ಬೆಳಗಾವಿಯ ಸುವರ್ಣವವಿಧಾನಸೌಧ ದಲ್ಲಿ ನ್ಯಾಶನಲ್ ಕಾನಫರೆನ್ಸ ಆನ್ ಬಯೋಎನರ್ಜಿ ಕಾನಫರೆನ್ಸ ಬೆಳಿಗ್ಗೆ 10 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ

ಈಶ್ವರಪ್ಪ ಜಗದೀಶ ಶೆಟ್ಟರ್ ಗೆ ಇರುವ ಕಾಳಜಿ ನಮ್ಮ ಜಿಲ್ಲೆಯ ಮಂತ್ರಿಗಳಿಗೆ ಏಕಿಲ್ಲ ಎನ್ನುವದು ಈ ಭಾಗದ ಜನರ ಕಳವಳವಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *