ಬೆಳಗಾವಿ-
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನಕ್ಕೆ ಬರದ ಸಿದ್ದತೆ ನಡೆಯುತ್ತಿದೆ. ಅದರಂತೆ ಇಂದು ವಿಧಾನ ಸಭಾ ಸಭಾದ್ಯಕ್ಷ ಕೆ.ಬಿ. ಕೋಳಿವಾಡ ಮತ್ತು ಸಭಾಪತಿ ಡಿ ಎಚ್ ಶಂಕರಮೂರ್ತಿ ಜಂಟಿಯಾಗಿ ಪೂರ್ವಭಾವಿ ಸಭೆ ಮಾಡಿದರು.
ಇಂದು ಬೆಳಗಾವಿ ಸುವರ್ಣ ಸೌದದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕೆ.ಬಿ.ಕೋಳಿವಾಡ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ನಾನು ಸ್ಪೀಕರ್ ಆಗಿದ್ದಾಗಿನಿಂದ ಉತ್ತರ ಕರ್ನಾಟಕದಲ್ಲಿ ೨೦ ತ್ತು ದಿನ ಅದೀವೇಶನ ನಡೆಯಬೇಕು ಇಲ್ಲಿ ಹಲವು ಇಲಾಖೆಗಳು ಕಾರ್ಯನಿರ್ವಹಣೆ ಮಾಡಬೇಕು ಎಂಬುವುದು ನನ್ನ ಆಸೆ ಅದ್ರೆ ಅದನ್ನು ಸರ್ಕಾರ ಮಾಡಬೇಕಲ್ಲವೆ ಎಂದರು. ಅದನ್ನು ಕಾರ್ಯರೂಪಕ್ಕೆ ತರುವ ಅಧಕಾರ ಇಬ್ಬರೂ ಸ್ಪೀಕರ್ ಗಳಿಗೆ ಇಲ್ಲ ಎಂದು ಕೋಳಿವಾಡ ಅಸಮಾಧಾನ ಹೊರಹಾಕಿದರು
ನವೆಂಬರ್ ೧೩ ರಿಂದ ೧೦ ದಿನಗಳ ಕಾಲ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ರಾಜ್ಯಪಾಲರಿಗೆ ಪತ್ರವನ್ನು ಸಹ ಬರೆಯಲಾಗಿದೆ ಅದರಂತೆ ನವಂಬರ್ ೧೩ ರಿಂದ ಅಧಿವೇಶನ ನಡೆಯಲಿದೆ.
ಆ ನಿಟ್ಟಿನಲ್ಲಿ ಅಧಿವೇಶನಕ್ಕೆ ಬರುವ
ಶಾಸಕರು ಸಚಿವರ ವಸತಿ, ಊಟ, ಸದನದ ಅಗತ್ಯಗಳು, ಸೇರಿದಂತೆ ಭದ್ರತೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಅಲ್ಲದೆ ನಾನು ಒಬ್ಬ ಉತ್ತರ ಕರ್ನಾಟಕದವನಾಗಿ ಬೆಳಗಾವಿ ಸುವರ್ಣಸೌಧ ವರ್ಷ ಪೂರ್ತಿ ಕೆಲಸ ಮಾಡಬೇಕು ಎಂಬ ನೀಲುವು ನನ್ನದು ಬೆಳಗಾವಿ ಸುವರ್ಣಸೌಧಕ್ಕೆ ಪ್ರಮುಖ ಕಚೇರಿಗಳು ಸ್ಥಳಾಂತರ ಆಗಬೇಕು.ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಿಸಬೇಕು ಎಂಬ ಬೇಡಿಕೆಗಳು ನನ್ನದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಆದ್ರೆ ಇದನ್ನ ಅನುಷ್ಠಾನಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಸರ್ಕಾರದ ವಿರುದ್ದ ಸ್ಪೀಕರ್ ಕೋಳಿವಾಡ ಅಸಮದಾನವ್ಯೆಕ್ತಪಡಿಸಿದರು.
ಸುವರ್ಣ ವಿಧಾನಸೌಧದ ನಿರ್ವಹಣೆ ಕಚೇರಿಗಳ ಸ್ಥಳಾಂತರ ಉತ್ತರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಈ ಭಾಗದ ಬೇಕು ಬೇಡಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಮಂಡಿಸಲಿ ಸರ್ಕಾರ ಅದಕ್ಕೆ ಸ್ಪಂದಿಸಲಿ ಯಾವುದೇ ರೀತಿಯ ಗದ್ದಲ ಆಗದಂತೆ ಸುಗಮವಾಗಿ ಕಲಾಪ ನಡಿಸೋದು ನಮ್ಮ ಕೆಲಸ ಅಂತ ಕೋಳಿವಾಡ ತಿಳಿಸಿದರು
ಬೆಂಗಳೂರಿನ ವಿಧಾನಸೌಧದಲ್ಲಿ ವಜ್ರಮಹೋತ್ಸವದ ಅಂಗವಾಗಿ ವಿಶೇಷ ಅಧಿವೇಶನ ನಡೆಯುತ್ತಿದೆ ಇದರಲ್ಲಿ ರಾಷ್ಟ್ರಪತಿಗಳು ಭಾಗವಹಿಸುತ್ತಾರೆ ಇದರ ಸಿದ್ಧತೆಗಾಗಿ ಸರ್ಕಾರಕ್ಕೆ 27 ಕೋಟಿ ರೂ ವೆಚ್ಚದ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು
ವಿಧಾನ ಪರಿಷತ್ತ ಸಭಾಪತಿ ಡಿಎಲ್ ಶಂಕರ ಮೂರ್ತಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು