Breaking News

ಇಂದು ಸುಳೇಭಾವಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ 

. ಇಂದು ಸುಳೇಭಾವಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿಯ ೨೩ನೇ ಮಹಾಪೂಜೆ ಹಾಗೂ ಅನ್ನಪ್ರಸಾದ ಕಾರ್ಯಕ್ರಮ ಇಂದು  ಡಿ. ೧೭ರಂದು ಸಂಜೆ ೬ ಗಂಟೆಗೆ ಗ್ರಾಮದ ಕಲ್ಮೇಶ್ವರ ನಗರದ ಶ್ರೀ ಕಾಶಿ ವಿಶ್ವನಾಥ ಮಠದ ಆವರಣದಲ್ಲಿ ನಡೆಯಲಿದೆ.

ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಸ್ವಾಮೀಜಿ ಹಾಗೂ ಅರಳಿಕಟ್ಟಿ-ಬಸ್ಸಾಪುರ ವಿರಕ್ತಮಠದ ಶ್ರೀ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರುಕ್ಮೀಣಿ ನಗರದ ಶ್ರೀ ಸುರೇಂದ್ರ ಗುರುಸ್ವಾಮಿ, ಶ್ರೀ ಆನಂದ ಗುರುಸ್ವಾಮಿ, ಸಾಂಬ್ರಾದ ಶ್ರೀ ಶಿವಲಿಂಗಯ್ಯ ಗುರುಸ್ವಾಮಿ, ಸುಳೇಭಾವಿಯ ಶ್ರೀ ಸುರೇಶ ಗುರುಸ್ವಾಮಿ, ಶ್ರೀ ಹಂಪಯ್ಯ ಗುರುಸ್ವಾಮಿ ನೇತೃತ್ವದಲ್ಲಿ ಮಹಾಪೂಜೆ ನೆರವೇರಲಿದೆ.

ಅಂದು ಸಂಜೆ ೬ ಗಂಟೆಗೆ ನಡೆಯಲಿರುವ ಮಹಾಪೂಜೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸುವ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಭಜನಾ ಕಾರ್ಯಕ್ರಮ ಇದೆ. ಅದ್ಧೂರಿಯಾಗಿ ನೆರವೇರಲಿರುವ ಮಹಾಪೂಜೆ ಬಳಿಕ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *