ಬೆಳಗಾವಿ: ಪ್ರಪ್ರಥಮ ಕನ್ನಡದ ಮೇಯರ್ ಹಿರಿಯ ಕನ್ನಡಪರ ಹೋರಾಟಗಾರರು,ಬೆಳಗಾವಿಯ ಕನ್ನಡದ ಹೋರಾಟಕ್ಕೆ ಮಾರ್ಗದರ್ಶಕರೂ ಆಗಿದ್ದ, ಮಾಜಿ ಮಹಾಪೌರ, ಸಿದ್ದನಗೌಡ ಪಾಟೀಲ ನಿಧನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟ.ಎ ನಾರಾಯಣಗೌಡರು ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಲವಾರು ದಶಕಗಳಿಂದ ಗಡಿಭಾಗದಲ್ಲಿ ಮರಾಠಿ ಪ್ರಾಬಲ್ಯದ ಮದ್ಯೆಯೂ ಸಿದ್ಧನಗೌಡರು ಕನ್ನಡದ ಪರವಾಗಿ ಹೋರಾಟ ಮಾಡಿ,ಗಡಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸಿದ ಮಹಾನ್ ಹೋರಾಟಗಾರರು ಸಿದ್ಧನಗೌಡ ಪಾಟೀಲ ಅವರ ಅಗಲಿಕೆಯಿಂದ ಹೋರಾಟ ಧ್ವನಿ ಕಳೆದುಕೊಂಡಂತಾಗಿದೆ.ಎಂದು ಟಿ.ಎ ನಾರಾಯಣಗೌಡರು ಶೋಕ ವ್ಯೆಕ್ತ ಪಡಿಸಿದ್ದಾರೆ.
ಸಿದ್ಧನಗೌಡ ಪಾಟೀಲರು ಕನ್ನಡಪರ ಹೋರಾಟದಲ್ಲಿ ತಂದೆಯ ಪಾತ್ರ ನಿಭಾಯಿಸಿದ್ದರು,ಎಲ್ಲ ಹೋರಾಟಗಳಲ್ಲಿಯೂ ಅವರು ಮಾರ್ಗದರ್ಶನ ಮಾಡುತ್ತಿದ್ದರು ಅವರು ಮಾಡಿದ ಕನ್ನಡದ ಸೇವೆಯನ್ನು ನಾಡಿನ ಕನ್ನಡಿಗರು ಎಂದಿಗೂ ಮರೆಯುವದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟ.ಎ.ನಾರಾಣಗೌಡರು ಸಿದ್ಧನಗೌಡ ಪಾಟೀಲರ ನಿಧನಕ್ಕೆ ತೀವ್ರ ಸಂತಾಪ ವ್ಯೆಕ್ತ ಪಡಿಸಿದ್ದಾರೆ.