Tag Archives: ಬೆಳಗಾವಿ ಸಮಾಚಾರ

ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು

ಬೆಳಗಾವಿ- ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಿಸುವ ವಿಚಾರವಾಗಿ ನಾನು ಈ ಬಗ್ಗೆ ಉಲ್ಲೇಖ ಮಾಡೋಕೆ ಹೋಗಲ್ಲ, ಯಾರಿಗೂ ಮುಜುಗರ ಮಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾದ್ಯಮ ಮಿತ್ರರ ಜೊತೆ ಮಾತನಾಡಿ ನಾನು ಮೊದಲಿನಿಂದಲೂ ಆ್ಯಕ್ಟೀವ್ ಇದೀನಿ, ಮುಂದೆಯೂ ಆ್ಯಕ್ಟೀವ್ ಇರ್ತೀನಿ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ‌ …

Read More »

ಶನಿವಾರ ಬೆಳಗಾವಿಯ ರಡ್ಡಿ ಸಮಾಜ ಭವನ ಲೋಕಾರ್ಪಣೆ

ಬೆಳಗಾವಿ: ಸದಾಶಿವ ನಗರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದರ್ಜೆಯಲ್ಲಿ ನಿರ್ಮಿಸಿರುವ ರಡ್ಡಿ ಭವನ ಜ.25ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಈ ಬಗ್ಗೆ ತಿಳಿಸಿದರು. 2017ರ ಮಾ.22ರಂದು ನಮ್ಮ ಸಂಘದ ನೋಂದಣಿ ಮಾಡಿದ್ದೆವು. 13,270 ಚದರ ಅಡಿಯಲ್ಲಿ ತಲೆ ಎತ್ತಿರುವ ಭವನ ನಿರ್ಮಾಣಕ್ಕೆ ದಿ.ಭೀಮರಡ್ಡಿ ಮಳಲಿ 2 ಕೋಟಿ ರೂ. ಬೆಲೆಬಾಳುವ ಜಾಗವನ್ನು ದಾನವನ್ನಾಗಿ ನೀಡಿದ್ದರು. …

Read More »