ಹೆಲಿಕಾಪ್ಟರ್ ಮೂಲಕ ರವಿವಾರ ಗೋಕಾಕಿಗೆ ರಮೇಶ್ ಜಾರಕಿಹೊಳಿ….!! ಬೆಳಗಾವಿ- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಮಾಡಿದ ಸಂಕಲ್ಪವನ್ನು ಈಡೇರಿಸಿ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ರಮೇಶ್ ಜಾರಕಿಹೊಳಿ ರವಿವಾರ ಹೆಲಿಕಾಪ್ಟರ್ ಮೂಲಕ ಗೋಕಾಕಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ರವಿವಾರ ಬೆಳಿಗ್ಗೆ ಗೋಕಾಕಿಗೆ ಆಗಮಿಸುವ ಅವರು ತಂದೆ,ತಾಯಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿ ಆಶಿರ್ವಾದ ಪಡೆಯಲಿದ್ದಾರೆ ನಂತರ ಅಭಿಮಾನಿ ಕಾರ್ಯಕರ್ತರನ್ನು ಭೇಟಿಯಾಗಿ ಬೆಳಗಾವಿಯ ರಾಣಿ ಚನ್ನಮ್ಮ …
Read More »ಎಂ ಈ ಎಸ್ ನಿಷೇಧಿಸಲು ಬೆಳಗಾವಿಯಲ್ಲಿ ರಕ್ತ ಪತ್ರ….
ಬೆಳಗಾವಿ – ಗಡಿ ಭಾಗದ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿರುವ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿ ಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ರಕ್ತದಲ್ಲಿ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅದ್ಯಕ್ಷ ಕೆ. ಎಲ್ ಮಂಜುನಾಥ ಅವರಿಗೆ ಈ ಪತ್ರವನ್ನು ಸಮರ್ಪಿಸಿದ್ದಾರೆ.ಆಯೋಗದ ಅದ್ಯಕ್ಷರು ಬೆಳಗಾವಿಯ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕನ್ನಡ ಸಂಘಟನೆಗಳು, ಮತ್ತು ಗಡಿಭಾಗದ ಬುದ್ಧಿಜೀವಿಗಳ …
Read More »ಬೆಳಗಾವಿಯಲ್ಲಿ ಬಿಜೆಪಿ ಸಂಕಟ ವಿಸ್ತರಣೆ,…ನನಗೂ ಸ್ಥಾನ ಕೊಡಿ ಎಂದು ತಗಾದೆ ತೆಗೆದ ಶಾಸಕ ಮಾಮನಿ
ಬೆಳಗಾವಿಯಲ್ಲಿ ಬಿಜೆಪಿ ಸಂಕಟ ವಿಸ್ತರಣೆ, ನನಗೂ ಸ್ಥಾನ ಕೊಡಿ ಎಂದು ತಗಾದೆ ತೆಗೆದ ಶಾಸಕ ಮಾಮನಿ ಬೆಳಗಾವಿ- ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುವ ಮೊದಲೇ ಬೆಳಗಾವಿಯಲ್ಲಿ ಬಿಜೆಪಿಯ ಸಂಕಟ ವಿಸ್ತರಣೆಯಾಗಿದೆ ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ ಆನಂದ ಮಾಮನಿ ನನಗೂ ಸದಥಾನ ಕೊಡಿ ,ಎಂದು ತಗಾದೆ ತೆಗೆದಿದ್ದಾರೆ ,ಹೀಗಾಗಿ ಬೆಳಗಾವಿಯಿಂದಲೇ ಭಿನ್ನಮತ ಸ್ಪೋಟವಾಗಿದೆ. ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಆನಂದ್ ಮಾಮನಿ ಬೇಡಿಕೆ ಇಟ್ಟಿದ್ದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ …
Read More »ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು
ಬೆಳಗಾವಿ- ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಿಸುವ ವಿಚಾರವಾಗಿ ನಾನು ಈ ಬಗ್ಗೆ ಉಲ್ಲೇಖ ಮಾಡೋಕೆ ಹೋಗಲ್ಲ, ಯಾರಿಗೂ ಮುಜುಗರ ಮಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾದ್ಯಮ ಮಿತ್ರರ ಜೊತೆ ಮಾತನಾಡಿ ನಾನು ಮೊದಲಿನಿಂದಲೂ ಆ್ಯಕ್ಟೀವ್ ಇದೀನಿ, ಮುಂದೆಯೂ ಆ್ಯಕ್ಟೀವ್ ಇರ್ತೀನಿ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ …
Read More »ಶನಿವಾರ ಬೆಳಗಾವಿಯ ರಡ್ಡಿ ಸಮಾಜ ಭವನ ಲೋಕಾರ್ಪಣೆ
ಬೆಳಗಾವಿ: ಸದಾಶಿವ ನಗರದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ದರ್ಜೆಯಲ್ಲಿ ನಿರ್ಮಿಸಿರುವ ರಡ್ಡಿ ಭವನ ಜ.25ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಈ ಬಗ್ಗೆ ತಿಳಿಸಿದರು. 2017ರ ಮಾ.22ರಂದು ನಮ್ಮ ಸಂಘದ ನೋಂದಣಿ ಮಾಡಿದ್ದೆವು. 13,270 ಚದರ ಅಡಿಯಲ್ಲಿ ತಲೆ ಎತ್ತಿರುವ ಭವನ ನಿರ್ಮಾಣಕ್ಕೆ ದಿ.ಭೀಮರಡ್ಡಿ ಮಳಲಿ 2 ಕೋಟಿ ರೂ. ಬೆಲೆಬಾಳುವ ಜಾಗವನ್ನು ದಾನವನ್ನಾಗಿ ನೀಡಿದ್ದರು. …
Read More »ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಓರ್ವನಿಗೆ ಚೂರಿ ಇರಿತ,ಆಸ್ಪತ್ರೆಗೆ ದಾಖಲು
ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಓರ್ವನಿಗೆ ಚೂರಿ ಇರಿತವಾಗಿದ್ದು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ ಅರ್ದ ಘಂಟೆಯ ಮೊದಲು ಈ ಘಟನೆ ನಡೆದಿದ್ದು ಆನಂದ ಪೂಜಾರಿ ಎಂಬಾತನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ ಆನಂದ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಘಟನೆಗೆ ಕಾರಣ ಏನು ಎಂಬುದು ಇನ್ನುವರೆಗೆ ಗೊತ್ತಾಗಿಲ್ಲ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ
Read More »ಫೆಬ್ರುವರಿ 3 ರಂದು ಬೆಳಗಾವಿಯಲ್ಲಿ ಗಡಿ ಸಂರಕ್ಷಣಾ ಆಯೋಗದ ಸಭೆ
ಬೆಳಗಾವಿ- ಫೇಬ್ರುವರಿ ಮೊದಲ ವಾರದಲ್ಲಿ , ಫೆಬ್ರುವರಿ 3 ರಂದು ಗಡಿ ಸಂರಕ್ಷಣಾ ಆಯೋಗ ಬೆಳಗಾವಿಯಲ್ಲಿ ಸಭೆ ನಡೆಸಲು ನಿರ್ಧರಿಸಿದೆ .ಸಭೆಯ ದಿನಾಂಕ ನಿಗದಿಯಾಗಿದ್ದು ಆಯೋಗ ಬೆಳಗಾವಿಯ ಕನ್ನಡಪರ ಹೋರಾಟಗಾರರ ಜೊತೆ ಚರ್ಚೆ ನಡೆಸಿದ್ದು ಸಭೆಯನ್ನು ಸುವರ್ಣ ವಿಧಾನ ಸೌಧದಲ್ಲೇ ನಡೆಸುವಂತೆ ಬೆಳಗಾವಿಯ ಹೋರಾಟಗಾರರು ಆಯೋಗಕ್ಕೆ ಸಲಹೆ ನೀಡಿದ್ದಾರೆ. ಗಡಿ ಸಂರಕ್ಷಣಾ ಆಯೋಗ ಫೆಬ್ರುವರಿ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿಯೇ ಸಭೆ ನಡೆಸಲು ಮುಂದಾಗಿತ್ತು ,ಇದಕ್ಕೆ ಬೆಳಗಾವಿಯ ಹೋರಾಟಗಾರರು ವಿರೋಧ ವ್ಯೆಕ್ತಪಡಿಸಿದ …
Read More »