ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಉಮೇಶ್ ಕತ್ತಿ ಮಂತ್ರಿಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಭಿ ನಡೆಸಿದ್ದರೆ,ಇತ್ತ ಬೆಂಗಳೂರಿನಲ್ಲಿ ಡಿಸಿಂ ಲಕ್ಷ್ಮಣ ಸವದಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಫೆಬ್ರುವರಿ 17 ರಂದು ವಿಧಾನ ಪರಿಷತ್ತಿನ ಚುನಾವಣೆ ನಡೆಯಲಿದೆ ಈ ಚುನಾವಣೆಯಲ್ಲಿ ಅಡಳಿತಾರೂಢ ಬಿಜೆಪಿಗೆ ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸಿವೆ.ಬಿಜೆಪಿಯ ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಸೋಲಿಸುವದಕ್ಕಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಪಕ್ಷೇತರ …
Read More »ಬೈಕ್ ಗೆ ಟ್ಯಾಂಕರ್ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರನ ಸಾವು.
ಬೆಳಗಾವಿ- ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಇಂದು ಬುಧವಾರ ಬೆಳಿಗ್ಗೆ ಎಂಟು ಘಂಟೆಗೆ ಬೆಳಗಾವಿ-ಖಾನಾಪೂರ ರಸ್ತೆಯಲ್ಲಿ ನಡೆದಿದೆ ಬೆಳಗಾವಿ- ಖಾನಾಪೂರ ರಸ್ತೆಯ ಜಾಧವ ನಗರ ಸಮೀಪ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಈ ಅಪಘಾತ ಸಂಭವಿಸಿದ್ದು,48 ವರ್ಷ ವಯಸ್ಸಿನ ಕರನಸಿಂಗ್ ರಜಪೂತ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕರಣಸಿಂಗ್ ರಜಪೂತ ಜಾಧವ ನಗರದಿಂದ ಉದ್ಯಮಬಾಗ್ ಕ್ಕೆ ಹೋಗುವಾಗ ಈ ದುರ್ಘಟನೆ …
Read More »ಬೆಳಗಾವಿಯ ಆಝಾದ್ ನಗರದಲ್ಲಿ ಯುವಕರ ನಡುವೆ ಫೈಟ್….
ಬೆಳಗಾವಿಯ ಆಝಾದ್ ನಗರದಲ್ಲಿ ಯುವಕರ ನಡುವೆ ಫೈಟ್…. ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಚುನಾವಣೆ ನಡೆಯುವ ಲಕ್ಷಣ ಗಳೂ ಕಾಣುತ್ತಿಲ್ಲ ಆದ್ರೆ ಬೆಳಗಾವಿಯ ಕೆಲವು ವಾರ್ಡುಗಳಲ್ಲಿ ಭವಿಷ್ಯದ ಕಾರ್ಪೋರೇಟರ್ ಗಳ ನಡುವೆ ಜಗಳ ಶುರುವಾಗಿದೆ. ನಾನು ದೊಡ್ಡವನು,ನೀನು ದೊಡ್ಡವನ್ನು ಅಂತಾ ಬೆಳಗಾವಿಯ ಆಝಾದ್ ನಗರದಲ್ಲಿ ಕಳೆದು ಒಂದು ವಾರದ ಹಿಂದೆಯೇ ಯುವಕರ ಎರಡು ಗುಂಪುಗಳ ಮದ್ಯ ಫೈಟ್ ಶುರುವಾಗಿತ್ತು,ಯುವಕರ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ …
Read More »ಬೆಳಗಾವಿಯ ಕೋಟೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆ
ಸುಸೈಡ್ ಸ್ಪಾಟ್ ಆಗುತ್ತಿದೆಯಾ,ಬೆಳಗಾವಿಯ ಕೋಟೆ ಕೆರೆ… ಬೆಳಗಾವಿ- ಬೆಳಗಾವಿಯ ಕೋಟೆ ಕೆರೆಯಲ್ಲಿ ಇಂದು ಅಪರಿಚಿತ ಶವ ದೊರೆತಿದ್ದು ಈ ಕೆರೆ ದಿನಕಳೆದಂತೆ ಸುಸೈಡ್ ಸ್ಪಾಟ್ ಆಗುತ್ತಿದೆ ಇಂದು ಕೋಟೆ ಕೆರೆಯಲ್ಲಿ ದೊರೆತಿರುವ ಅಪರಿಚಿತ ವ್ಯೆಕ್ತಿಯ ಶವ ,50 ರಿಂದ 55 ವರ್ಷದ ವ್ಯೆಕ್ತಿಯ ಶವವಾಗಿದೆ ಎಂದು ಪೋಲಿಸರು ಅಂದಾಜಿಸಿದ್ದು ನೀಲಿ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ವ್ಯೆಕ್ತಿಯ ಕುರಿತು ಮಾಹಿತಿ ಇದ್ದಲ್ಲಿ ಕೂಡಲೇ ಬೆಳಗಾವಿಯ ಮಾರ್ಕೆಟ್ ಠಾಣೆಗೆ …
Read More »ಐದು ಲಕ್ಷ ರೂ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ನವರಿಗೆ ಅಂಜಲಿ ನಿಂಬಾಳ್ಕರ್ ಒತ್ತಾಯ
ಐದು ಲಕ್ಷ ರೂ ಪರಿಹಾರ ನೀಡಲು ಸಿಎಂ ಯಡಿಯೂರಪ್ಪ ನವರಿಗೆ ಅಂಜಲಿ ನಿಂಬಾಳ್ಕರ್ ಒತ್ತಾಯ ಬೆಳಗಾವಿ- ಇಟಗಿ – ಬೋಗೂರು ಗ್ರಾಮದ ಮದ್ಯದಲ್ಲಿರುವ ಹಳ್ಳಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಆರು ಜನ ಕೃಷಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದು ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ನೀಡುವಂತೆ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿಯಾದ ಅಂಜಲಿ ನಿಂಬಾಳ್ಕರ್ ಮೃತ ಪಟ್ಟವರೆಲ್ಲರೂ ಕೃಷಿ ಕೂಲಿ ಕಾರ್ಮಿಕರಾಗಿದ್ದು ಬಡವರಾಗಿದ್ದಾರೆ, …
Read More »ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ…
ಲಕ್ಷ್ಮಣ ಸವದಿಯ ಕೃಷಿ ಖಾತೆ ಕಿತ್ತುಕೊಂಡು ಬೊಮ್ಮಾಯಿಗೆ ಕೊಟ್ಟ ಸಿಎಂ… ಬೆಳಗಾವಿ- ಡಿಸಿಎಂ ಲಕ್ಷ್ಮಣ ಸವದಿಯ ಪಾವರ್ ಗೆ ಕತ್ತರಿ ಹಾಕುವ ಕಾರ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದು ಇಷ್ಟು ದಿನ ಲಕ್ಷ್ಮಣ ಸವದಿ ಹತ್ತಿರವೇ ಇದ್ದ ಕೃಷಿ ಖಾತೆಯನ್ನು ಬಸವರಾಜ ಬೊಮ್ಮಾಯಿಗೆ ನೀಡಲಾಗಿದೆ. ಇಂದು ಹತ್ತು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂಧರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಇಲಾಖೆಯನ್ನು ಪರಮಾಪ್ತ ಬಸವರಾಜ ಬೊಮ್ಮಾಯಿಗೆ ನೀಡಿದ್ದಾರೆ ಬಸವರಾಜ ಬೊಮ್ಮಾಯಿ …
Read More »ಯಡಿಯೂರಪ್ಪನವರ ಸ್ಥಾನ ನನಗೆ ಸಿಗಲೇ ಬೇಕು,ನಾನು ಮುಖ್ಯಮಂತ್ರಿ ಆಗಲೇ ಬೇಕು ಈ ದಿಸೆಯಲ್ಲಿ ನನ್ನ ಪ್ರಯತ್ನ ಇದ್ದೇ ಇದೆ- ಉಮೇಶ್ ಕತ್ತಿ
ಬೆಳಗಾವಿ- ಸಚಿವ ಸಂಪುಟ ವಿಸ್ತರಣೆಯ ಬಳಿಕ ಮಾಜಿ ಮಂತ್ರಿ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮೌನ ಮುರಿದಿದ್ದಾರೆ.ನಾನು ಸೀನಿಯರ್ ಹದಿಮೂರು ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ನನಗೆ ಸಿಗಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದೇನೆ.ದೇವರ ಆಶಿರ್ವಾದ ಇದ್ದರೆ ರಾಜ್ಯದ ಮುಖ್ಯಮಂತ್ರಿಯೂ ಆಗುತ್ತೇನೆ.ಎಂದು ಉಮೇಶ್ ಕತ್ತಿ ಹೇಳಿದ್ದಾರೆ. ಹುಕ್ಕೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಮಾಧ್ಯಮಗಳಿಗೆ ಉಮೇಶ ಕತ್ತಿ ತಮ್ಮ ಮನದಾಳದ …
Read More »ರಮೇಶ್ ಜಾರಕಿಹೊಳಿಗೆ ನೀರಾವರಿ, ಶ್ರೀಮಂತ ಪಾಟೀಲರಿಗೆ ಜವಳಿ ಖಾತೆ..
ಬೆಳಗಾವಿ- ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಜನ ಮಂತ್ರಿಗಳಿಗೆ ಖಾತೆಗಳ ಹಂಚಿಕೆಯಾಗಿದ್ದು ಹಠವಾದಿ ರಮೇಶ್ ಜಾರಕಿಹೊಳಿ ಕೊನೆಗೂ ಜಲಸಂಪನ್ಮೂಲ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿ ಹದಿನೇಳು ಸಚಿವರನ್ನು ಕಟ್ಟಿಕೊಂಡು,ಹೊಸ ಸರ್ಕಾರ ರಚನೆಯಲ್ಲಿ ಮುಖ್ಯಪಾತ್ರ ವಹಿಸಿ,ನೀರಾವರಿ ಮಂತ್ರಿಯಾಗುವ ಹಠ ಸಾಧಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿ ಯಾಗಿದ್ದಾರೆ. ಜಲಸಂಪನ್ಮೂಲ ಖಾತೆ ಪಡೆದಿರುವ ರಮೇಶ್ ಜಾರಕಿಹೊಳಿ ಅವರೇ ಬೆಳಗಾವಿ …
Read More »ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ
ವಿಟಿಯು ೧೯ ನೇ ಘಟಿಕೋತ್ಸವ: ಮಹಿಮಾ ರಾವ್ ಗೆ ೧೩ ಚಿನ್ನದ ಪದಕ ———————————————————————– ಸೃಜನಶೀಲತೆ, ಕೌಶಲ್ಯತೆಗೆ ವಿಫುಲ ಉದ್ಯೋಗಾವಕಾಶ: ಪ್ರೊ.ಅಗರವಾಲ್ ಬೆಳಗಾವಿ, ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸೃಜಶೀಲತೆಗೆ ಹೆಚ್ಚಿನ ಮಹತ್ವ ಇರುವುದರಿಂದ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ಔದ್ಯೋಗಿಕ ಹೀಗೆ ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್.ಬಿ.ಎ.)ಯ ಅಧ್ಯಕ್ಷರಾದ ಪ್ರೊ.ಕೆ.ಕೆ.ಅಗರವಾಲ್ ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ “ಜ್ಞಾನಸಂಗಮ” ಆವರಣದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ …
Read More »ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಉಮೇಶ್ ಕತ್ತಿ ಔಟ್….!!!
ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 10+3 ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡದೇ ಇರುವದರಿಂದ ಕೇವಲ ಹತ್ತು ಜನ ಶಾಸಕರಿಗೆ ಮಾತ್ರ ಮಂತ್ರಿ ಭಾಗ್ಯ ಲಭಿಸಿದ್ದು ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ಉಮೇಶ್ ಕತ್ತಿ ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಔಟ್ ಆಗಿದ್ದಾರೆ ಮಾಜಿ ಸಚಿವ ಉಮೇಶ್ ಕತ್ತಿ ಅವರು ಸಚಿವರಾಗ್ತಾರೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದರು ಇಂದು ಮದ್ಯಾಹ್ನದವರೆಗೆ …
Read More »