ಬೆಳಗಾವಿ,-): ಸಮಗ್ರ ಶಿಕ್ಷಣ ಯೋಜನೆಯ ಸಮನ್ವಯ ಶಿಕ್ಷಣ ಮಧ್ಯವರ್ತನೆ ಚಟುವಟಿಕೆಯಡಿಯಲ್ಲಿ 2020-21 ನೇ ಸಾಲಿಗೆ ಕಿತ್ತೂರು, ಖಾನಾಪುರ ಹಾಗೂ ರಾಮದುರ್ಗ ವಲಯಗಳಲ್ಲಿ ಖಾಲಿ ಇರುವ ನಿಗದಿಪಡಿಸಿದ ವಿಶೇಷ ಸಂಪನ್ಮೂಲ ಶಿಕ್ಷಕರಿಗಾಗಿ ವಿದ್ಯಾರ್ಹತೆ ಹೊಂದಿದ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ನೇರ ಗುತ್ತಿಗೆ ಮೂಲಕ ಇಲಾಖಾ ನಿಯಮಾನುಸಾರ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿಶೇಷ ಡಿ.ಇಡಿ(ಪ್ರಾಥಮಿಕ ಮತ್ತು ವಿಶೇಷ ಬಿ.ಇಡಿ(ಪ್ರೌಢ) ಪದವಿ ಪಡೆದಿರುವ ಆರ್.ಸಿ.ಆಯ್. ಪ್ರಮಾಣ ಪತ್ರ ಹೊಂದಿರುವ ಸರ್ಕಾರಿ ಶಾಲಾ ಶಿಕ್ಷಕರು ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸುವುದು.
ಸರ್ಕಾರಿ ಶಾಲಾ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ ಅರ್ಹ ಆಸಕ್ತ ಬಾಹ್ಯ ಸಂಪನ್ಮೂಲ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇರ ಗುತ್ತಿಗೆ ಮುಖಾಂತರ ಆಯ್ಕೆಮಾಡಲಾಗುತ್ತದೆ. ಆಸಕ್ತ ಸಂಪನ್ಮೂಲ ಶಿಕ್ಷಕರು ವೈಯಕ್ತಿಕ ಮಾಹಿತಿ ಸಹಿತ ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಸಂಬಂಧಿಸಿದ ದಾಖಲೆ ಪತ್ರಗಳೊಂದಿಗೆ ದಿನಾಂಕ: 16-09-2020 ರಂದು ಸಾಯಂಕಾಲ 5.30 ಗಂಟೆಯೊಳಗಾಗಿ ಅರ್ಜಿಯನ್ನು ಖುದ್ದಾಗಿ/ಅಂಚೆ ಮೂಲಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಸಾ.ಶಿ.ಇಲಾಖೆ, ಕ್ಲಬ್ ರೋಡ್ ಬೆಳಗಾವಿ ಈ
ಕಛೇರಿಗೆ ಸಲ್ಲಿಸುವುದು.
ಖಾಲಿ ಇರುವ ವಿಶೇಷ ಸಂಪನ್ಮೂಲ (CWSN &
IEDSS) ಶಿಕ್ಷಕರ ಹುದ್ದೆಗಳ ಸಂಖ್ಯೆ:
ಕಿತ್ತೂರು (ಪ್ರೌಢ- 2); ಖಾನಾಪುರ (ಪ್ರೌಢ-1 ಹಾಗೂ ಪ್ರಾಥಮಿಕ-1) ಮತ್ತು ರಾಮದುರ್ಗ (ಪ್ರೌಢ-1)
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0831-2435232 ಸಂಪರ್ಕಿಸುವುದು.
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ದಿ:18-09-2020 ರಂದು ಬೆಳಿಗ್ಗೆ 11 ಗಂಟೆಗೆ ಮೂಲದಾಖಲಾತಿಗಳೊಂದಿಗೆ ಈ ಕಛೇರಿಯಲ್ಲಿ ಅರ್ಜಿಗಳ ಪರಿಶೀಲನೆಗಾಗಿ ಉಪಸ್ಥಿತರಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***