ಈ ಬಾರಿ ಶಿಷ್ಯರಿಂದ ಗುರುಗಳಿಗೆ ಡಿಜಿಟಲ್ ಶುಭಾಶಯ…..!
ಬೆಳಗಾವಿ-ಎಲ್ಲ ಹಬ್ಬ,ಸಭೆ ಸಮಾರಂಭ,ಜಾತ್ರೆ,ಉತ್ಸವಗಳನು ನುಂಗಿರುವ ಮಹಾಮಾರಿ ಕೊರೋನಾ ವರ್ಷಕ್ಕೊಮ್ಮೆ ಶಿಷ್ಯರು ಸಲ್ಲಿಸುವ ಗುರುವಂದನೆಗೂ ಅಡ್ಡಿಯಾಗಿದೆ.
ಪ್ರತಿವರ್ಷ ಮಕ್ಕಳು ಶಿಕ್ಷಕರ ದಿನಾಚರಣೆಯ ದಿನ ಮಕ್ಕಳು ಗುಲಾಬಿ ಕೊಡಿಸುವಂತೆ ಪಾಲಕರಿಗೆ ಕಾಡಿಸುವದು,ತಮಗೆ ಕಲಿಸುವ ಕ್ಲಾಸ್ ಟೀಚರ್ ಗೆ ಗುಲಾಬಿ ಹೂವು ಕೊಟ್ಟು ಹ್ಯಾಪಿ ಟೀಚರ್ಸ್ ಡೇ ಹೇಳುವದು,ಅನೇಕ ತಲೆಮಾರಿನಿಂದ ನಡೆದುಕೊಂಡು ಬಂದ ಸಂಸ್ಕೃತಿ.
ಕೋವಿಡ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿವೆ,ಮಕ್ಕಳು ಶಾಲೆಗೆ ಹೋಗುವಂತಿಲ್ಲ,ಹೀಗಾಗಿ ಮಕ್ಕಳು ಈ ಬಾರಿ ಗೂಗಲ್ ನಲ್ಲಿ ಸರ್ಚ ಮಾಡಿ ಡಿಜಿಟಲ್ ಹೂಗುಚ್ಛ ಸರ್ಚ್ ಮಾಡಿ ತಮ್ಮ ಗುರುಗಳಿಗೆ ವ್ಯಾಟ್ಸಪ್ ಮೂಲಕ ಕಳಿಸಿ ಶುಭಾಶಯ ಕೋರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಕರಿಗೆ ಗ್ರೀಟಿಂಗ್ಸ ಕಾರ್ಡ್ ಗಳನ್ನು ಪೋಸ್ಟ್ ಮೂಲಕ ರವಾನಿಸಿ ಶುಭ ಕೋರಿದ್ದಾರೆ.ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಶಾಲೆಯ ಅಡ್ರೆಸ್ ಬರೆದು ತಮ್ಮ ಶಿಕ್ಷಕರಿಗೆ ಪತ್ರ ಬರೆದು ಶುಭಾಶಯ ಕೋರಿದ ಪ್ರಸಂಗ ಎದುರಾಗಿದೆ.
ನೆನೆದವರ ಮನದಲ್ಲಿ ಗುರು ವೀರಾಜಮಾನ,ಕಲಿಸಿದ ಗುರುವಿಗೆ ವಂದಿಸುವದು ಪೂಜಿಸುವದು ಭಾರತೀಯ ಸಂಸ್ಕೃತಿ ನಾಳೆ ಒಂದೇ ದಿನ ಗುರುವಿನ ಸ್ಮರಣೆ ಮಾಡುವದಲ್ಲ ಪ್ರತಿಯೊಂದು ಕ್ಷಣದಲ್ಲೂ ಗುರುವಿನ ಸ್ಮರಣೆ ನಡೆಯಬೇಕು,ಕಲಿಸಿದ ಗುರುವನ್ನು ವಂದಿಸಿ ಗುರುವಂದನೆ ಸಲ್ಲಿಸುವದು ನಮ್ಮ ಸಂಸ್ಕೃತಿ,ಈ ಸಂಸ್ಕೃತಿ ಉಳಿಯಬೇಕು ಇನ್ನಷ್ಟು ಬೆಳೆಯಬೇಕು ಅನ್ನೋದಷ್ಟೇ ನಮ್ಮ ಆಶಯ.