ಬೆಳಗಾವಿ
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಸಾವನ್ನಪ್ಪಿದ್ದು, ಅಂತ್ಯಕ್ರಿಯೆಗೂ ಮುನ್ನ ಆತನ ಹೆಣದ ಮುಂದೆ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದಾರೆ. ಗಲಾಟೆಯ ಕರಿ ನೆರಳಿನ ನಡುವಯೇ ತೆಲಗಿ ಅಂತ್ಯಕ್ರಿಯೆ ನಡೆದಿದ್ದು, ಕುಟುಂಬಸ್ಥರ ನಡುವಿನ ಜಗಳ ಬುದಿ ಮುಚ್ಚಿದ ಕೆಂಡದಂತಿದೆ.
ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರಿಂಲಾಲ್ ತೆಲಗಿ ಪರ್ವ ಅಂತ್ಯಗೊಂಡಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನೆ ಬುಡಮೇಲು ಮಾಡಿ ಸತತ ೧೩ ವರ್ಷಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಅಲ್ಲಿಂದಲೇ ಆಸ್ಪತ್ರೆ ಸೇರಿ ಕೊನೆಗೆ ಸಾವಿನ ಬೆನ್ನು ಹತ್ತಿ ಹೋದ ಕರಿಂಲಾಲ್ ತೆಲಗಿ ಮನೆಯಲ್ಲಿಗ. ಸೂತಕದ ಛಾಯೆ ಬದಲು, ಕೋಲಾಹಲದ ವಾತಾವರಣ ನಿರ್ಮಾಣವಾಗಿದೆ. ಕರಿಂಲಾಲ್ ಶವವನ್ನ ಇಂದು ಬೆಳಿಗ್ಗೆ ಬೆಳಗಾವಿ ಜಿಲ್ಲೆ ಖಾನಾಪುರದ ಅವರ ಮನೆಗೆ ತಂದಾಗ ಕರಿಂಲಾಲ್ ಮಗಳು ಸನಾ ಮತ್ತು ಅಳಿಯ ಇರ್ಫಾನ್ ಸೇರಿ, ಕರಿಂಲಾಲ್ ತಮ್ಮ ಅಜಿಂ ತೆಲಗಿಯನ್ನ ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ಶುರುವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಕೊನೆಗೆ ಜಮಾತ್ ದವರ ಮದ್ಯಸ್ಥಿಕೆಯಿಂದ ತಿಳಿಯಾಯಿತು.
ಇನ್ನು ಮೊದಲು ಆರಂಭಗೊಂಡ ಗಲಾಟೆ ಸ್ವಲ್ಪ ಹೊತ್ತು ತಣ್ಣಗಾಗಿತ್ತು. ನಂತರ ಅಜಿಂ ತೆಲಗಿ ತನ್ನ ಅಣ್ಣ ಅಬ್ದುಲ್ ಕರಿಂಲಾಲ್ ತೆಲಗಿ ಹೆಣವನ್ನ ನೋಡೊಕೆ ಬಂದಾಗ ಮತ್ತೆ ಗಲಾಟೆ ಶುರುವಾಯ್ತು. ನಮ್ಮ ಮಾವ ಕಷ್ಟ ಕಾಲದಲ್ಲಿದ್ದಾಗ ಯಾರು ಸಮೀಪ ಬಂದಿಲ್ಲ. ಆದ್ರೆ ಈಗೆಕೆ ನೀವ್ ಬಂದ್ರಿ.. ಎಂದು ಕರಿಂಲಾಲ್ ಅಳಿಯ ಇರ್ಫಾನ್ ಕೇಳಿದ್ದಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪೊಲೀಸರ ಸಮ್ಮುಖದಲ್ಲೇ ಒಬ್ಬರಿಗೊಬ್ಬು ಹೊಡೆದಾಡಿಕೊಂಡ್ರು. ನಂತರ ಮತ್ತೆ ಮದ್ಯ ಪ್ರವೇಶ ಮಾಡಿದ ಜಮಾತ್ ಮುಖಂಡರು ಮೊದಲು ಅಂತ್ಯಕ್ರಿಯೆ ಮಾಡಿ. ನಂತರ ನಿಮ್ಮ ಕುಟುಂಬದ ವಿಚಾರವನ್ನು ಸರಿ ಪಡ್ಸ್ಕೊಳ್ಳಿ ಅಂತ ಗಲಾಟೆಗೆ ವಿರಾಮವಿಟ್ರು.
ಒಟ್ನಲ್ಲಿ ಕರಿಂಲಾಲ್ ತೆಲಗಿ ಹೆಣವನ್ನ ಮನೆಲಿಟ್ಕೊಂಡು ಹೆಣದ ಮುಂದೆಯೇ ಸಂಬಂಧಿಕರು ಆಸ್ತಗಾಗಿ ಹೊಡೆದಾಡಿಕೊಂಡಿದ್ದು ವಿಪರ್ಯಾಸವಾದ್ರೆ… ವಿವಾದದ ನಡುವೆಯೇ ಕರಿಂಲಾಲ್ ತೆಲಗಿ ಅಂತ್ಯಸಂಸ್ಕಾರ ನೆರವೇರಿತು