ಬೆಳಗಾವಿ- ಜನ ಕೆಲವೊಮ್ಮೆ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ,ಅವರ ನಡತೆ ನೋಡಿದ್ರೆ ನಗಬೇಕೋ,ಅಳಬೇಕೋ ಅನಿಸುತ್ತದೆ.ಬೆಳಗಾವಿಯಲ್ಲಿ ಹತ್ತರ ಕ್ವಾಯಿನ್ ಹಿಡಿದುಕೊಂಡು ಗಲ್ಲಿ,ಗಲ್ಲಿ,ಅಲೆದಾಡಿದೆ,ಅಂಗಡಿಯಿಂದ ಮೊತ್ತೊಂದು ಅಂಗಡಿಗೆ ಅಲೆದಾಡಿದ್ರೂ,ಇಲ್ಲಾ ಇದು ನಡೆಯೋದಿಲ್ಲಾ,ಹತ್ತರ ನೋಟು ಕೊಡಿ ಅಂತಾರೆ,ಬೆಳಗಾವಿಯ ವ್ಯಾಪಾರಿಗಳು
ಯಾಕಂದ್ರೆ ಹತ್ತರ ಕ್ವಾಯಿನ್ ಗಳನ್ನು ಗಿರಾಕಿಗಳು ತಗೋಳುದಿಲ್ಲಾ ಅಂತಾ,ಅಂಗಡಿಕಾರರು ತಗೋಳುದಿಲ್ಲ,ಹೀಗಾಗಿ ಸರ್ಕಾರದ ಅಧಿಕೃತ ನಾಣ್ಯಕ್ಕೆ ಈಗ ಬೆಳಗಾವಿಯಲ್ಲಿ ಬೆಲೆ ಇಲ್ಲದಂತಾಗಿದೆ.ಈಗಿನ ಕಾಲದಲ್ಲಿ ದುಡ್ಡಿಗೆ ಎಲ್ಲಿಲ್ಲದ ಬೆಲೆ. ಆದರೆ, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ ಮಾನ್ಯತೆ ಇದ್ದರೂ, ಬೆಳಗಾವಿ ಮಾರುಕಟ್ಟೆಯಲ್ಲಿ 10 ರೂ. ನಾಣ್ಯಕ್ಕೆ ಬೆಲೆ ಇಲ್ಲದಂತಾಗಿದೆ.
ಸದ್ಯ ಬ್ಯಾಂಕುಗಳಲ್ಲಿ 10 ರೂ. ಮುಖಬೆಲೆಯ ಹೊಸ ನೋಟುಗಳು ಬರುತ್ತಿಲ್ಲ. ಹಾಗಾಗಿ 10 ರೂ. ಮುಖಬೆಲೆಯ ನಾಣ್ಯಗಳನ್ನೇ ಬ್ಯಾಂಕ್ ಗ್ರಾಹಕರಿಗೆ ನೀಡಲಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ಅದನ್ನು ಸ್ವೀಕರಿಸುತ್ತಲೇ ಇಲ್ಲ.ಈ ನಾಣ್ಯ ಚಲಾವಣೆಯಲ್ಲೇ ಇಲ್ಲ. ಇದು ಬ್ಯಾನ್ ಆಗಿದೆ, ನಾವು ಸ್ವೀಕರಿಸುವುದಿಲ್ಕ ಎನ್ನುತ್ತಿದ್ದಾರೆ. ಇದರಿಂದಾಗಿ ಲೆಕ್ಕಾಚಾರದ ಮೇಲೆ ಹಣ ಇಟ್ಟುಕೊಂಡು ತರಕಾರಿ, ಕಿರಾಣಿ ಖರೀದಿಗೆ ಹೋದ ಗ್ರಾಹಕರು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ.ಅತ್ತ ಕೈಯಲ್ಲಿ ಹೆಚ್ಚಿನ ಹಣ ಕೂಡ ಇಲ್ಲದ್ದರಿಂದ ಅರ್ಧಂಬರ್ಧ ಖರೀದಿ ಮಾಡಿ ಮನೆಗೆ ವಾಪಸಾಗುತ್ತಿದ್ದಾರೆ.
ವ್ಯಾಪಾರಿಗಳ ಈ ಧೋರಣೆ ಗ್ರಾಹಕರಲ್ಲಿ ಬೇಸರ ಮೂಡಿಸಿದೆ. ಬ್ಯಾಂಕಿನ ಅಧಿಕಾರಿಗಳಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವದು ಅಗತ್ಯವಾಗಿದೆ.