ಬೆಳಗಾವಿ- ಮನೆಗೆ ಕೀಲಿ ಹಾಕಿಕೊಂಡು ತನ್ನ ಕಿರಾಣಿ ಅಂಗಡಿ ತೆರೆಯಲು ಹೋದ ಅಂಗಡಿಯ ಮಾಲೀಕನೊಬ್ಬ ಅಂಗಡಿಯ ಕೀ ಮನೆಯಲ್ಲಿ ಮರೆತು ಬಂದಿದ್ದ ಕೀ ತರಲು ಮನೆಗೆ ಮರಳಿದ ಆತನಿಗೆ ಅಚ್ಚರಿ ಕಾದಿತ್ತು
ಮನೆಗೆ ಹೋಗುವಷ್ಠರಲ್ಲಿ ಮನೆಬಾಗಿಲದ ಕೀಲಿ ಮುರದಿತ್ತು ಎಚ್ಚರಗೊಂಡ ಮನೆ ಮಾಲೀಕ ಸಾವಧಾನದಿಂದ ಮನೆಯಲ್ಲಿ ಹೆಜ್ಜೆ ಹಾಕಿದಾಗ ಮನೆಯಲ್ಲಿ ಕರೆಯದೇ ಬಂದ ಅತಿಥಿಯೊಬ್ಬ ಮನೆಯ ಟ್ರೇಝರಿ ಲಾಕ್ ಮುರಿಯುವಲ್ಲಿ ಬ್ಯಜಿಯಾಗಿದ್ದ ಆತನನ್ನು ಲಬಕ್ ಎಂದು ಹಿಡಿಯಲು ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡು ಮನೆಯ ಕಂಪೌಂಡ್ ಗೋಡೆ ಜಿಗಿಯುವಷ್ಟರಲ್ಲಿ ಮನೆ ಮಾಲೀಕ ಕಳ್ಳ..ಕಳ್ಳ ಎಂದು ಚೀರಾಡಿದಾಗ ನೆರೆಹೊರೆಯವರು ಸೇರಿ ಆ ಕಳ್ಳನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ
ಈ ಘಟನೆ ಬೆಳಗಾವಿಯ ಮಹಾಂತೇಶ ನಗರದಲ್ಲಿ ನಡೆದಿದೆ ಮಹಾಂತೇಶ ನಗರದ ನಿವಾಸಿ ವಿಶ್ವನಾಥ,ಚನ್ನಬಸಪ್ಪ ವೀಜಾಪೂರ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ ಸಂಕೇಶ್ವರದ ಕಮತೆ ಗಲ್ಲಿಯ ಮೆಹಬೂಬ ಅನ್ವರ್ ಇನಾಮದಾರ ಈಗ ಪೋಲೀಸರ ಅತಿಥಿಯಾಗಿದ್ದಾನೆ
ಕಳೆದ ಒಂದು ತಿಂಗಳಿನಿಂದ ಬೆಳಗಾವಿ ನಗರದಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನದ ಪ್ರಕರಣಗಳು ನಡೆಯುತ್ತಿವೆ ಪೋಲೀಸರ ಬಲೆಗೆ ಕಳ್ಳರು ಬೀಳುತ್ತಿಲ್ಲ ಆದರೆ ಅಚ್ಚರಿ ಎನ್ನುವ ಹಾಗೆ ಚಾಲಾಕಿ ಕಳ್ಳ ಮನೆಯ ಮಾಲೀಕನ ಕೈಗೆ ಸಿಕ್ಕಿರುವದು ಆಕಸ್ಮಿಕ
ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳ ಇನಾಮದಾರ ಈಗ ಕಂಬಿ ಎಣಿಸುತ್ತಿದ್ದಾನೆ