ಬೆಳಗಾವಿ-ಬೆಳಗಾವಿ ನಗರದ ಡಾ ಬಿ ಆರ್ ಅಂಬೇಡ್ಕರ್ ರಸ್ತೆಯಲ್ಲಿರುವ ಎ ಡನ್ ಡಿ ಗ್ಲೋಬಲ್ ದೇಸಿ ಅಂಗಡಿ ಸೇರಿದಂತೆ ರವಿವಾರ ಪೇಠೆಯ ಹಲವಾರು ಅಂಗಡಿಗಳ ಸರಣಿ ಕಳ್ಳತನ ನಡೆದಿ
ಬೆಳಗಾವಿಯ ಭೀಮ್ಸ ಮೆಡಿಕಲ್ ಕಾಲೇಜು ಎದುರಿನ ಆರ್ ಎನ್ ಡಿ ದೇಸಿ ಗ್ಲೋಬಲ್ ಅಂಗಡಿಯ ಶೆಟರ್ ಮುರಿದು ಅಂಗಡಿಯಲ್ಲಿರುವ ಬಟ್ಟೆ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಬಟ್ಟೆಗಳನ್ನು ದೋಚಲಾಗಿದೆ
ಸ್ಥಳಕ್ಕೆ ಮಾರ್ಕೆಟ್ ಪೋಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ ಜೊತೆಗೆ ಶ್ವಾನ ದಳವೂ ಸ್ಥಳಕ್ಕೆ ಆಗಮಿಸಿದೆ ಒಟ್ಟು ಎಷ್ಟು ರೂ ಮೊತ್ತದ ಲೂಟಿಯಾಗಿದೆ ಅನ್ನೋದನ್ನ ಅಂದಾಜಿಸಲಾಗುತ್ತಿದೆ
ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆಗೂ ವಿಕೆಂಡ್ ರಾತ್ರಿಯಲ್ಲಿ ಕೈ ಚಳಕ ತೋರಿಸಿದ ಕಳ್ಳರು ಮಾರುಕಟ್ಟೆಯ ಎಂಟು ಅಂಗಡಿಗಳ ಶೆಟರ್ ಕೀಲಿ ಮುರಿದು ಅಂಗಡಿಯಲ್ಲಿನ ನಗದು ಹಣವನ್ನು ದೋಚಲಾಗಿದೆ
ರವಿವಾರ ಪೇಠೆಯಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದೆ ಐದು ಸಾವಿರ ಹತ್ತು ಸಾವಿರ ಹಣ ಕದಿಯೋದು ಇಲ್ಲಿ ಮಾಮೂಲಾಗಿದೆ ಆದರೆ ಶನಿವಾರ ರಾತ್ರಿ ಎಂಟು ಅಂಗಡಿಗಳ ಕಳ್ಳತನ ನಡೆದಿರುವದರಿಂದ ಅಂಗಡೀಕಾರರು ಬೆಚ್ಚಿಬಿದ್ದಿದ್ದಾರೆ
ಕೆಲವು ಅಂಗಡಿಗಳಲ್ಲಿ ಸಿಸಿಟಿವ್ಹ ಅಳವಡಿಸಲಾಗಿತ್ತು ಎನ್ನಲಾಗಿದೆ ಇಲ್ಲಿಯೂ ಮಾರ್ಕೆಟ್ ಠಾಣೆಯ ಪೋಲೀಸರು ದೌಡಾಯಿಸಿ ಚೌಕಾಶಿ ನಡೆಸಿದ್ಸಾರೆ ಒಟ್ಟಾರೆ ವಿಕೆಂಡ್ ಮದ್ಯರಾತ್ರಿ ಖದೀಮರು ಅಂಗಡಿಗಳನ್ನು ಲೂಟಿ ಮಾಡಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ