ಬೆಳಗಾವಿ- ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆಯೊಬ್ಬಳು ಟಿಳಕವಾಡಿಯ ಫರೋಟಾ ಕಾರ್ನರ್ ಎದುರು ರೈಲ್ವೆ ಟ್ರ್ಯಾಕ್ ಮೇಲೆ ರೈಲಿಗೆ ತೆಲೆಯೊಡ್ಡುವ ಪ್ರಯತ್ನದಲ್ಲಿರುವಾಗ ಸ್ಥಳಕ್ಕೆ ಧಾವಿಸಿದ ಟ್ರಾಫಿಕ್ ಪೋಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಬೆಳಗಾವಿಯ ಔಷದಿ ಅಂಗಡಿಯೊಂದರಲ್ಲಿ ನಿದ್ದೆ ಮಾತ್ರೆ ವಿಷಕಾರಿಕ ಔಷಧಿ ಖರೀಧಿದಲು ಹೋಗಿದ್ದಾಳೆ ಇದನ್ನು ಕೊಡಲು ಅಂಗಡೀಕಾರ ನಿರಾಕರಿಸಿ ಮಹಿಳೆಯನ್ನು ಹಿಂಬಾಲಿಸುವಂತೆ ತನ್ನ ಸ್ನೇಹಿತನಿಗೆ ತಿಳಿಸಿದ್ದಾನೆ
ಔಷಧಿ ಅಂಗಡಿಯಲ್ಲಿ ನಿದ್ದೆ ಮಾತ್ರೆಯೂ ಸಿಗಲಿಲ್ಲ ವಿಷಕಾರಿಕ ಔಷಧಿಯೂ ಸಿಗಲಿಲ್ಲ ಅಂತ ಈ ಮಹಿಳೆ ಅಟೋ ಹತ್ತಿ ನೇರವಾಗಿ ಟಿಳಕವಾಡಿಯ ಫರೋಟಾ ಕಾರ್ನರ್ ಬಳಿ ರೈಲಿನ ದಾರಿ ಕಾಯುವ ಸಂಧರ್ಭದಲ್ಲಿ ಇತನನ್ನು ಹಿಂಬಾಲಿಸಿ ಬಂದ ವ್ಯೆಕ್ತಿ ಟ್ರಾಫಿಕ್ ಪೋಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಟ್ರಾಫಿಕ್ ಸೌಥ್ ವಿಭಾಗದ ಪೋಲೀಸರು ರೈಲು ಬರುವ ಮೊದಲೇ ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ
ಔಷಧಿ ಅಂಗಡಿ ಮಾಲೀಕನ ಸಮಯ ಪ್ರಜ್ಞೆಯಿಂದಾಗಿ ನೊಂದ ಜೀವವೊಂದು ಉಳಿದಿದೆ
ಪೋಲೀಸರು ಮಹಿಳೆಯನ್ನು ರಕ್ಷಿಸಲು ಸ್ಥಳಕ್ಕೆ ದೌಡಾಯಿಸಿದ ಸಂಧರ್ಭದಲ್ಲಿ ಜನಜಂಗುಳಿಯೇ ಅಲ್ಲಿ ನೆರದಿತ್ತು
ಆತ್ಮ ಹತ್ಯೆ ಮಾಡಿಕೊಳ್ಳಲು ಬಂದ ಮಹಿಳೆಗೆ ತಿಳುವಳಿಕೆ ಹೇಳಿ ಪೋಲೀಸರು ಮಹಿಳೆಯನ್ನು ಅವಳ ಮನೆಗೆ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ
ಟಿಳಕವಾಡಿಯ ರೇಲ್ವೆ ಟ್ರ್ಯಾಕ್ ಸುಸ್ಸಾಯಿಡ್ ಪಾಯಿಂಟ್ ಆಗುತ್ತಿದ್ದು ಈ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ