ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪು ಜಯಂತಿಯನ್ನು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಆಚರಿಸಲಾಯಿತು
ನಗರದ ಕುಮಾರ ಗಂಧರ್ವ ಭವನದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪಾಚರಣೆ ಮಾಡುವ ಮೂಲಕ ಟಿಪ್ಪು ಜಯಂತಿಗೆ ಚಾಲನೆ.ನೀಡಲಾಯಿತು
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಫಿರೋಜ್ ಸೇಠ್ ರಿಂದ ಚಾಲನೆ. ಜಿಲ್ಲಾಧಿಕಾರಿ ಎನ್ ಜಯರಾಮ್. ನಗರ ಪೋಲಿಸ್ ಆಯಕ್ತ ಕೃಷ್ಣ ಭಟ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು
ಜಿಲ್ಲಾಧಿಕಾರಿ ಎನ್ ಜೈರಾಮ ಪ್ರಸ್ಥಾವಿಕವಾಗಿ ಮಾತನಾಡಿ ಹಜರತ ಟಿಪ್ಪು ಸುಲ್ತಾನರ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ರವಿಕಾಂತೇಗೌಡ ಮಾತನಾಡಿ ಹಜರತ ಟಿಪ್ಪು ಸುಲ್ತಾನರು ಸರ್ವ ಧರ್ಮಿಯ ಸಂಹಿಷ್ಣತೆಯ ಹೃದಯ ವೈಶಾಲ್ಯ ಮನೋಭಾವ ಹೊಂದಿರುವ ರಾಜರಾಗಿದ್ದರು ಮಹಾತ್ಮಾ ಗಾಂಧಿ ಅವರು ಬರೆದ ಯಂಗ್ ಇಂಡಿಯಾ ಪುಸ್ತಕದಲ್ಲಿ ಟಿಪ್ಪು ಸುಲ್ತಾನರ ಆಡಳಿತವನ್ನು ಹೊಗಳಿದ್ದಾರೆ
ಶ್ರೀರಂಗ ಪಟ್ಟಣದಲ್ಲಿರುವ ಟಿಪ್ಪು ಅರಮನೆಯ ಎದುರಿನಲ್ಲಿ ಟಿಪ್ಪುಮಾತನಾಡುತ್ತೇನೆ ಎ ಶ್ರೀರಂಗನ ದೇವಸ್ಥಾನ ಟಿಪ್ಪು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಬ್ರಿಟೀಷರು ಬರೆದ ಇತಹಾಸ ನಂಬಿ ಕೆಲವರು ಟಿಪ್ಪು ಇತಿಹಾಸವನ್ನು ಅನುಮಾನದಿಂದ ನೋಡುವದು ಸರಿಯಲ್ಲ ಬ್ರಿಟೀಷರ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ ಮಹಾನ್ ಹೋರಾಟಗಾರ ಟಿಪ್ಪು ಸುಲ್ತಾನ ಎಂದು ರವಿಕಾಂತೇಗೌಡ ಅಭಿಪ್ರಾಯ ಪಟ್ಟರು
ಶಾಸಕ ಫಿರೋಜ್ ಸೇಠ ಮಾತನಾಡಿ ಟಿಪ್ಪ ಸುಲ್ತಾನರ ಜಯಂತಿ ಆಚರಣೆಗೆ ಪೋಲೀಸರು ಗಲ್ಲಿ ಗಲ್ಲಿಗಳಲ್ಲಿ ಕಡಿವಾಣ ಹಾಕಿರುವದರಿಂದ ಟಿಪ್ಪು ಅಭಿಮಾನಿಗಳಿಗೆ ನಿರಾಶೆಯಾಗಿದೆ ಇದರ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ ಎಂದು ಸೇಠ ಎಚ್ಚರಿಕೆ ನೀಡಿದರು