ಬೆಳಗಾವಿ- ನಗರದ ಕ್ಯಾಂಪ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಆರಂಭ ವಾದ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರ ಈಗ ಕ್ರಿಯಾಶೀಲವಾಗಿದ್ದು ನಗರದಲ್ಲಿ ಟ್ರಾಫಿಕ್ ರೂಲ್ಸ ಗಳನ್ನು ಉಲ್ಲಂಘಿಸಿದ 500 ಕ್ಕೂಹೆಚ್ಚು ವಾಹನ ಸವಾರರ ಮನೆಗೆ ದಂಡದ ನೋಟೀಸ್ ರವಾನೆ ಆಗಿದೆ
ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರದಲ್ಲಿ ದೊಡ್ಡ ಸ್ಕ್ರೀನ್ ಇದೆ ನಗರದಲ್ಲಿ ಅಳವಡಿಸಲಾಗಿರುವ 90 ಕ್ಯಾಮರಾಗಳ ದೃಶ್ಯಗಳನ್ನು ಕೇಂದ್ರದಲ್ಲಿ ಹತ್ತಕ್ಕೂ ಹೆಚ್ಚು ಜನ ಪೋಲೀಸರು ನಿರಂತರವಾಗಿ ನೋಡುತ್ತಾರೆ ಹೆಲ್ಮೆಟ್ ಹಾಕಿಕೊಳ್ಳದ,ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವ ಟ್ರಿಪಲ್ ಸೀಟ್ ಸವಾರಿ ಮಾಡುವದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿ ಪೋಲೀಸರ ಕಣ್ಣು ತಪ್ಪಿಸಿ ಹೋದ , 500 ಕ್ಕೂ ಹೆಚ್ಚು ಜನರ ಮೇಲೆ ಕ್ಯಾಮರಾ ನೋಡಿ ಕೇಸ್ ಜಡಿಯಲಾಗಿದೆ
ಬೆಳಗಾವಿ ಸುದ್ಧಿ ಜೊತೆ ಮಾತನಾಡಿದ ಟ್ರಾಫಿಕ್ ಎಸಿಪಿ ಶಂಕರ ಮಾರಿಹಾಳ ಈಗ 500 ಕ್ಕು ಹೆಚ್ಚು ಜನರ ಮೇಲೆ ಕೇಸ್ ಹಾಕಲಾಗಿದೆ ಕ್ಯಾಮರಾ ದೃಶ್ಯಗಳನ್ನು ನೋಡಿ ವಾಹನಗಳ ನಂಬರ್ ಆಧರಿಸಿ ವಾಹನ ಯಾರ ಹೆಸರಿನಲ್ಲಿ ಇದೆಯೋ ಅವರ ಮನೆಗೆ ದಂಡದ ನೋಟೀಸ್ ರವಾನೆ ಮಾಡಲಾಗಿದೆ ಎಂದರು
ನಗರದಲ್ಲಿ ಇನ್ನು ಮುಂದೆ ಟ್ರಾಫಿಕ್ ರೂಲ್ಸಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ನಿಷೇಧಿತ ಸ್ಥಳಗಳಲ್ಲಿ ವಾಹನ ಪಾರ್ಕ ಮಾಡಿದವರ ಮನೆಗೆ ದಂಡದ ಪಾವತಿ ಬರೋದು ಗ್ಯಾರಂಟಿ
ತೆಲೆ ಬಾಚ್ಕೊಳ್ಳಿ ಹೆಲ್ಮೆಟ್ ಹಾಕೊಳ್ಳಿ ಲೈಸನ್ಸ ಇಟ್ಕೊಳ್ಳಿ…