Breaking News

ಗೆದ್ರೆ ಹಣ…ಸೋತ್ರೆ ಹೆಣ….! ಇದನ್ನು ನೋಡಲೇ ಬೇಕು ಬೆಳಗಾವಿಯ ಜನ…!!

ಬೆಳಗಾವಿ- ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ತುತ್ತಾಗಿ ತಮ್ಮ ಗೆಳೆಯರೇ ಹಾಳಾಗುತ್ತಿರುವದನ್ನು ಗಮನಿಸಿದ ಬೆಳಗಾವಿಯ ಹುಡುಗರು ಬೆಟ್ಟಿಂಗ್ ಯಾವ ರೀತಿ ನಡೆಯುತ್ತಿದೆ ಅದಕ್ಕೆ ಜನ ಯಾವ ರೀತಿ ಹಾಳಾಗುತ್ತಿದ್ದಾರೆ ಅನ್ನೋದನ್ನ ಒಂದು ಕಿರುಚಿತ್ರದ ಮೂಲಕ ತೋರಿಸಿದ್ದಾರೆ

ಕೇವಲ ಇಪ್ಪತ್ತು ನಿಮಿಷದ ಟ್ವೆಂಟಿ- ಟ್ವೆಂಟಿ ಎಂಬ ಕಿರುಚಿತ್ರದ ಮೂಲಕ ಬೆಟ್ಟಿಂಗ ಜಾಲವನ್ನು ಜಾಲಾಡಿಸಿದ್ದಾರೆ ಬೆಟ್ಟಿಂಗ್ ಚಟಕ್ಕೆ ಬಿದ್ರೆ.. ಗೆದ್ರೆ..ಹಣ ಸೋತ್ರೆ ಹೆಣ ಎನ್ನುವ ಸಂದೇಶ ನೀಡಿದ್ದಾರೆ
ಬೆಳಗಾವಿಯ ಗಲ್ಲಿ ಹುಡುಗರು ಸೇರಿಕೊಂಡು ತಮ್ಮ ಪಾಕೇಟ್ ಮನಿಯಿಂದ ಟ್ವೆಂಟಿ ಟ್ವೆಂಟಿ ಎಂಬ ಕಿರು ಚಿತ್ರವನ್ನು ತಯಾರಿಸಿ u tube ಗೆ ಬಿಡುಗಡೆ ಮಾಡಿದ್ದಾರೆ
ಬೆಳಗಾವಿಯ ಸಣ್ಣ ಪುಟ್ಟ ವ್ಯಾಪಾರಿಗಳು ಅಟೋ ಚಾಲಕರು ದಿನ ನಿತ್ಯ ದುಡಿಮೆ ಮಾಡಿ ಹಣ ಗಳಿಸುವ ಅದೆಷ್ಟೋ ಅಮಾಯಕರು ಬೆಟ್ಟಿಂಗ್ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ ಅನ್ನೋದನ್ನ ಬೆಳಗಾವಿ ಹುಡುಗರು ಕಿರುಚಿತ್ರದಲ್ಲಿ ತೋರಿಸಿದ್ದಾರೆ
ಈ ಕಿರು ಚಿತ್ರದ ಇನ್ನೊಂದು ವಿಶೇಷತೆ ಏನೆಂದರೆ ಈ ಕಿರು ಚಿತ್ರ ನಿರ್ಮಿಸಲು ಯಾರು ಯಾರು ಧನ ಸಹಾಯ ಮಾಡಿದ್ದಾರೆಯೋ ಅವರೇ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ
ಅದೆಷ್ಟೋ ಜನ ನಿರ್ಮಾಪಕರು ಹಣ ಗಳಿಸಲು ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸುತ್ತಾರೆ ಆದರೆ ಬೆಳಗಾವಿಯ ಹುಡುಗರು ಬೆಳಗಾವಿ ಬೀಟ್ಸ ಎನ್ನುವ ಬಳಗ ಕಟ್ಟಿಕೊಂಡು ತಮ್ಮ ಗೆಳೆಯರಿಗಾಗಯೇ ಈ ಚಿತ್ರ ನಿರ್ಮಿಸಿ ಗೆಳೆಯರೇ ಬೆಟ್ಟಿಂಗ್ ಚಟಕ್ಕೆ ಬೀಳಬೇಡಿ ಬಿದ್ರೆ ಯಾವ ರೀತಿ ಸಂಸಾರ ಹಾಳಾಗುತ್ತದೆ ಎನ್ನುವ ಕಳಕಳಿಯನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ

ಬೆಟ್ಟಿಂಗ್ ಯಾವ ರೀತಿ ನಡೆಯುತ್ತದೆ ಅದಕ್ಕೆ ಯುವಕರು ಯಾವ ರೀತಿ ಬಲಿಯಾಗುತ್ತಿದ್ದಾರೆ ಎನ್ನುವ ಕರಾಳ ಕಥೆಯನ್ನ ಹೆಣೆದಿರುವ ಬೆಳಗಾವಿ ಬೀಟ್ಸನ ಹುಡುಗರು ಅದ್ಭುತವಾಗಿ ನಟಿಸಿದ್ದಾರೆ ಈ ಕಿರು ಚಿತ್ರ ತಂಡದ ರೂವಾರಿ ಶ್ರೀ ಕಾಕಾ ಎಮ್ನುವ ಹೆಸರಿನಿಂದ ಚಿರಪರಿಚಿತ
U tube ಅಂತರ್ಜಾಲ ದಲ್ಲಿರುವ ಈ ಚಿತ್ರವನ್ನು ನೀವು ಒಮ್ಮೆ ನೋಡಲೇ ಬೇಕು ಬೆಳಗಾವಿ ಹುಡುಗರ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಈ ಹುಡುಗರಿಗೆ ಪ್ರೋತ್ಸಾಹ ನೀಡಬೇಕು ಎನ್ನುವದು ನನ್ನ ಮನವಿ
ಬೆಳಗಾವಿಯ ಈ ಹುಡುಗರು ನಿರ್ಮಿಸಿರುವ ಟ್ವೆಂಟಿ- ಟ್ವೆಂಟಿ ಕಿರು ಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *