ಬೆಳಗಾವಿ- ಉದ್ದವ ಠಾಕ್ರೆ ಶಿವಸೇನೆ ಮುಖ್ಯಸ್ಥ ಇಂದುಕರ್ನಾಟಕ ಗಡಿ ಅಂಚಿನಲ್ಲಿರುವ ಮಹಾರಾಷ್ಟ್ರ ಚಂದಗಡ ತಾಲೂಕಿನ ಸಿನ್ನೋಳ್ಳಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದರು
ಗಡಿ ವಿಚಾರದಲ್ಲಿ ಶಿವಸೇನೆ ವಚನ ನೀಡುತ್ತೇನೆ. ಗಡಿ ಇರೋದು ನಮ್ಮ ದೇಶಕ್ಕೆ ರಾಜ್ಯಗಳಿಗಲ್ಲ
ಮರಾಠಿ ಭೂಭಾಗ ಪ್ರದೇಶ ನಮ್ಮದು.
ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರದ್ದು ಎಂದು ಹೇಳುವ ಮೂಲಕ ಉದ್ಧವ ಠಾಕ್ರೆ ಗಡಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ
ಮರಾಠಿ ಭೂಭಾಗ ಪ್ರದೇಶ ಮಹಾರಾಷ್ಟ್ರ ಕ್ಕೆ ಸೇರಬೇಕು.ನೀವು ನನಗೆ ಆಶಿರ್ವಾದ ಮಾಡ್ಬೇಕು.ಶಿವಸೇನೆ ಮಂತ್ರಿಗಳು, ಶಾಸಕರು ಗಡಿ ಮರಾಠಿಗ ಬೆನ್ನಿಗೆ ನಿಲ್ಲಲಿದ್ದಾರೆ ಎಂದ ಉದ್ದವ ಠಾಕ್ರೆ. ಹೇಳಿದರು
ಉದ್ದವ ಠಾಕ್ರೆ ಗೆ ಜೈಕಾರ ಹಾಕಿ ಬೆಳಗಾವಿ, ನಿಪ್ಪಾಣಿ ಸೇರಿ ಮರಾಠಿ ಪ್ರದೇಶಗಳು ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕೆಂದು ನಾಡದ್ರೋಹಿಗಳು ಘೋಷಣೆ ಕೂಗಿದರು
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಮೇಯರ್ ಸಂಜೋತಾ ಬಾಂದೇಕರ ನಗರ ಸೇವಕರಾದ ಪಂಡರಿ ಪರಬ ,ಸರೀತಾ ಪಾಟೀಲ ಮೇಯರ್ ಜತೆ ಅನೇಕ ಎಂಇಎಸ ಮುಖಂಡರು ಉದ್ಧವ ಠಾಕ್ರೆ ಅವರನ್ನು ಭೇಟಿಯಾಗಿ ಕರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ