ಬೆಳಗಾವಿ- ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಉಮೇಶ್ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ವಿಚಾರವನ್ನು ಉಮೇಶ್ ಕತ್ತಿ ಪದೇ ಪದೇ ಪ್ರಸ್ತಾಪ ಮಾಡಿ ಟೀಕೆಗೆ ಗುರಿಯಾಗುತ್ತಿರುವದು ಹೊಸದೇನಲ್ಲ, ಮಿನಿಸ್ಟರ್ ಉಮೇಶ್ ಕತ್ತಿ ಈಗ ಮತ್ತೆ ರಾಜ್ಯ ವಿಭಜಿಸುವ ವಿಚಾರವನ್ನು ಪ್ರಸ್ತಾಪ ಮಾಡಿ ಮತ್ತೆ ಹಲವಾರು ಜನ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಾಯಕರ ಆಕ್ರೋಶ
ಸಚಿವ ಅಶ್ವತ್ಥ ನಾರಾಯಣ ಅವರು ಉಮೇಶ್ ಕತ್ತಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸುವದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಿಎಂ ಬೊಮ್ಮಾಯಿ ಅವರು ಉಮೇಶ್ ಕತ್ತಿ ಅವರ ಹೇಳಿಕೆ ವ್ಯಯಕ್ತಿಕ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ ಉಮೇಶ್ ಕತ್ತಿ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ,ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದು….
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಸಚಿವ ಉಮೇಶ ಕತ್ತಿ ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ದೇಶದಲ್ಲಿ 50 ರಾಜ್ಯಗಳನ್ನು ಮೋದಿ ಮಾಡಲಿದ್ದಾರೆ. ಇದರಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತದೆ. ಇದು ಚಿಂತನೆ ನಡೆಯುತ್ತಿದೆ ಎಂದು ಉಮೇಶ ಕತ್ತಿ ಹೇಳಿಕೆ ವೈಯಕ್ತಿಕ. ಇಂತಹ ಚಿಂತನೆಗಳು ನಡೆದಿಲ್ಲ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ದೀನ ದಲಿತರು, ಅಲ್ಪಸಂಖ್ಯಾತರ ಮೇಲೆ ರಾಜಕೀಯ ಮಾಡಿದ್ದರು. ಬಿಜೆಪಿ ಸಾಮಾಜಿಕ ಭದ್ರತೆಯ ಮೇಲೆ ರಾಷ್ಟ್ರ ಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿಸಿ ಮಾದರಿಯಾಗಿದೆ.