ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಉಮೇಶ್ ಕತ್ತಿ ಯವರಗೂ ಇದೆ….!!!!
ಬೆಳಗಾವಿ- ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಗೆ ನಿಖಿಲ್ ಎಲ್ಲದಿಯಪ್ಪಾ ಎಂದು ಕೇಳಿದ ಸಂಭಾಷಣೆ ಕನ್ನಡ ಸಿನೆಮಾದ ಟೈಟಲ್ ಆಗುವಷ್ಟರ ಮಟ್ಟಿಗೆ ಪ್ರಚಾರ ಪಡೆದುಕೊಂಡಿದೆ
ಎಲ್ಲ ಅಪ್ಪಂದಿರುಗಳು ತಮ್ಮ ಮಕ್ಕಳಿಗೆ ಕುಮಾರಸ್ವಾಮಿ ಅವರ ಸ್ಟೈಲ್ ನಲ್ಲೇ ಕಲಪ್ಪಾ ಎಲ್ಲದಿಯಪ್ಪಾ,ಮಲ್ಲಪ್ಪ ಎಲ್ಲದಿಯಪ್ಪಾ, ರಮೇಶ್ ಎಲ್ಲದಿಯಪ್ಪಾ ಅಂತಾ ಕೇಳಲು ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳಿದ ಹಾಗೆ ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಹಕ್ಕು ನಮ್ಮ ಮಾಜಿ ಮಂತ್ರಿ ಉಮೇಶ್ ಕತ್ತಿ ಅವರಿಗೂ ಇದೆ ಯಾಕಂತೀರಾ…? ಯಾಕಂದ್ರೆ ,ಯಾಕಂದ್ರೆ ನಮ್ಮ ಉಮೇಶ್ ಕತ್ತಿ ಅವರ ಹಿರಿಯ ಮಗನ ಹೆಸರೂ ನಿಖಿಲ್……
ಮುಖ್ಯಮಂತ್ರಿ ಕುಮಾರಸ್ವಾ ಒಬ್ಬ ಜನಸಾಮಾನ್ಯನಿಗೂ ಮಾತಾಡಿಸುವಾಗ ಹೇಳಿ ಬ್ರದರ್ ಕೇಳಿ ಬ್ರದರ್ ಅಂತಾ ನಯವಾಗಿ ಕೇಳ್ತಾರೆ ಅದೇ ರೀತಿ ಅವರು ಸಹಜವಾಗಿ ತಮ್ಮ ಮಗನಿಗೆ ನಿಖಿಲ್ ಎಲ್ಲಿದಿಯಪ್ಪಾ ಎಂದು ಕೇಳಿ ಸುದ್ಧಿ ಮಾಡಿದ್ರು ಕರ್ನಾಟಕದ ಹುಡುಗರು ರಥೋತ್ಸವದಲ್ಲಿ ಖಾರಿಕ್ ಬಾಳೆಹಣ್ಣು ಎಸೆಯುವಾಗ ,ನಿಖಿಲ್ ಎಲ್ಲದಿಯಪ್ಪಾ ….ನಾನು ರಾಮದುರ್ಗ ಜಾತ್ರ್ಯಾಗ ಅದೇನಪ್ಪ ಎಂದು ಘೋಷಣೆ ಹಾಕುವ ಮಟ್ಟಿಗೆ ಎಲ್ಲದಿಯಪ್ಪಾ ಎನ್ನುವ ಡೈಲಾಗು ಫೇಮಸ್ ಆಯ್ತು
ಕುಮಾರಸ್ವಾಮಿ ಅವರ ಭಾಷೆ ದಕ್ಷಿಣ ಕರ್ನಾಟಕ ಶೈಲಿಯದ್ದು ಆದ್ರೆ ಉತ್ತರ ಕರ್ನಾಟಕದ ಶೈಲಿ ಅಂದ್ರೆ ಅದು ಜವಾರಿ ಮಿರ್ಚಿ ಇದ್ಹಂಗೆ ನಮ್ಮ ಉಮೇಶ್ ಕತ್ತಿ ತಮ್ಮ ಪುತ್ರನಿಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ಯಾವ ರೀತಿ ಕೇಳಬಹುದು ಎನ್ನುವ ಚರ್ಚೆ ಈಗ ಶುರುವಾಗಿದೆ ಉತ್ತರ ಕರ್ನಾಟಕದ ಅಪ್ಪಂದಿರುಗಳು ಎಲ್ಲದಿಯಪ್ಪಾ ಅಂತಾ ಕೇಳಲು ಸಾಧ್ಯನಾ..? ಇಲ್ಲಿಯ ಅಪ್ಪಂದಿರುಗಳು ಸ್ವಲ್ಪ ಖಡಕ್ ಭಾಷೆ ಬಳಸ್ತಾರೆ ಅದು ಸಿಟ್ಟಿನಿಂದಲ್ಲ ಪ್ರೀತಿಯಿಂದ ಅದು ಹೇಗಂದ್ರೆ , ಮಕ್ಕಳಿಗೆ ಫೋನ್ ಮಾಡಿ ಎಲ್ಲೆದಿಯೋ..ಹೆಸರು ಪ್ರಸ್ತಾಪಿಸಿದೇ ಹ್ಞೂಂ…ಎಲ್ಲಿ ,ಎಲ್ಲಿ ಹೋಗಿದಿ ಲೇ…..ಏನ್ಮಾಡಾತೀ…ಅಂತಾ ಕೇಳುವದು ಇಲ್ಲಿಯ ಸಂಪ್ರದಾಯ ಆದ್ರೆ ಕುಮಾರಸ್ವಾಮಿ ನಿಖಿಲ್ ಎಲ್ಲಿದಿಯಪ್ಪಾ ಅಂತಾ ಕೇಳಿದ್ಹಾಗಿನಿಂದ ಉಮೇಶ್ ಕತ್ತಿ ಅವರಿಗೂ ಇದೇ ಸ್ಟೈಲ್ ನಲ್ಲಿ ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳುವ ಆಸೆಯಾಗಿರಬಹುದು ಒಂದು ವೇಳೆ ನಿಜವಾಗಿಯೂ ಉಮೇಶ್ ಕತ್ತಿ ತಮ್ಮ ಪುತ್ರ ನಿಖಿಲ್ ಗೆ ಫೋನ್ ಮಾಡಿ ನಿಖಿಲ್ ಎಲ್ಲದಿಯಪ್ಪಾ ಅಂತಾ ಕೇಳಿದ್ರೆ, ನಿಖಿಲ್ ನಾನು ಉತ್ತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಾ ಇದೇನಪ್ಪ ಅಂತ ಹೇಳುವ ಕಾಲ ದೂರ ಉಳಿದಿಲ್ಲ………!!!!!!!