ಬೆಳಗಾವಿ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ 10+3 ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡದೇ ಇರುವದರಿಂದ ಕೇವಲ ಹತ್ತು ಜನ ಶಾಸಕರಿಗೆ ಮಾತ್ರ ಮಂತ್ರಿ ಭಾಗ್ಯ ಲಭಿಸಿದ್ದು ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ಉಮೇಶ್ ಕತ್ತಿ ಕೊನೆಯ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಔಟ್ ಆಗಿದ್ದಾರೆ
ಮಾಜಿ ಸಚಿವ ಉಮೇಶ್ ಕತ್ತಿ ಅವರು ಸಚಿವರಾಗ್ತಾರೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದರು ಇಂದು ಮದ್ಯಾಹ್ನದವರೆಗೆ ಉಮೇಶ್ ಕತ್ತಿ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಇತ್ತು ಆದರೆ ಸಿಎಂ ಯಡಿಯೂರಪ್ಪ ಅವರ 10+3 ಸೂತ್ರಕ್ಕೆ ತೀವ್ರ ವಿರೋಧ ವ್ಯೆಕ್ತವಾದ ಹಿನ್ನಲೆಯಲ್ಲಿ ಯೋಗೆಶ್ವರ ,ಲಿಂಬಾವಳಿ,ಮತ್ತು ಉಮೇಶ ಕತ್ತಿ ಅವರುಮಂತ್ರಿಯಾಗುವ ಭಾಗ್ಯಕ್ಕೆ ಬ್ರೆಕ್ ಬಿದ್ದಿದೆ.
ಬೆಳಗಾವಿ ಜಿಲ್ಲೆಯ ರಮೇಶ ಜಾರಕಿಹೊಳಿ,ಶ್ರೀಮಂತ ಪಾಟೀಲ ಮಂತ್ರಿಯಾಗುವದು ಖಚಿತವಾಗಿದೆ .ಮುಖ್ಯಮಂತ್ರಿ ಯಡಿಯೂರಪ್ಪ ರಾಜಭವನಕ್ಕೆ ಕಳುಹಿಸಿದ ಪಟ್ಟಿಯಲ್ಲಿ ಇವರಿಬ್ಬರ ಹೆಸರಿದೆ.
ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿರುವ ಮಾಜಿ ಸಚಿವ ಉಮೇಶ್ ಕತ್ತಿ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ.