Breaking News

ನೂರು ಕೋಟಿ ಅನುದಾನದಲ್ಲಿ ಉದ್ಯಮಭಾಗ ಪ್ರದೇಶವನ್ನು ಅಭಿವೃದ್ಧಿಪಡಿಸಿ…ಉದ್ಯಮಿಗಳ ಅವಾಜ್

ಸೌಲಭ್ಯ ವಂಚಿತ ಉದ್ಯಮಭಾಗ…ಪಾಲಿಕೆಯಲ್ಲಿ ಉದ್ಯಮಿಗಳ ಅವಾಜ್…

ಬೆಳಗಾವಿ- ಫೌಂಡ್ರಿ ಉದ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿಯ ಉದ್ಯಭಾಗ ಪ್ರದೇಶ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಕೂಡಲೇ ಈ ಪ್ರದೇಶದ ಅಭಿವೃದ್ಧಿಗೆ ಸರ್ಕಾರದ ನೂರು ಕೋಟಿ ಅನುದಾನದಲ್ಲಿ ಅನುದಾನ ನೀಡುವಂತೆ ಬೆಳಗಾವಿ ಉದ್ಯಮಿಗಳು ಮಹಾನಗರ ಪಾಲಿಕೆಯಲ್ಲಿ ಅವಾಜ್ ಹಾಕಿದ್ದಾರೆ
ಸರ್ಕಾರ ಬಿಡುಗಡೆ ಮಾಡಿರುವ ನೂರು ಕೋಟಿ ರೂ ಅನುದಾನವನ್ನು ಪಾಲಿಕೆ ಅಧಿಕಾರಿಗಳು ಕೇವಲ ಬೆಳಗಾವಿ ಉತ್ತರ ಮತಕ್ಷೇತ್ರದ ಬಡಾವಣೆಗಳ ಅಭಿವೃದ್ಧಿಗೆ ಖರ್ಚು ಮಾಡುವ ಮೂಲಕ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕೈಗಾರಿಕಾ ಪ್ರದೇಶವಾಗಿರುವ ಉದ್ಯಮಭಾಗದ ಅಭಿವೃದ್ದಿಗೆ ನಯಾಪೈಸೆ ಖರ್ಚು ಮಾಡದೇ ಅನ್ಯಾಯ ಮಾಡಿದ್ದಾರೆ ಎಂದು ಉದ್ಯಮಿಗಳು ಮಹಾಪೌರ ಹಾಗು ಪಾಲಿಕೆ ಆಯುಕ್ತರ ಬಳಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ
ಇದಾದ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಉದ್ಯಮಿಗಳು ಉದ್ಯಮಭಾಗ ಪ್ರದೇಶದಲ್ಲಿ ಮೂರು ತಿಂಗಳ ಹಿಂದೆ ಬಸವೇಶ್ವರ ವೃತ್ತದಿಂದ ಪೀರನವಾಡಿ ವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ ಮೂರು ತಿಂಗಳಲ್ಲಿಯೇ ಈ ರಸ್ತೆಯಲ್ಲಿ ತಗ್ಗುಗಳು ಬಿದ್ದಿವೆ ಇಲ್ಲಿ ದಿನನಿತ್ಯ ಕಳ್ಳತನದ ಪ್ರಕರಣಗಳು ನಡೆಯುತ್ತಿವೆ ಪ್ರಕರಣಗಳು ದಾಖಲಾಗುತ್ತಿಲ್ಲ ನೂರು ಕೋಟಿ ರೂ ಅನುದಾನದಲ್ಲಿ ಉದ್ಯಮಭಾಗ ಪ್ರದೇಶದ ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ ಎಂದು ಉದ್ಯಮಿಗಳು ಜಿಲ್ಲಾಧಿಕಾರಿ ಎನ್ ಜಯರಾಮ ಅವರಿಗೆ ಮನವಿ ಅರ್ಪಿಸಿದರು
ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿಗಳು ಮುಂದಿನವಾರ ವಿಶೇಷ ಸಭೆ ಕರೆದು ಉದ್ಯಮಭಾಗ ಪ್ರದೇಶದ ಸಮಸ್ಯೆಗಳ ಕುರಿತು ಚರ್ಚೆ ಮಾಡುವದಾಗಿ ಭರವಸೆ ನೀಡಿದರು
ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಸಂಘದ ಅಧ್ಯಕ್ಷ ಉಮೇಶ ಶರ್ಮಾ,ರೋಹನ ಜವಳಿ, ಶ್ರೀಧರ ಉಪ್ಪೀನ ನಿತೀನ ಲಾಂಡಗೆ ಬಿಎಸ್ ಮಂಜುನಾಥ ಸರನೋಬತ್ ಸೇರಿದಂತೆ ಬೆಳಗಾವಿಯ ಉದ್ಯಮಿಗಳು ಉಪಸ್ಥಿತರಿದ್ದರು

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *