ಬೆಳಗಾವಿ- ರಾಜಕೀಯದಲ್ಲಿ ರಾಜ ಬೇಡವೇ ಬೇಡ ರಾಜಕೀಯ ಪ್ರಜಾಕೀಯ ಆಗಬೇಕು ಪ್ರಜೆಗಳು ಜನಸಾನ್ಯರಲ್ಲ ಅಸಾಮಾನ್ಯರು ಕಾಂತಾ ಕೊಳಕು ಸಿಸ್ಟಂ ಹೋಗ್ಬೇಕು ಕಾಂತಾ..ಹೊಸ ಪಾಲಿಟಿಕ್ಸ ಶುರು ಆಗಬೇಕು ಕಾಂತಾ ,ವಂಡರ್ ಫುಲ್ ಬ್ಯುಟಿಫುಲ್.ಮಾರ್ವಲಸ್ ಐ ಲೈಕ್ ಇಟ್ ಐ ಲೈಕ್ ಇಟ್
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ಡೈಲಾಗ್ ಮೂಲಕ ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ ಈಗ ಹೊಸ ಹೊಸ ವಿಚಾರಗಳನ್ನು ಇಟ್ಟುಕೊಂಡು ಹೊಸ ಪ್ರಜಾಕೀಯ ಕಾನ್ಸೆಪ್ಟ ಇಟ್ಟುಕೊಂಡು ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ
ಶನಿವಾರ ರಾಜಧಾನಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಟ ಉಪೇಂದ್ರ ರಾಜಕಾರಣದ ಹೆಸರಿನಲ್ಲಿ ರಾಜ ಬೇಡ ಪ್ರಜಾಕಾರಣ ಈ ರಾಜ್ಯದಲ್ಲಿ ನಡೆಯಬೇಕು ರಾಜಕೀಯದಲ್ಲಿ ನನಗೆ ಆಸಕ್ತಿ ಇದೆ ಈ ಮೇಲ್ ಮೂಲಕ ಪತ್ರ ಬರೆಯುವ ಮೂಲಕ ಜನ ತಮ್ಮ ಅಭಿಪ್ರಾಯ ಕಳುಹಿಸಿ ಎಲ್ಲರ ಅಭಿಪ್ರಾಯ ಆಲಿಸಿ ಮಂದಿನ ಹೆಜ್ಜೆ ಇಡುವೆ ಎಂದು ಉಪೇಂದ್ರ ಹೇಳಿದ್ದಾರೆ
ಜಾತಿ ಇಲ್ಲದೇ ಹಣ ಇಲ್ಲದೇ ಪ್ರಜಾಕೀಯ ಮಾಡಲು ಸಾಧ್ಯ ಜನ ಬದಲಾವಣೆ ಬಯಸಿದ್ದಾರೆ ಬದಲಾಯಿಸಬಹುದು ಎನ್ನುವ ಆಶಾಭಾವಣೆ ಹೊಂದಿದ್ದೇನೆ ಬದಲಾವಣೆ ಮಾಡಲಿಕ್ಕಾಗದಿದ್ದರೆ ಇಲ್ಲಿ ಇರಬಾರದು ಎಂದು ಉಪೇಂದ್ರ ಹೇಳಿದ್ದಾರೆ
ಬದಲಾಣೆ ಆಗಲಿ ಅಂತ ಸಿನಿಮಾದಲ್ಲಿ ನಾವು ಡೈಲಾಗ್ ಹೊಡೆದಾಗ ಜನ ಅದನ್ನು ಮೆಚ್ಚಿ ಥೇಟರ್ ನಲ್ಲಿ ಚಪ್ಪಾಳೆ ಹೊಡೆಯುತ್ತಾರೆ ಆದರೆ ಬದಲಾವಣೆ ಮಾಡಲು ಯಾರೂ ಬರಬಾರದೇ ಬದಲಾವಣೆ ಮಾಡುವ ಆಶಾಭಾವನೆ ಇಟ್ಟುಕೊಂಡು ಬದಲಾವಣೆ ತರಲು ನಾನು ಪ್ರಯತ್ನ ಮಾಡುತ್ತಿದ್ದೇನೆ ಎನ್ನುವ ಆತ್ಮ ತೃಪ್ತಿ ನನಗಿದೆ ಎಂದು ಉಪೇಂದ್ರ ಹೇಳಿದ್ದಾರೆ
ಜನರ ಆಲೋಚನೆಗಳು ರಾಜಕೀಯಕ್ಕೆ ಬರಬೇಕು ನಾನು ನಾಯಕನೂ ಅಲ್ಲ ..ಸೇವಕನೂ ಅಲ್ಲ ನಾನೊಬ್ಬ ಕಾರ್ಮಿಕ ಅಷ್ಟೇ ಕಾಂತಾ..ಕಾಂತಾ…ಐ ಲೈಕ್ ಇಟ್..ಐ ಲೈಕ್ ಇಟ್…