ಬೆಳಗಾವಿ-ನಾನು ನಾಯಕನೂ ಅಲ್ಲ.ಸೇವಕನೂ ಅಲ್ಲ ಸಂಬಳ ಪಡೆದು ಕೆಲಸ ಮಾಡುವ ಕೂಲಿ ಕಾರ್ಮಿಕ,ಉಳಿದ ಪಕ್ಷಗಳಂತೆ ನಾನು ಪ್ರಣಾಳಿಕೆ ಬಿಡುಗಡೆ ಮಾಡುವದಿಲ್ಲ ಖಾಲಿ ಪೇಪರ್ ನಿಮ್ಮ ಕಯ್ಯಾಗ ಕೊಡ್ತೀನಿ ನಿಮ್ಮ ಸಮಸ್ಯೆ ಏನು ? ನನಗೆ ಬರೆದು ಕೊಡಿ ಅದೇ ನನ್ನ ಪ್ರಣಾಳಿಕೆ ಅಂತಿಯಲ್ಲಾ ,ಕಾಂತಾ..ಕಾಂತಾ….
ಪ್ರಜಾಕೀಯ ಪಕ್ಷದ ಉಪೇಂದ್ರ ಬೆಳಗಾವಿಗೆ ಬಂದು ಖಾಲಿ ಪೇಪರ್ ಬಿಡುಗಡೆ ಮಾಡಿ ಅದೇ ನನ್ನ ಪ್ರಣಾಳಿಕೆ ಎಂದಾಗ ಅಲ್ಲಿದ್ದ ಅವರ ಅಭಿಮಾನಿಗಳು ಶಿಳ್ಳೆ ಹೊಡೆದು ಉಪ್ಪಿಗೆ ಸಪೋರ್ಟ್ ಮಾಡಿದ್ರಲ್ಲಾ ಕಾಂತಾ ..ಕಾಂತಾ
ನೀವು ನನಗೆ ಕೆಲಸ ಕೊಡಿ ನಾನು ಅದನ್ನು ಮಾಡುತ್ತೇನೆ ಅದೇನಾಯ್ತು ಅಂತ ನಿಮಗೆ ರಿಪೋರ್ಟ್ ಕೊಡುತ್ತೇನೆ ಎಂದಾಗ ರಿಪೋರ್ಟರ್ ಒಬ್ರು ಬೆಳಗಾವಿಯ ಸುವರ್ಣ ಸೌಧ ಖಾಲಿ ಇದೆ ರಾಜ್ಯಮಟ್ಟದ ಕಚೇರಿಗಳನ್ನು ಈ ಭೂತ ಬಂಗಲೆಗೆ ಸ್ಥಳಾಂತರ ಮಾಡುವ ಕೆಲಸ ನಿಮಗೆ ಕೊಡುತ್ತೇವೆ ಈ ಕೆಲಸ ಬೆಳಗಾವಿಯಿಂದ ನಿಮಗೆ ಕೊಡಿಸುತ್ತೇವೆ ಇದನ್ನು ಮಾಡಿ ಅಂದಾಗ ಪ್ರಜಾಕೀಯ ಉಪ್ಪಿ ಫಸ್ಟು ನನಗೆ ಅಧಿಕಾರ ಕೊಡಿ ಆಮೇಲೆ ನಿಮ್ಮ ಕೆಲಸ ಮಾಡ್ತೀನಿ ಎಂದ್ರಲ್ಲ ಈ ಉಪ್ಪಿ….ಕಾಂತಾ..ಕಾಂತಾ…
ನಾನು ವಿಧಾನಸೌಧಕ್ಕೆ ಹೋಗೋದಿಲ್ಲ ನೀವು ಹೋಗ್ತೀರ್ರೇನ್ರಿ ಎಂದು ಪಕ್ಕದಲ್ಲೇ ಕುಳಿತಿದ್ದ ಪ್ರಜಾಕೀಯ ಕ್ಯಾಂಡಿಡೇಟ್ ಗೆ ಈ ಉಪ್ಪಿ ಕೇಳಿದಾಗ ಕ್ಯಾಂಡಿಡೇಟ್ ಬೆದರಿ ನೀವು ಹೇಳದ್ಹಂಗ ಕೇಳ್ತೀನಿ ನಾನು ವಿಧಾನಸೌಧಕ್ಕೆ ಹೋಗೋದಿಲ್ಲ ಎಂದು ಕ್ಯಾಂಡೀಡೇಟ್ ಹೇಳಿದ್ನಲ್ಲ ಕಾಂತಾ….
ನಾವೆಲ್ಲ ವಿಧಾನಸೌಧಕ್ಕೆ ಹೋಗೋದಿಲ್ಲ ವಿಧಾನಸೌಧದಲ್ಲಿ ಇರೋರು ಜನರ ಬಳಿಗೆ ಹೋಗಲಿ ವಿಧಾನಸೌಧ ಮನರಂಜನೆಯ ಕೇಂದ್ರ ಆಗಲಿ ಎಂದು ಈ ಉಪೇಂದ್ರ ಹೇಳಿದ್ದನ್ನು ನೋಡಿದ್ರೆ ನಮ್ಮ ವಿಧಾನಸೌಧ ಸ್ಟುಡಿಯೋ ಆಗುತ್ತಾ ಎನ್ನುವ ಭಯ ಕಾಡ್ತಿದೆ ಕಾಂತಾ….