ಬೆಳಗಾವಿ-ರಾಜ್ಯದಲ್ಲಿರುವ ಅನಾಥಾಶ್ರಮ ವೃದ್ದಾಶ್ರಮ ಸೇರಿದಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ಗುರುತಿಸಿ ಉಚಿತವಾಗಿ ಅಕ್ಕಿ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಯುಟಿ ಖಾದರ ತಿಳಿಸಿದರು
ಬೆಳಗಾವಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪತ್ರಿಕಾಗೋಷ್ಠಿ ನಡೆಸಿದ ತಲಾ ಒಬ್ಬ ವ್ಯೆಕ್ತಿಗೆ ತಿಂಗಳಿಗೆ ಹದಿನೈದು ಕೆಜಿಯಂತೆ ಆರು ತಿಂಗಳ ಅಕ್ಕಿಯನ್ನು ಏಕಕಾಲಕ್ಕೆ ಕೊಡುತ್ತೇವೆ ಎಂದು ಸಚಿವರು ತಿಳಿಸಿದರು
ರಾಜ್ಯ ಸರ್ಕಾರ ಪ್ರತಿ ಯುನಿಟ್ ಗೆ ಎರಡು ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಗ್ಯಾಸ್ ಇಲ್ಲದ ಕುಟುಂಬಗಳಿಗೆ ಮೂರು ಲೀಟರ್ ಇದ್ದವರಿಗೆ ಒಂದು ಲೀಟರ್ ಸೀಮೆ ಎಣ್ಣೆ ನೀಡಲಾಗುತ್ತಿದೆ
ಗ್ಯಾಸ್ ಇದ್ದವರು ನಮಗೆ ಸೀಮೆ ಎಣ್ಣೆ ಬೇಡ ಎಂದು ಹೇಳಿದರೆ ಅವರಿಗೆ ಸರ್ಕಾರ ಪುನರ್ ಬೆಳಕು ಯೋಜನೆ ಅಡಿಯಲ್ಲಿ ಅವರಿಗೆ ಉಚಿತವಾಗಿ ಎರಡು ರಿಚಾರ್ಜೆಬಲ್ ಎಲ್ ಈ ಡಿ ಬಲ್ಬಗಳನ್ನು ಕೊಡುತ್ತೇವೆ ಎಂದು ಸಚಿವರು ಹೇಳಿದರು
ಗ್ಯಾಸ್ ಹೊಂದಿರದ ಬಡ ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆ ಅಡಿಯಲ್ಲಿ ಗ್ಯಾಸ್ ಕೊಡುತ್ತಿದ್ದೆವೆ ಬೆಳಗಾವಿ ಜಿಲ್ಲೆಯಲ್ಲಿ ಎಂಟು ಲಕ್ಷ ೫೮ ಸಾವಿರ ಬಿಪಿಎಲ್ ಕಾರ್ಡಗಳಿವೆ ಬಿಪಿಎಲ್ ಕಾರ್ಡಗಾಗಿ ಮತ್ತೆ ಅರ್ಜಿಗಳು ಬಂದರೆ ಅವರ ಅರ್ಜಿಗಳನ್ನು ಪರಶೀಲನೆ ಮಾಡುತ್ತೇವೆ ಅರ್ಹರ ಮನೆಗಳಿಗೆ ಕಾರ್ಡ ಮುಟ್ಟಿಸುತ್ತೇವೆ ಎಂದು ಸಚಿವರು ತಿಳಿಸಿದರು