ಬೆಳಗಾವಿ – ಉತ್ತರ ಕರ್ನಾಟಕ ಪ್ರದೇಶಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಮಠಾಧೀಶರು ಸುವರ್ಣ ವಿಧಾನಸೌಧದ ಎದುರು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಪ್ರತ್ಯೇಕ ರಾಜ್ಯದ ಹೋರಾಟಗಾರರು ಪ್ರತ್ಯೇಕ ರಾಜ್ಯದ ಧ್ವಜ ಪ್ರದರ್ಶಿಸಿ ಗೊಂದಲ ಸೃಷ್ಠಿಸಿದ ಘಟನೆ ನಡೆಯಿತು
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮೀತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಳಶೆಟ್ಟಿ ಪ್ರತ್ಯೇಕ ರಾಜ್ಯದ ಧ್ವಜ ಪ್ರದರ್ಶಿಸಿ ರಾಜಕಾರಣಿಗಳ ಭರವಸೆ ಕೇಳಿ ಕೇಳಿ ಸುಸ್ತಾಗಿದ್ದೇವೆ ಪ್ರತ್ಯೇಕ ರಾಜ್ಯದ ಹೋರಾಟ ಆರಂಭಿಸಲೇಬೇಕು ಎಂದು ಪಟ್ಟು ಹಿಡಿದು ಮಠಾಧೀಶರ ಎದುರು ಪಟ್ಟು ಹಿಡಿದು ಕುಳಿತಾಗ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು
ಪೋಲೀಸರು ಬೋಳಶೆಟ್ಟಿ ಅವರನ್ನು ಬಂಧಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು
ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮಿಜಿ ಮಾತನಾಡಿ
ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯ.
ಕರ್ನಾಟಕ ಅಖಂಡ ರಾಜ್ಯ ನಿರ್ಮಾಣದ ನಂತರ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಗ್ಗೆ ರಾಜಕಾರಣಿಗಳು ವಿಚಿತ್ರ ಹೇಳಿಕೆ ನೀಡಿದ್ದಾರೆ.
ಇವು ಜನಪ್ರತಿನಿಧಿ ಆಡೋ ಮಾತು ಅಲ್ಲ.
ಎಲ್ಲರನ್ನು ಸಮಾನವಾಗಿ ಕಾಣೋ ಭಾವನೆ ಹೊಂದಿರಬೇಕು.
ನೀರಾವರಿ, ಕೃಷಿ ಸೇರಿ ಎಲ್ಲಾ ಕ್ಷೇತ್ರದಲ್ಲಿ ಹಿಂದುಳಿದೆ.
ತಾರತಮ್ಯ ಧೋರಣೆ ತಕ್ಷಣ ನಿಲ್ಲಿಸಬೇಕು.
ಜನರಿಗೆ ಅನ್ಯಾಯ ಆದಾಗ ಸ್ವಾಮಿಜಿಗಳು ಮಠ ಬಿಟ್ಟು ಬರೋದು ಅನಿವಾರ್ಯ.
ಸುವರ್ಣ ಸೌಧ ಜನಪ್ರತಿನಿಧಿಗಳು ಅಲ್ಲ, ಇಲಿ ಹಗ್ಗಣ ಓಡಾಡುತ್ತಿವೆ.
ಆಯ್ಕೆಯಾದ ಕೂಡಲೇ ಶಾಸಕರಿಗೆ ಸನ್ಮಾನ ಮಾಡಬೇಡಿ.
ಉತ್ತರ ಕರ್ನಾಟಕ ಅಭಿವೃದ್ಧಿ ರಾಜೀನಾಮೆ ನೀಡಿದ ಶಾಸಕರಿಗೆ ಸನ್ಮಾನ ಮಾಡಿ.
ತಾಳ್ಮೆ ಪರೀಕ್ಷೆ ಮಾಡಿದ್ರೆ ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ.
ಅಭಿವೃದ್ಧಿ ಮಾಡಿ ಎಂದು ಕಳಕಳಿಯಿಂದ ಮನವಿ.
ಧ್ವಜ ಸಿದ್ದಪಡಿಸಿಕೊಂಡೆ ನಮ್ಮ ಜನ ಕುಳಿತಿದ್ದಾರೆ.
ಪ್ರತ್ಯೇಕ ಭಾವನೆ ಜನರಲ್ಲಿ ಮೂಡಿದೆ.
ತಾಳ್ಮೆ ಪರೀಕ್ಷೆ ಮಾಡಿದ್ರೆ ಪ್ರತ್ಯೇಕ ಕರ್ನಾಟಕ ಆಗಲಿದೆ.
ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ದರಾಮ ಸ್ವಾಮಿಜಿ ಹೇಳಿದರು