ಬೆಳಗಾವಿ- ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು ನಿಜ. ಸಮಗ್ರ ಅಭಿವೃದ್ಧಿ ಸಂಕಲ್ಪ ಇಟ್ಟುಕೊಂಡು ನಂಜುಂಡಪ್ಪ ವರದಿ ಅನುಸಾರವಾಗಿ ಕೆಲಸ ಮಾಡಬೇಕಿತ್ತು ರಾಜಕೀಯ ಬೆಳೆ ಬೇಯಿಸಿಸಿಕೊಳ್ಳಲು ಪ್ರತ್ಯೇಕತೆಯ ಹೇಳಿಕೆ ನೀಡುವದು ಸರಿಯಲ್ಲ ಎಂದು ಕನ್ಬಡ ಸಂಘಟನೆಗಳು ಕಿಡಿ ಕಾರಿವೆ
ಹೋರಾಟ ಮಾಡುವುದು ಸರಿಯಲ್ಲ. ಪ್ರತ್ಯೇಕತೆಯ ಕೂಗು ಹಾಕುವವರು ಎಲ್ಲಿ ಅನ್ಯಾಯವಾಗಿದೆ ಅನ್ಯಾಯವಾಗಿದೆ ಎಂಬ ಪಟ್ಟಿ ಮಾಡಿಕೊಂಡು ಬಂದರೆ ಸರಕಾರಕ್ಕೆ ಒತ್ತಾಯ ಹಾಕಬಹುದು.
ರಾಜ್ಯ ಪ್ರತ್ಯೇಕವಾದರೆ ರಾಜಕೀಯ ಕಪಿಮುಷ್ಟಿಯಲ್ಲಿ ಹಿಡಿತದಲ್ಲಿಟ್ಟುಕೊಳ್ಳಲು ಹುನ್ನಾರ ನಡೆಸಿದ್ದಾರೆ. ಪ್ರತ್ಯೇಕದ ಕೂಗು ಬೇಡ.
ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯವಾಗಿದ್ದರೆ ಎಲ್ಲ ಶಾಸಕರು ಸೇರಿಕೊಂಡು ಸರಕಾರದ ಮುಂದೆ ಒತ್ತಡ ಹಾಕಬೇಕು. ಉತ್ತರ ಕರ್ನಾಟಕದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸುತ್ತಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಅನುದಾನ ತರಬೇಕು.
ರಾಜ್ಯದ ಪ್ರತಿ ಹಳ್ಳಿಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಅವರೆಲ್ಲ ಪ್ರತ್ಯೇಕ ಕೇಳುತ್ತಾರೆಯೇ ?
ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ದಟನದ ಹೇಳಿಕೆ ನೀಡುವುದು ಖಂಡನೀಯ.ಈ ಭಾಗದ ಅಭಿವೃದ್ಧಿಗಾಗಿ ಸಿಎಂ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಿ ನಂಜುಂಡಪ್ಪ ವರದಿ ಆಧಾರಿಸಿ ಉತ್ತರ ಕರ್ನಾಟಕದ ಅಭಿವೃದ್ಧಿ ಪಡಿಸಬೇಕು. ಎಂದು ಕನ್ನಡ ಸಂಘಟನೆಗಳ ಒತ್ತಾಯವಾಗಿದೆ
ಅಶೋಕ ಚಂದರಗಿ ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿ ವಂಚಿತವಾಗಲು ಈ ಭಾಗದ ಶಾಸಕರು ಹಾಗೂ ಸಚಿವರು ಕಾರಣ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಈ ಭಾಗದ ಸಾವಿರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.ಕೃಷ್ಣಮೇಲದಂಡ ಯೋಜನೆಗೆ 70 ಲಕ್ಷ ಕೋಟಿ ರು. ಬೇಕು. ಎಲ್ಲಿಂದ ತರುತ್ತಿರಿ ಉಮೇಶ ಕತ್ತಿ, ಶ್ರೀರಾಮುಲು ಅವರೇ.
ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ರು. ಬೇಕು. ಆದರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಭಾಗದ ಶಾಸಕರಿಗೆ ತಾಖತ್ತಿದ್ದರೆ ಪ್ರತ್ಯೇಕ ಅನುದಾನ ಕೇಳಿ ಎಂದು ಸವಾಲ್ ಹಾಕಿದರು.
ಪ್ರತ್ಯೇಕ ಕರ್ನಾಟಕ ಮಾಡುವುದರಲ್ಲಿ ಈ ಭಾಗದ ಮಠಾಧೀಶರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.