ಬೆಳಗಾವಿ- ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು ನಿಜ ನ್ಯಾಯಕ್ಕಾಗಿ ನಮ್ಮ ಹೋರಾಟ ಎಂದು ಸತೀಶ ಜಾರಕಿಹೊಳಿ,ಉಮೇಶ ಕತ್ತಿ ಶ್ರೀರಾಮಲು ಹೇಳಿದ ಬೆನ್ನಲ್ಲಿಯೇ ಜೆಡಿಎಸ್ ಚೇತರಿಸಿಕೊಂಡಿದ್ದು ಜೆಡಿಎಸ್ ಮೌತ್ ಪೀಸ್ ಮಾಡಲಗಿ ಈಗ ಬಾಯಿ ಬಿಚ್ಚಿದ್ದಾರೆ
ಅಭಿವೃದ್ಧಿ ವಿಚಾರ ಉತ್ತರ ಕರ್ನಾಟಕಕ್ಕೆ ಅನ್ಯಾಯ ವಿಚಾರ ಕುರಿತು
ಬೆಳಗಾವಿಯಲ್ಲಿ ಹೇಳಿಕೆ ನೀಡಿರುವ ಜೆಡಿಎ ಸ್ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ್ ಮಾಡಲಗಿ
ಬಿಜೆಪಿ ಶಾಸಕ ಶ್ರೀರಾಮುಲು ಪ್ರತ್ಯೇಕ ರಾಜ್ಯದ ಹೇಳಿಕೆ.
ಯಾವುದೇ ಕಾರಣಕ್ಕೂ ರಾಜ್ಯ ವಿಭಜನೆ ನಮ್ಮ ಬೆಂಬಲ ಇಲ್ಲ.
ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ಉಕ ನಿಲುವೇನು ಸ್ಪಷ್ಟಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ
ಚುನಾವಣೆ ಸಂಧರ್ಭದಲ್ಲಿ ಅಮಿತ್ ಶಾ, ಪ್ರಧಾನಿ ನರೇಂದ್ರ ಕಳಸಾ ಬಂಡೂರಿ ವಿವಾದ ಇತ್ಯರ್ಥ ಭರವಸೆ ನೀಡಿದ್ದರು
ಈಗ ಬಿಜೆಪಿ ನಿಲುವೇನು ಎಂಬುದು ಸ್ಪಷ್ಟಪಡಿಸಲಿ.
ಉತ್ತರ ಕರ್ನಾಟಕ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟಪಡಿಸಬೇಕು.
ಜೆಡಿಎಸ್ ಆಡಳಿತ ಅವಧಿಯಲ್ಲಿ ಉಕ ಭಾಗಕ್ಕೆ ಅನ್ಯಾಯ ಆಗಿಲ್ಲ.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹೇಳಿಕೊಂಡಿದ್ದಾರೆ
ಇನ್ನೊಂದು ಕಡೆ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಅಶೋಕ ಪೂಜಾರಿ ಈಗ ಉತ್ತರಕರ್ನಾಟಕದ ಪರವಾಗಿ ಭಜನೆ ಆರಂಭಿಸಿದ್ದು ಪೂಜಾರಿ ಭಜನೆಗೆ ಮಠಾಧೀಶರು ಸಾಥ್ ನೀಡಿದ್ದಾರೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಸರಿಪಡಿಸದಿದ್ದರೆ ಪ್ರತ್ಯೇಕ ರಾಜ್ಯ ಮಾಡಿ ಎಂದು ನಮ್ಮ ಜಿಲ್ಲೆಯ ಸೋಲಿನ ಸರ್ದಾರ ಸವಾಲ್ ಹಾಕಿದ್ದು ವಿಶೇಷ