ಬೆಳಗಾವಿ- ಗಡಿನಾಡು ಬೆಳಗಾವಿಯಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಪುಂಡಾಟಿಕೆ ಪ್ರದರ್ಶನ ಮಾಡಿರುವ ಎಲ್ಲ ಎಂಈಎಸ್ ನಾಯಕರನ್ನು ಕೂಡಲೇ ಬೆಳಗಾವಿಯಿಂದ ಗಡಿಪಾರು ಮಾಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ಗುಡುಗಿದ್ದಾರೆ
ಕರ್ನಾಟಕ ರಕ್ಷಣಾ ವೇದಿಕೆ ಶೆಟ್ಟಿ ಬಣದ ಪ್ರವೀಣ ಶೆಟ್ಟಿ ಕೆ ಆರ್ ಕುಮಾರ್ ಮತ್ತು ವಾಟಾಳ್ ನಾಗರಾಜ್ ಅವರು ನೂರಾರು ಜನ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಗಳ ಕಚೇರಿಗೆ ಮುತ್ತಿಗೆ ಹಾಕಿ ಎಂಈಎಸ್ ನಾಯಕರನ್ನು ಗಡಿಪಾರು ಮಾಡುವಂತೆ ಒತ್ತಾಯ ಮಾಡಿದರು
ಎಂಈಎಸ್ ನಾಯಕರ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು ಕನ್ನಡ ನೆಲದ ಮೇಲೆ ನಿಂತುಕೊಂಡು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ಉಂಡು ಮನೆಗೆ ದ್ರೋಹ ಬಗೆದ ನಾಡ ದ್ರೋಹಿಗಳನ್ನು ತಕ್ಷಣ ಬಂಧಿಸಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಕನ್ನಡದ ಸೇನಾನಿಗಳು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಬೆಳಗಾವಿಯಲ್ಲಿ ನಾಡ ವಿರೋಧಿ ಎಂಈಎಸ್ ಪುಂಡಾಟಿಕೆ ನಡೆಸಿದರೂ ಇಲ್ಲಿಯ ಇಲ್ಲಿಯ ಲೋಕಸಭಾ ಸದಸ್ಯರು ಮತ್ತು ಶಾಸಕರು ಬಾಯಿ ಮುಚ್ಚಿಕೊಂಡಿದ್ದಾರೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನಾಡವಿರೋಧಿ ಎಂಈಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯ ಮಾಡಿದರು
ಎಂಈಎಸ್ ಸಂಘಟನೆ ನಿಷೇಧ ಮಾಡಬೇಕು ನಾಡವಿರೋಧಿ ಎಂಈಎಸ್ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಎರಡು ಸಾವಿರ ಸಂಘಟನೆಗಳು ಕೂಡಿಕೊಂಡು ಜೂನ್ ಹನ್ನೆರಡರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ಎಚ್ಚರಿಕೆ ನೀಡಿದರು
ಎಂಈಎಸ್ ಅಂದ್ರೆ ಕರ್ನಾಟಕಕ್ಕೆ ಒಂದು ದೊಡ್ಡ ರೋಗ ಹೋರಾಟದ ಮೂಲಕ ಇದಕ್ಕೆ ಔಷಧಿ ಕೊಡುವ ಸಂಕಲ್ಪ ನಮ್ಮದಾಗಿದೆ ನಾಡವಿರೋಧಿಗಳು ಬೆಳಗಾವಿಯಿಂದ ಗಂಟೆ ಮೂಟೆ ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ಹೋಗುವವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ವಾಟಾಳ್ ಎಚ್ಚರಿಕೆ ನೀಡಿದ್ರು