ಬೆಳಗಾವಿ-
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿ ಮಾಡಬೇಕು ಎಂದು ಸರ್ಕಾರದ ವಿರುದ್ದ ವಾಟಾಳ್ ನಾಗಾರಜ್ ಸುವರ್ಣ ಸೌಧದ ಎದುರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದರು.
ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ ಏನ್ ಮಾಡಿದ್ದೀರಿ ವರ್ಷಕೊಂದು ಬಾರಿ ಅಧಿವೇಶನ ನಡೆಸಿ ಎದ್ದು ಹೋಗ್ತಿರಿ.ಉತ್ತರ ಕರ್ನಾಟಕ ಭಾಗದ ಜನತೆಗೆ ಏನ್ ಮಾಡಿದ್ದೀರಿ ಎಂದು ಶ್ವೇತ ಪತ್ರ ಹೊರಡಿಸಲಿ ಎಂದು ಸಿ.ಎಂ ಸಿದ್ದರಾಮಯ್ಯರಿಗೆ ವಾಟಾಳ್ ಸವಾಲು ಹಾಕಿದರು. ಅಲ್ಲದೆ ಅಧಿಕಾರಕ್ಕೆ ಬಂದು ನಾಲ್ಕುವರೆ ವರುಷ ವಾಯಿತು ಉತ್ತರ ಕರ್ನಾಟಕ್ಕೆ ನಿಮ್ಮ ಕೊಡುಗೆ ಏನೂ ಬೆಳಗಾವಿಯಲ್ಲಿ ಕನ್ನಡ ವಿರೋಧಿಗಳನ್ನ ಹೊರಹಾಕಿ
ಎಂಈಎಸ್ ಪುಂಡಾಟ ಮಾಡ್ತಿದೆ ಅದರ ಬಗ್ಗೆ ಅಧಿವೇಶನದಲ್ಲಿ ಯಾರು ಮಾತಾಡೋದಿಲ್ಲ,
ನಾಡದ್ರೋಹಿ ಶಾಸಕರನ್ನ ಸದನಕ್ಕೆ ಬಿಡಬಾರದು, ಸ್ಪೀಕರ್ ಕೋಳಿವಾಡ್”ಗೆ ಅಧಿಕಾರವಿದೆ
ಶಾಸಕ ಸಂಬಾಜಿ ಪಾಟೀಲ್ ರನ್ನ ಸದನದೊಳಗೆ ಬಿಡಬಾರದು. ಅವರನ್ನ ಸದನಕ್ಕೆ ಬಿಟ್ರೆ ಸ್ಪೀಕರ್ ಮತ್ತು ಸಿದ್ದರಾಮಯ್ಯ ಕೂಡ ನಾಡದ್ರೋಹಿಗಳಾಗ್ತಾರೆ ಎಂದು
ವಾಟಾಳ್ ನಾಗರಾಜ್ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ತಡೆದು ಪ್ರತಿಭಟನೆ ಮಾಡಿದರು. ರಸ್ತೆ ತಡೆಯುತ್ತಿದ್ದಂತೆ
ವಾಟಾಳ ನಾಗರಾಜ್ ಮತ್ತು ಅವರ ಕಾರ್ಯಕರ್ತರನ್ನ ಪೊಲೀಸರು ಬಂದಿಸಿ ನಗರದ ಹೋರವಲಯದಲ್ಲಿ ಬಿಟ್ಟರು.