ಸುವರ್ಣ ವಿಧಾನಸೌಧದ ಬಳಿ ವಾಟಾಳ್ ಘರ್ಜನೆ….
ಬೆಳಗಾವಿ- ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ,ದ ಅಭಿವೃದ್ಧಿಯ ದಿಕ್ಸೂಚಿ ಆಗಬೇಕಿದ್ದ ಬೆಳಗಾವಿಯ ಚಳಿಗಾಲದ ಅಧಿವೇಶನ ಈ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಕೂಡಲೇ ಉಭಯ ಸಧನಗಳ ಕಲಾಪಗಳನ್ನು ವಿರ್ಜಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸುವರ್ಣ ಸೌಧದ ಎದುರು ಗುಡುಗಿದರು
ಸುವರ್ಣ ಸೌಧದ ಎದುರು ತಮ್ಮ ಕನ್ನಡ ಕಾರ್ಯಕರ್ತರ ಜೊತೆ ಆಗಮಿಸಿದ ಅವರು ಶಾಸಕರಿಗೆ ಜವಾಬ್ದಾರಿ ಇಲ್ಲ ವಿರೋಧ ಪಕ್ಷವರಿಗೆ ಈ ಭಾಗದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಹೀಗಾಗಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ,ಕಳಸಾ ಬಂಡೂರಿ, ಮಹಾದಾಯಿಯ ಬಗ್ಗೆ ಚರ್ಚೆ ನಡೆಯಲಿಲ್ಲ ಕರ್ನಾಟಕ ಏಕೀಕರಣದ ನಂತರ ಉತ್ತರ ಕರ್ನಾಟಕ ಪ್ರದೇಶ ಸಂಪೂರ್ಣ ವಾಗಿ ಹಿಂದುಳಿದಿದ್ದು ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾಡಿದ್ದೇನು? ಅನ್ನೋದರ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ವಾಟಾಳ್ ಒತ್ತಾಯಿಸಿದರು
ಶಾಸಕ ಸಂಭಾಜಿ ಪಾಟೀಲ ಕನ್ನಡ ವಿರೋಧಿ ನಾಡದ್ರೋಹಿ ಆಗಿದ್ದು ಅವರನ್ನು ಸದನದಲ್ಲಿ ಕೂರಿಸಿ ಕಲಾಪ ನಡೆಸುತ್ತಿರುವದು ನಾಚಿಕೆಯ ಸಂಗತಿಯಾಗಿದ್ದು ಕೋಳಿವಾಡ್ ಅವರೇ ಸಂಬಾಜಿ ಪಾಟೀಲ್ ನನ್ನು ಹೆಗಲ ಮೇಲೆ ಕೂರಿಸದೇ ಸಂಬಾಜಿ ಪಾಟೀಲ್ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ವಾಟಾಳ್ ನಾಗರಾಜ್ ಸ್ಪೀಕರ್ ಕೋಳಿವಾಡ್ ವಿರುದ್ಧ ಆಕ್ರೋಶ ವ್ಯೆಕ್ತಪಡಿಸಿದರು
ಬೆಳಗಾವಿ ಅಧಿವೇಶನ ಪೂರ್ಣವಾಗಿ ವಿಫಲ,ವಿಫಲ ವಿಫಲ ಎಂದು ಕೂಗುತ್ತ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೋಲೀಸರು ವಾಟಾಳ್ ನಾಗರಾಜ್ ಮತ್ತು ಕನ್ನಡದ ಕಾರ್ಯಕರ್ತರನ್ನು ಬಂಧಿಸಿದರು