 ಕನ್ನಡದ ವಾಟಾಳ್ ರನ್ನು ಹಿರೇಬಾಗೇವಾಡಿ ಟೋಲ್ ನಲ್ಲೇ ತಡೆದ ಪೋಲೀಸರು
ಕನ್ನಡದ ವಾಟಾಳ್ ರನ್ನು ಹಿರೇಬಾಗೇವಾಡಿ ಟೋಲ್ ನಲ್ಲೇ ತಡೆದ ಪೋಲೀಸರು
ಬೆಳಗಾವಿ – ಕನ್ನಡ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಪೋಲೀಸರು ಹಿರೇಬಾಗೇವಾಡಿ ಟೋಲ್ ನಾಕಾದಲ್ಲೇ ತಡೆದ ಘಟನೆ ನಡೆದಿದೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ಶಿವಸೇನೆಯ ಉದ್ದಟತನ ಖಂಡಿಸಿ ಪ್ರತಿಭಟಿಸಲು ಬೆಳಗಾವಿಗೆ ಬರುತ್ತಿದ್ದ ಕನ್ನಡದ ನಾಯಕನನ್ನು ನಡು ದಾರಿಯಲ್ಲೇ ಪೋಲೀಸರು ತಡೆಹಿಡಿದಿದ್ದಾರೆ.
ಮಹಾರಾಷ್ಟದ ಚಂದಗಡ ಶಾಸಕ ರಾಜೇಶ್ ಪಾಟೀಲರಿಗೆ ಬೆಳಗಾವಿಯಲ್ಲಿ ಸನ್ಮಾನ ಮಾಡಿಸಲು ಪೋಲೀಸರು ಭದ್ರತೆ ನೀಡಿ ಈಗ ಕನ್ನಡದ ನಾಯಕನನ್ನು ಬೆಳಗಾವಿ ನಗರ ಪ್ರವೇಶಿಸಲು ಅವಕಾಶ ನೀಡದ ಬೆಳಗಾವಿ ಪೋಲೀಸರ ಕ್ರಮ ಖಂಡನೀಯ ವಾಗಿದೆ .
ಹಿರೇಬಾಗೇವಾಡಿ ಟೋಲ್ ಬಳಿಯೇ ವಾಟಾಳ್ ಪ್ರತಿಭಟಿಸಿದರು ಪೋಲೀಸರು ವಾಟಾಳ್ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದರು.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					