ಬೆಳಗಾವಿ- ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸಲು ಬೆಳಗಾವಿಗೆ ಆಗಮಿಸಿದ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ಸಾರಾ ಗೋವೀಂದ್ ತಬ್ಬಿಬ್ಬಾದ ಘಟನೆ ನಡೆಯಿತು
ಹೋರಾಟಗಾರ ವಾಟಾಳ್ ನಾಗರಾಜ್, ಸ ರಾ ಗೋವಿಂದ ಸೇರಿ ಹಲವಾರು ಜನ ಕಾರ್ಯಕರ್ತರನ್ನು ಪೋಲೀಸರು ಹಿರೇಬಾಗೇವಾಡಿ ಟೋಲ್ ಬಳಿ, ಬಂಧಿಸಿದರು. ಸುವರ್ಣ ಸೌಧ ಬಳಿ ಧರಣಿಗೆ ಮುಂದಾಗಿದ್ದ ಹೋರಾಟಗಾರರನ್ನು ಹಿರೇಬಾಗೇವಾಡಿ ಟೋಲ್ ಬಳಿ ತಡೆದರು.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿನ್ನೆಲೆ. ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಕರೆ ಹಿನ್ನೆಲೆ. ಇಂದು ಸುವರ್ಣ ಸೌಧದ ಬಳಿ ವಾಟಾಳ್ ನೇತೃತ್ವದಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿತ್ತು.
ಸುವರ್ಣ ಸೌಧದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಹಿನ್ನೆಲೆ.
ಸುವರ್ಣ ಸೌಧದ ಬಳಿ ಹೋಗಲು ಹೋರಾಟಗಾರಿಗೆ ಅವಕಾಶ ಕೊಡದ ಪೊಲೀಸರು.
ಪೊಲೀಸರ ವಿರುದ್ಧ ಟೋಲ್ ಗೆಟ್ ನಲ್ಲಿ ವಾಟಾಳ್ ಆಕ್ರೋಶ ವ್ಯಕ್ತ ಪಡಿಸಿದರು.
ಇದಕ್ಕೂ ಮೊದಲು ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಸಿ ಬೆಳಗಾವಿಯ ಸುವರ್ಣ ಸೌಧವನ್ನೇ ಮಹಾರಾಷ್ಟ್ರದ ಶ್ರೀಮಂತರಿಗೆ ಮಾರಾಟ ಮಾಡಲು ಹೊರಟಿದೆ,ಕರ್ನಾಟಕದಲ್ಲಿರುವುದು ಕನ್ನಡಿಗರ ಸರ್ಕಾರ ಅಲ್ಲವೇ ಅಲ್ಲ,ಇದು ಮರಾಠಿ ಸರ್ಕಾರ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.
ಉಪ ಚುನಾವಣೆಗಳನ್ನು ಗೆಲ್ಲುವದಗೋಸ್ಕರ ಮುಖ್ಯಮಂತ್ರಿಗಳು ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಿದ್ದಾರೆ,ಮಹಾರಾಷ್ಟ್ರ ಸರ್ಕಾರ ಅಲ್ಲಿಯ ಸರ್ಕಾರ ಯಾವುದೇ ಸವಲತ್ತು ಕೊಡುತ್ತಿಲ್ಲ,ಆದ್ರೆ ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ, 50 ಕೋಟಿ ರೂ ಕೊಟ್ಟಿದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡಲೇ ರಾಜೀನಾಮೆ ಕೊಡಲೇಬೇಕು,ಕೊಡಲೇ ಬೇಕು ಎಂದು ವಾಟಾಳ್ ಒತ್ತಾಯ ಮಾಡಿದ್ರು.
ಮರಾಠಾ ಸಮುದಾಯ ಬೇರೆ,ಮರಾಠಿ ಭಾಷೆ ಬೇರೆ,ಕನ್ನಡ ಸಂಘಟನೆಗಳಲ್ಲಿ ಮರಾಠಾ ಸಮುದಾಯದ ಕಾರ್ಯಕರ್ತರು ಇದ್ದಾರೆ,ಅವರನ್ನು ಘಟನೆಗಳಿಂದ ಕೈ ಬಿಡ್ತೀರಾ..? ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಗೆ ಇರುವ ವಿರೋಧ ಲಿಂಗಾಯತ ಪ್ರಾಧಿಕಾರಕ್ಕೆ ಯಾಕಿಲ್ಲ,? ಎನ್ನುವ ಹಲವಾರು ಪ್ರಶ್ನೆಗಳ ಸುರಿಮಳೆಯಾದಾಗ ವಾಟಾಳ್ ತಬ್ಬಿಬ್ಬಾಗಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಲಿಕ್ಕಾಗದೇ ,ಪ್ರತಿಭಟನೆ ಆರಂಭಿಸಿ ರಸ್ತೆಯಲ್ಲಿ ಮಲಗಿದಾಗ,ಪೋಲೀಸರು ಹೊತ್ಕೊಂಡು ಹೋದ್ರು.