Breaking News

ಹೆಡೆ ಬಿಚ್ಚಿ , ಸರ್ಕಾರದ ವಿರುದ್ಧ ಭುಸ್…ಎಂದ ವಾಟಾಳ್ ನಾಗಪ್ಪ…!

ಬೆಳಗಾವಿ- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾಂದಿ ಹಾಡಲಿ ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಬೆಳಗಾವಿಯ ಸುವರ್ಣ ಸೌಧದ ದ್ವಾರದಲ್ಲಿ ಚಾಪೆ ಹಾಸಿ ಮಲಗಿ ವಿನೂತನವಾಗಿ ಪ್ರತಿಛಟಿಸಿದರು

ಬೆಳಿಗ್ಗೆ ೧೧ ಘಂಟೆಗೆ ಇಲ್ಲಿಗೆ ಆಗಮಿಸಿದ ಅವರು ಸುವರ್ಣ ಸೌಧದವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸಲು ಮುಂದಾದರು ಆದರೆ ಪೋಲೀಸರು ಅವರನ್ನು ದ್ವಾರ ಬಾಗಿಲಲ್ಲೆ ತಡೆದಾಗ ಅಲ್ಲಯೇ ಚಾಪೆ ಹಾಸಿ ಮಲಗಿ ಪ್ರತಿಭಟನೆ ನಡೆಸಿದರು

ಈ ಸಂಧರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ ಬೆಳಗಾವಿ ಸುವರ್ಣ ಸೌಧವನ್ನು ಯಾವ ಉದ್ಧೇಶಕ್ಕೆ ನಿರ್ಮಿಸಲಾಗಿತ್ತೋ ಆ ಉದ್ದೇಶ ಇನ್ನುವರೆಗೆ ಇಡೇರಿಲ್ಲ ಈ ಸೌಧವನ್ನು ಸದ್ಭಳಕೆ ಮಾಡಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿಲ್ಲ ಎಂದು ವಾಟಾಳ್ ಸರ್ಕಾರದ ವಿರುದ್ಧ ಕಿಡಿಕಾರಿದರು

ಪ್ರತಿ ತಿಂಗಳುಗೊಮ್ಮೆ ನಾಲ್ಜು ಜನ ಸಚಿವರು ಸರದಿಯಂತೆ ವರ್ಷ ಪೂರ್ತಿ ಸುವರ್ಣ ಸೌಧದಲ್ಲಿ ಠಿಖಾನಿ ಹೂಡಬೇಕು ಇಲ್ಲಿಯ ಸಮಸ್ಯೆಗಳನ್ನು ಆಲಿಸಬೇಕು ಕನಿಷ್ಠ ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳು ಸುವರ್ಣ ಸೌಧದಲ್ಲಿ ಈ ಭಾಗದ ಜನರ ಸಮಸ್ಯೆ ಆಲಿಸುವ ಯೋಜನೆ ರೂಪಿಸಿ ಚಳಿಗಾಲದ ಅಧವೇಶನದಲ್ಲಿಯೇ ಅದನ್ನು ಪ್ರಕಟಿಸಬೇಕು ಎಂದು ವಾಟಾಳ್ ಒತ್ರಾಯಿಸಿದರು

ಬೆಳಗಾವಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹೈದ್ರಾಬಾದ ಕರ್ನಾಟಕ, ಗಡಿನಾಡು, ಹೊರನಾಡು ಕನ್ನಡಿಗರ ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಬೆಳಗಾವಿಯ ಅಧಿವೇಶನ ಉತ್ರರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕೆಂದರು

ಮಹಾದಾಯಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಜ್ತಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಒತ್ತಾಯಿಸುವ ನಿರ್ಣಯವನ್ನು ಬೆಳಗಾವಿ ಅಧಿವೇಶನದಲ್ಲಿಯೇ ಕೈಗೊಳ್ಳಬೆಕು ಮಹಾದಾಯಿ ವಿಚಾರದಲ್ಲಿ ಕೇವಲ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು ಮಹಾದಾಯಿ ಹಾಗೂ ಸಮಗ್ರ ಉತ್ರರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಡಿಸೆಂಬರ ೩೧ ರಂದು ಹುಬ್ಬಳ್ಳಿಯ ಚನ್ನಮ್ಮ ವೃತ್ರದಲ್ಲಿ ಒಂದು ಲಕ್ಷ ಕನ್ನಡಿಗರು ಸೇರಿ ಕರಾಳ ದಿನ ಆಚರಿಸುತ್ತಾರೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು

ಸರ್ಕಾರ ಕೂಡಲೇ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಅಶವೇಶನದ ಸಂಧರ್ಭದಲ್ಲಿ ಎಂ ಈ ಎಸ್ ಗೆ ಮೇಳಾವ್ ನಡೆಸಲು ಅನುಮತಿ ನೀಡಬಾರದು ಮುಂಜಾಗ್ರತವಾಗಿ ಎಂ ಈ ಎಸ್ ನಾಯಕರನ್ನು ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಎಂದು ವಾಟಾಳ್ ಒತ್ತಾಯಿಸಿದರು

ಪ್ರತಿಭಟನೆಯ ಬಳಿಕ ಪೋಲೀಸರು ಅವರನ್ನು ಬಂಧಿಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *