ಬೆಳಗಾವಿ- ಉತ್ತರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸುವರ್ಣ ಸೌಧದ ಎದುರು ಅವಾಜ್ ಹಾಕಿದ್ದಾರೆ
ಇಂದು ತಮ್ಮ ಬೆಂಬಲಿಗರೊಂದಿಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ಅವರು ಸರ್ಕಾರಗಳು ಉತ್ತರ ಕರ್ನಾಟಕದ ಜನತೆಗೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿವೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ವಿಶೇಷ ಚರ್ಚೆ ನಡೆಯಬೇಕು ಇಲ್ಲಿಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಬೆಳಗಾವಿಯ ಅಧಿವೇಶನ ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿಯಾಗಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜನ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹೈದ್ರಾಬಾದ್ ಕರ್ನಾಟಕಕ್ಕೆ ನ್ಯಾಯ ಒದಗಿಸುವ 371 ಸಂಪೂರ್ಣವಾಗಿ ಜಾರಿಯಾಗಿಲ್ಲ ಈ ಬಗ್ಗೆ ಯಾವುದೇ ಅಧಿವೇಶನದಲ್ಲಿ ಚರ್ಚೆ ನಡೆದಿಲ್ಲ ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ವಾಟಾಳ್ ನಾಗರಾಜ್ ಸುವರ್ಣ ವಿಧಾನಸೌಧದ ಎದುರು ವಿಭಿನ್ನವಾಗಿ ಪ್ರತಿಭಟಿಸಿ ಆಗ್ರಹಪಡಿಸಿದರು
ಉತ್ತರ ಕರ್ನಾಟಕ ಅನ್ಯಾಯ ನಿವಾರಿಸಲು ಪ್ರತ್ಯೇಕ ಡಿಸಿಎಂ ನೇಮಕ ಮಾಡಬೇಕು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಉಪ ಮುಖ್ಯಮಂತ್ರಿ ನೇಮಕ ಮಾಡಬೇಕು ಎಂದು ವಾಟಾಳ್ ಒತ್ತಾಯ ಮಾಡಿದ್ರು
ಉತ್ತರ ಕರ್ನಾಟಕ ಉಪ ಮುಖ್ಯಮಂತ್ರಿ ಅಧಿಕಾರಿವನ್ನ ಬೆಳಗಾವಿ ಸುವರ್ಣ ಸೌಧದಿಂದಲೇ ನಡೆಸಬೇಕು. ಸಿಎಂ ಸೇರಿ ಯಾವೊಬ್ಬ ಸಚಿವರು ಜನರ ಸಮಸ್ಯೆ ಗೆ ಸ್ಪಂದಿಸುತ್ತಿಲ್ಲಾ. ಇವರೇಲ್ಲರೂ ವಿಮಾನದಲ್ಲಿ ಓಡಾಡುತ್ತಿದ್ದಾರೆ.ಯಾರೊಬ್ಬರು ನೆಲದ ಮೇಲೆ ಓಡಾಡುತ್ತಿಲ್ಲಾ. ಸಿಎಂ, ಸಚಿವರಿಗೆ ಮೇಲೆ ಹಾರಾಟ ನಡೆಸಲು ಏನ್ ರೋಗ ಬಂದಿದೇಯಾ. ಹಾಗಿದ್ರೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಅನುಮತಿ ನೀಡಬೇಕು.
ದೋಸ್ತಿ ಸರ್ಕಾರದ ವಿರುದ್ಧ ವಾಟಾಳ್ ವಾಗ್ದಾಳಿ ಮಾಡಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ