ಬೆಳಗಾವಿ:ಪ್ರತಿಷ್ಠಿತ ವಿಜಯಪುರದ ಸೈನಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಡಿ. ೧೦ ಮತ್ತು ೧೧ ರಂದು ಎರಡು ದಿನ ಬೆಳಗಾವಿಯ ಜೆಎನ್ ಎಂ ಸಿ ಕಾಲೇಜು ಆವರಣದ ಲ್ಲಿ ನಡೆಯಲಿದೆ.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿದ ಅಜೀತ್ ಅಲ್ಯೂಮಿನಿ ಅಸೋಸಿಯೇಶನ್ ಸಂಯೋಜಕ ಮೇ. ಜ. ಕೆ. ಎನ್. ಮಿರ್ಜಿ ವಿಷಯ ತಿಳಿಸಿದರು. ಕೆಎಲ್ ಇ ಸೆಂಟೇನರಿ ಹಾಲ್ ನಲ್ಲಿ ನಡೆಯುವ ಸಮಾವೇಶದಲ್ಲಿ ದೇಶದ ಆರ್ಥಿಕ ಪ್ರಗತಿಯ ಚಿಂತನೆ ನಡೆಯಲಿದೆ. ಗಾಲ್ಫ್ ಕ್ರೀಡೆ, ಉಪನ್ಯಾಸಗಳು ನಡೆಯಲಿವೆ ಎಂದರು. ಡಾ. ಪ್ರಭಾಕರ ಕೋರೆ, ಡಾ. ದೀಪಕ ಧಡೂತಿ, ಸುನೀಲ ಪೋತದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಡಾ. ಪ್ರಕಾಶ ಪಾಟೀಲ, ಡಾ. ಶಶಿಧರ ನಾಡಗೌಡ, ನಿವೃತ್ತ ಕೆ. ಎಎಎಸ್ ಅಧಿಕಾರಿ ಎಸ್. ಜಿ. ಪಾಟೀಲ, ಕೆಎಲ್ ಇ ಎಂಜಿನೀಯರಿಂಗ್ ಕಾಲೇಜು ಪ್ರಾಚಾರ್ಯ ಬಸವರಾಜ ಕಟಗೇರಿ ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ