ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ
ಬೆಳಗಾವಿ-ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಮಾನ್ಯ ನ್ಯಾಯಾಲಯ ಕುಲಕರ್ಣಿ ಕುಟುಂಬಸ್ಥರಿಗೆ ಅವಕಾಶ ನೀಡಿತ್ತು.
ಧಾರವಾಡ ಮೂರನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಅವಕಾಶ ದೊರೆತ ಹಿನ್ನಲೆಯಲ್ಲಿ, ಈ ಸಂಬಂಧ ಜೈಲು ಅಧೀಕ್ಷಕರಿಗೆ ಪತ್ರ ರವಾನೆ ಆಗಿತ್ತು, ಇಂದು ಸಂಜೆ 4 ಗಂಟೆಯಿಂದ 5 ಗಂಟೆ ಮಧ್ಯದೊಳಗೆ ಭೇಟಿಗೆ ಅವಕಾಶ ನೀಡಲಾಗಿತ್ತು
ಪತ್ನಿ, ಮಕ್ಕಳಿಗೆ ವಿನಯ್ ಕುಲಕರ್ಣಿ ಭೇಟಿಗೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಕುಟುಂಬಸ್ಥರು ಇಂದು ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾದರು,ಮನೆಯಿಂದ ಊಟ ತರಲು ಅವಕಾಶ ದೊರೆತ ಹಿನ್ನಲೆಯಲ್ಲಿ ಇಂದು ವಿನಯ್ ಕುಲಕರ್ಣಿ ಮನೆಯ ಊಟ ಸವಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ