ಲಿಂಗಾಯತರ ನಡಿಗೆ…ಹುಬ್ಬಳ್ಳಿ ಕಡೆಗೆ..
ಬೆಳಗಾವಿ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹೋರಾಟ ನಡೆದಿದೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನವ್ಹೆಂಬರ 5 ರಂದು ಹುಬ್ಬಳ್ಳಿಯಲ್ಲಿ ಬೃಹತ್ತ ಸಮಾವೇಶ ನಡೆಯಲಿದೆ ಎಂದು ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಮಹಾಸ್ವಾಮಿಗಳು ತಿಳಿಸಿದರು
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಲಂಗಾಯತ ಧರ್ಮ ಸ್ವತಂತ್ರ ಧರ್ಮ ಎನ್ನುವದು ಸುಪ್ರೀಂ ಕೋರ್ಟಿನ ಹಲವಾರು ತೀರ್ಪು ಗಳಲ್ಲಿ ಸಾಭೀತಾಗಿದೆ ಹಿಂದೂ ಧರ್ಮದ ವ್ಯಾಪ್ತಿಗೆ ಬಾರದ ಸಿಖ್ ,ಜೈನ ಧರ್ಮ ಸೇರಿದಂತೆ ಅನೇಕ ಧರ್ಮಗಳು ಸ್ವತಂತ್ರ ಧರ್ಮದ ಮಾನ್ಯತೆ ಪಡೆದಿವೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ವೀರಶೈವರು ಅಡ್ಡಿಪಡಿಸುತ್ತಿದ್ದಾರೆ ಆದರೆ ಲಿಂಗಾಯತ ಸ್ವತಂತ್ರ ಧರ್ಮ ಆಗುವದರಲ್ಲಿ ಸಂಶಯವೇ ಇಲ್ಲ ಎಂದು ಶ್ರೀಗಳು ವಿಶ್ವಾಸ ವ್ಯೆಕ್ತ ಪಡಿಸಿದರು
ವಿಶ್ವ ಹಿಂದೂ ಪರಿಷತ್ತು ಬಿಜೆಪಿ ಸೇರಿದಂತೆ ಅನೇಕ ಹಿಂದುತ್ವವಾದಿಗಳು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಸಮರ್ಥನೆ ಮಾಡುತ್ತಿಲ್ಲ .ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಹಿಂದೂಧರ್ಮಕ್ಕೆ ಪಟ್ಟು ಬೀಳಬಹುದು ಎನ್ನುವ ಆತಂಕದಲ್ಲಿ ಅವರಿದ್ದಾರೆ ಆದರೆ ಸಕಲರ ಲೇಸು ಬಯಸುವ ಧರ್ಮ ಲಿಂಗಾಯತ ಧರ್ವಾಗಿದ್ದು ಈ ಧರ್ಮದ ಸಿದ್ಧಾಂತ ಮೆಚ್ಚಿ ಕಾಶ್ಮೀರದ ರಾಜ ತನ್ನ ರಾಜ್ಯಭಾರ ಬಿಟ್ಟು ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ತೊಡಗಿಸಿಕೊಂಡಿದ್ದು ಇತಿಹಾಸವಿದೆ ಕೆಲವರು ವಿರೋಧ ಮಾಡುವದರಿಂದ ಲಿಂಗಾಯತ ಧರ್ಮದ ಹೋರಾಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಶ್ರೀಗಳು ಹೇಳಿದರು
ಕಳೆದ ಮೂರು ತಿಂಗಳಿಂದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆಗೆ ಹೋರಾಟ ನಡೆದಿದೆ. ಸುಪ್ರೀಂ ಕೋರ್ಟ್ ಹಲವು ಪ್ರಕರಣದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳಿದೆ.
ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಅವಶ್ಯಕತೆ ಇದೆ.
ಲಿಂಗಾಯತ ಧರ್ಮದ ಹೋರಾಟಕ್ಕೆ ವೀರಶೈವ ಪಂಥ ಅಡೆತಡೆ ಮಾಡುತ್ತಿದೆ. Rss, ಭಜರಂಗರಳ ಮತ್ತು ಬಿಜೆಪಿ ಮುಖ್ಯ ಅಜೆಂಟ್ ಹಿಂದುತ್ವ ಪರಿಪಾಲನೆ. ಹಿಂದುಗಳಿಂದ ಲಿಂಗಾಯತರು ವಿಮುಖರಾದ್ರೆ ಹಿಂದುಗಳ ಪ್ರಭಾವ ಕಡಿಮೆ ಆಗುತ್ತೇ ಅನ್ನೋ ಆತಂಕ ಇದೆ.
ಹಿಂದುತ್ವ, ವೈದಿಕ ಧರ್ಮಿಯರಿಂದ ಲಿಂಗಾಯತ ಧರ್ಮದ ಮಾನ್ಯತೆಗೆ ವಿರೋಧ.
ಸರ್ಕಾರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಟ್ಟರೆ ಜಾಗತಿಕ ಮಟ್ಟದಲ್ಲಿ ಗುರುತಿಸಲು ಸಾಧ್ಯ. ಎಂದು ನಾಗನೂರು ಶ್ರೀಗಳು ಅಭಿಪ್ರಾಯಪಟ್ಟರು
ಸಚಿವ ವಿನಯ ಕುಲರ್ಣಿ ಮಾತನಾಡಿ ರಾಜ್ಯಸರ್ಕಾರ ಡಿಸೆಂಬರ್ ತಿಂಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವದಾಗಿ ಹೇಳಿದೆ ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಯಾವುದೇ ರಾಜಕೀಯ ತ್ಯಾಗಕ್ಕೆ ಸಿದ್ಧ ಎಂದು ವಿನಯ ಕುಲಕರ್ಣಿ ಹೇಳಿದರು
ಶ್ಯಾಮನೂರು ಶಿವಶಂಕರಪ್ಪ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವದು ಸರಿಯಲ್ಲ ಪಂಚಮಸಾಲಿ ಜಗದ್ಗುರುಗಳ ಕಾರು ಏಳು ಲಜ್ಷ ಕಿ ಮೀ ಓಡಿದೆ ಭಕ್ತರು ಮಠಗಳಿಗೆ ದಾನ ಮಾಡುವದು ಸಂಪ್ರದಾಯ ಶ್ಯಾಮನೂರು ಶಿವಶಂಕರಪ್ಪ ಯಾವದೇ ಮಠಗಳಿಗೆ ದಾನ ಮಾಡಿಲ್ಲವೇ ಎಂದು ವಿನಯ ಕುಲಕರ್ಣಿ ಪ್ರಶ್ನಿಸಿದರು
ಬಿಜೆಪಿ ಅಧ್ಯಕ್ಷ ಅಮೀತ ಷಾ ಜೈನ ಸಮಾಜಕ್ಕೆ ಸೇರಿದವರು ಅವರು ಹಿಂದೂ ಅಲ್ಲ ಹಿಂದಿನ ಯುಪಿಎ ಸರ್ಕಾರ ಜೈನ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಟ್ಟಿದೆ ಈಗ ಇದೇ ಅಮೀತ ಷಾ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ವಿರೋಧಸುವದು ಯಾವ ನ್ಯಾಯ ನ್ಯಾಯ ಅಮೀತ ಷಾ ಹಿಂದೂ ಇಲ್ಲದಿದ್ದರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿದ್ದಾರಲ್ಲ ಎಂದು ವಿನಯ ಕುಲಕರ್ಣಿ ವ್ಯೆಂಗ್ಯವಾಡಿದ್ರು
ಹಾಗಾದ್ರೆ ಬಿಜೆಪಿಯರು ಯಾಕೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲಿಸುತ್ತಿಲ್ಲ.
ಯಾಕೇ ಲಿಂಗಾಯತ ಧರ್ಮ ಪ್ರತ್ಯೇಕಕ್ಕೆ ವಿರೋಧಿಸುತ್ತಿದ್ದಾರೆ ಎಂದು ಕುಲಕರ್ಣಿ ಪ್ರಶ್ನಿಸಿದರು
ನಾನು ಲಿಂಗಾಯತ ಸಮಾಜದಲ್ಲಿ ಹುಟ್ಟಿದೀನಿ. ಲಿಂಗಾಯತ ಸಮಾಜದಿಂದ ನನಗೆ ಎಂ.ಎಲ್.ಎ ಟಿಕೆಟ್ ಸಿಕ್ಕಿದೆ ಹಾಗೂ ಸಚಿವ ಸ್ಥಾನವು ಸಿಕ್ಕಿದೆ. ನನಗೂ ಬೆದರಿಕೆ ಮತ್ತು ಒತ್ತಡಗಳು ಬಂಧಿವೆ. ಈ ಬೆದರಕೆ ಕರೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಿನಿ ೧೨ನೇ ಶತಮಾನದಲ್ಲಿ ಬಸವಣ್ಣನವರಿಗೆ ಬಿಟ್ಟಿಲ್ಲ.
ಇನ್ನೂ ಆಧುನಿಕ ಕಾಲದಲ್ಲಿ ನಮಗ ಬಿಡ್ತಾರಾ ಎಂದು ಪ್ರಶ್ನಿಸಿದ ಸಚಿವ ಕುಲಕರ್ಣಿ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಆರಂಭಿಸಿದ್ದೇವೆ. ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಹೋರಾಟ ನಿಲ್ಲಿಸುವುದಿಲ್ಲ.
ಇದೇ ನವೆಂಬರ್ ೫ ರಂದು ಹುಬ್ಬಳ್ಳಿಯಲ್ಲಿ ಲಿಂಗಾಯತ ಬೃಹತ ರ್ಯಾಲಿ. ಲಿಂಗಾಯತ ಧರ್ಮ ಪ್ರತ್ಯೇಕಕ್ಕಾಗಿ ಈ ಹೋರಾಟ. ಬೃಹತ ರ್ಯಾಲಿಯಲ್ಲಿ ಐದು ಲಕ್ಷ ಜನರು ಭಾಗಿ ಆಗ್ತಾರೆ.ಎಂದು ಕುಲಕರ್ಣಿ ತಿಳಿಸಿದರು
ಬಿಜೆಪಿಯಲ್ಲಿನ ಅನೇಕ ಹಿರಿಯ ಲಿಂಗಾಯತ ನಾಯಕರಿದ್ದಾರೆ.
ಬಿಜೆಪಿ ನಾಯಕರು ಬಂದ್ರೆ ಹೋರಾಟದ ನೇತೃತ್ವ ಬಿಟ್ಟುಕೊಡ್ತವಿ.
ಲಿಂಗಾಯತ ಧರ್ಮ ಪ್ರತ್ಯೇಕ ಹೋರಾಟ ರಾಜಕೀಯ ಪ್ರೇರಿತವಲ್ಲ ಎಂದು ಸಚಿವ ಕುಲಕರ್ಣಿ ಏಳಿದರು