ಬೆಳಗಾವಿ
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಡಿ.4 ಸಂಜೆ 4ಕ್ಕೆ ನಗರದ ಸಂಭಾಜಿ ಉದ್ಯಾನವನದಲ್ಲಿ ಬೃಹತ್ ಜನಾಗ್ರಹ ಸಭೆ ಆಯೋಜಿಸಲಾಗಿದೆ ಎಂದು ಕೃಷ್ಣಾ ಭಟ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಎಲ್ಲಡೆ ಬೃಹತ್ ಜನಾಗ್ರಹ ಸಭೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮದ ಮುಖ್ಯ ಭಾಷಣವನ್ನು ಅಮರಾವತಿಯ ಶ್ರೀ 108 ಜಿತೇಂದ್ರನಾಥ ಗುರುಮನೋಹರನಾಥ ಮಹಾರಾಜರು ಮಾಡಲಿದ್ದಾರೆ. ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಶಿವಾನಂದ ಮಠದ ಶ್ರೀ ಮಲ್ಲಯ್ಯ ಸ್ವಾಮೀಜಿ, ಆರ್ಷ ವಿದ್ಯಾಪೀಠದ ಚಿತ್ ಪ್ರಕಾಶಾನಂದ ಸ್ವಾಮೀಜಿ, ಸಿದ್ದಶ್ರೀ ಸಿದ್ದಾಶ್ರನ ಕೌಲಗುಡ್ಡದ ಶ್ರೀ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಲಿದ್ದಾರೆ ಎಂದರು.
ಶ್ರೀರಾಮ ಮಂದಿರ, ಬಾಬರಿ ಮಸಿದಿ ವಿವಾದದ ಅಂತಿಮ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಪ್ರಾರಂಭಿಸುತ್ತಿದ್ದಂತೆ ಸುನ್ನಿ ವಕ್ಫ್ ಬೋರ್ಡ ಮತ್ತು ಬಾಬರಿ ಮಸೀದಿ ಆಕ್ಷನ್ ಕಮಿಟಿಯ ವಕೀಲರು ಕಳೆದ ಯುಪಿಎ ಸರಕಾರದ ಕೇಂದ್ರ ಸಚಿವರಾಗಿದ್ದ ಕಪಿಲ್ ಸಿಬಾಲ್ ರವರು ವಿಚಾರಣೆಯನ್ನು 2019ರ ಲೋಕಸಭಾ ಚುನಾವಣೆಯ ನಂತರ ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಿದ್ದರು.
ಮಹಾಬಳೇಶ್ವರ ಭಟ್,ಜಯಶ್ರೀ ಜಾಧವ ಸೇರಿದಂತೆ ಮೊದಲಾದವರು ಹಾಜರಿದ್ದರು