Breaking News

ಬೆಳಗಾವಿ ವಿಶ್ವಕನ್ನಡ ಸಮ್ಮೇಳಕ್ಕೆ ಆರು ವರ್ಷ… ಆರಿಲ್ಲ ಇನ್ನೂ ಕನ್ನಡದ ಹರುಷ…

ಬೆಳಗಾವಿ- ಗಡಿನಾಡ ಗುಡಿಯಲ್ಲಿ ಕನ್ನಡದ ಝೇಂಕಾರದ ಧ್ವನಿ ಪ್ರತಿಧ್ವನಿಸಿ ಇಂದಿಗೆ ಬರೋಬ್ಬರಿ ಆರು ವರ್ಷ ಗತಿಸಿವೆ. ಸಮ್ಮೇಳನ ಮುಗಿದು ಆರು ವರ್ಷ ಗತಿಸಿದರೂ ಕನ್ನಡದ ಕಂಪು ಆರಿಲ್ಲ. ಸಮ್ಮೇಳನದ ಹುರುಪು ಕಡಿಮೆ ಆಗಿಲ್ಲ. ಈ ಉತ್ಸವದ ಉತ್ಸಾಹ ಇಂದಿಗೂ ಬೆಳಗಾವಿಯ ಕಣಕಣದಲ್ಲಿಯೂ ಮನೆ ಮಾಡಿದೆ.

ಮಾರ್ಚ್ ೧೧ , ೨೦೧೧ ರಲ್ಲಿ ಮೂರು ದಿನಗಳ ಕಶಲ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು ಬಾಲಿವುಡ್ ನಟಿ ಕನ್ನಡತಿ ಐಶ್ವರ್ಯ ರಾಯ್ ಸಮ್ಮೇಳನ ಉದ್ಘಾಟಿಸಿದ್ದರು ಆಗಿನ ಮುಖ್ಯಮಂತ್ರಿ ಬಿ ಎಸ್ ಸ್ ಯಡಿಯೂರಪ್ಪ ಸಮ್ಮೇಳನದ ಸಾರಥ್ಯವಹಿಸಿದ್ದರು ಉಮೇಶ ಕತ್ತಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಗೋವಿಂದ ಕಾರಜೋಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿ  ಬೆಳಗಾವಿಯ ಸಮ್ಮೇಳನವನ್ನು ಯಶಸ್ಬಿಗೊಳಿಸಿದ್ದರು

ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಕನ್ನಡ ನಾಡಿನ ಸಂಸ್ಕೃತಿ ನೆಲ ಜಲ ಭಾಷೆಯ ಇತಿಹಾಸದ ಗತ ವೈಭವವನ್ನು ಬಿಂಬಿಸಿ ಬೆಳಗಾವಿಯ ಕಣ.ಕಣವೂ ಕನ್ನಡ ಕನ್ನಡ ಎನ್ನುವ ಸಂದೇಶ ಸಾರಿತ್ತು ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನ

ಈ ಸಮ್ಮೇಳನದಲ್ಲಿ ಈಡೀ ಸ್ಯಾಂಡಲ್ ವುಡ್ ತಾರೆಯರು ಹೆಜ್ಜೆ ಹಾಕಿದ್ದರು ವಿಚಾರವಾದಿಗಳು ತಮ್ಮ ವಿಚಾರ ಮಂಡಿಸಿದ್ದರು ಚಿಂತಕರು ಕನ್ನಡದ ಬೆಳವಣಿಗೆಯ ಕುರಿತು ತಮ್ಮ ಕಳ ಕಳಿ ವ್ಯೆಕ್ತಪಡಿಸಿದ್ದರು ರಾಷ್ಟ್ರ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ್ದ ಸಾಧಕರು ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಜೆ ಸಾಕ್ಷಿಯಾಗಿದ್ದರು

ಆಗಿನ ಚಿಕ್ಕೋಡಿ ಸಂಸದರಾಗಿದ್ದ ರಮೇಶ ಕತ್ತಿ ಅತ್ಯಂತ ಅಚ್ಚುಕಟ್ಟಾಗಿ ಲಕ್ಷಾಂತರ ಜನರಿಗೆ ಊಟದ ವ್ಯೆವಸ್ಥೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು ಈ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಕುರಿತು ಭರಪೂರ ಯೋಜನೆಗಳನ್ನು ಪ್ಕಟಿಸಿದ್ದರು ಸಮ್ಮೇಳನದ ಸವಿ ನೆನಪಿಗಾಗಿ ನಿರ್ಮಿಸಿದ ಗ್ಲಾಸ್ ಹೌಸ್ ರೆಡಿಯಾಗಿದೆ ಆದರೆ ಇನ್ನೂ ಉದ್ಘಾಟನೆ ಆಗಿಲ್ಲ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *