ಬೆಳಗಾವಿ-ನಾಡಿನ ಜಲೆ ಮತ್ತು ಸಂಸ್ಕೃತಿಯ ಭಂಡಾರ ಅಳ್ವಾಸ್ ನುಡಿಸಿರಿ ವೈಭವ ಡಿಸೆಂಬರ್ 1 ರಿಂದ 3 ರ ವರೆಗೆ ಮೂಡಬಿದ್ರೆಯ ಸುಂದರಿ ಆನಂದ ಅಳ್ವಾ ಆವರಣದಲಗಲಿ ಗತವೈಭವಿಸಲಿದೆ
ಮೂಡಬಿದ್ರೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಅಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 50 ಸಾವಿರ ಜನ ಹೆಸರು ನೊಂದಾಯಿಸಿದ್ದು ಒಂದು ದಿನಕ್ಕೆ ಒಂದು ಲಜ್ಷ ಜನ ಸೇರಬಹುದು ಎಂಬ ನೀರಿಕ್ಷೆಯಿಂದ ಊಟ ವಸತಿ ಯ ವ್ಯೆವಸ್ಥೆ ಮಾಡಲಾಗಿದ್ದು ಕೇವಲ ನೂರು ರೂ ಪಾವತಿಸಿ ಹೆಸರು ನೊಂದಾಯಿಸಿದರೆ ಮೂರು ದಿನ ಊಟ ವಸತಿ ಉಪಹಾರ ಉಚಿತವಾಗಿ ನೀಡುತ್ತೇವೆ ವಿಧ್ಯಾರ್ಥಿಗಳಿಗೆ ಪ್ರವೇಶ ಉಚಿತ ಎಂದು ಸಂಘಟಕ ವಿಠ್ಠಲ ಹೆಗಡೆ ತಿಳಿಸಿದರು
ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ 40 ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸುತ್ತವೆ ನವ್ಹೆಂಬರ್ 30 ರಂದು ವಿಧ್ಯಾರ್ಥಿ ಸಿರಿ ಕಾರ್ಯಕ್ರಮ ನಡೆಯುತ್ತದೆ ಇದನ್ನು ಚಿತ್ರ ನಟ ಮಂಡ್ಯ ರಮೇಶ್ ಉದ್ಘಾಟಿದಲಿದ್ದು ಈ ದಿನ ವಿಧ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ
ವಿಧ್ಯಾರ್ಥಿ ಸಿರಿ ಕಾರ್ಯಕ್ರಮ ಮುಗಿದ ಬಳಿಕ ಸಂಜೆ 6-30 ಕ್ಕೆ ಕೃಷಿ ಸಿರಿ ಕಾರ್ಯಕ್ರಮ ನಡೆಯಲಿದ್ದು ಮಾಜಿ ಪ್ರಧಾನಿ ದೇವೇಗೌಡರು ಕೃಷಿ ಸಿರಿ ಉದ್ಘಾಟಿಸಲಿದ್ದಾರೆ
ನವ್ಹೆಂಬರ್ 30 ರಿಂದಲೇ ಮೂಡಬಿದ್ರೆಯಲ್ಲಿ ನಾಡಿನ ಸಂಸ್ಕೃತಿಯ ಅನಾವರಣ ಆಗಲಿದ್ದು ಅಳ್ವಾಸ ನುಡಿಸಿರಿ ಕಾರ್ಯಕ್ರಮ ದಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನ ಆಗಮಿಸಲಿದ್ದಾರೆ ಎಂದು ವಿಠ್ಠಲ ಹೆಗಡೆ ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಅನು ಬೆಳ್ಳಿ ಉಪಸ್ಥಿತರಿದ್ದರು
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …