Breaking News

ನಮ್ಮಲ್ಲಿ ಶಕ್ತಿ, ಜ್ಞಾನ ಹಾಗೂ ಹುಮ್ಮಸ್ಸಕ್ಕೆ ಕೊರತೆಯಿಲ್ಲ- ವಜುಭಾಯಿ ವಾಲಾ

*ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ*

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ “20ನೇ ಸಂಸ್ಥಾಪನಾ
ದಿನಾಚರಣೆ”ವನ್ನು ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್
ಪ್ರೇಕ್ಷಾಗೃಹ ಜ್ಞಾನ ಸಂಗಮದಲ್ಲಿ ಇಂದು ಆಯೋಜನೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡ ಮಾತನಾಡಿ, ಉನ್ನತ ಶಿಕ್ಷಣ ಇಂದು ಇಳಿಮುಖ ದಾರಿಯಲ್ಲಿದ್ದು, ಕೇವಲ ಪ್ರತಿಶತ 25 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರೂ ಯೋಚಿಸಿ ಅಭಿವೃದ್ಧಿ ದೃಷ್ಟಿಯಿಂದ ರಚನಾತ್ಮಕವಾಗಿ ಕಾರ್ಯೋನ್ಮಖವಾಗಬೇಕಾಗಿದೆ ಎಂದು ಹೇಳಿದರು.

ಈ ಹಿಂದೆ ಅನಾನುಕೂಲತೆಗಳ ಮಧ್ಯ ಉತ್ತಮ ಶಿಕ್ಷಣ ನೀಡಿದ ಶಿಕ್ಷಕರ ಸಾಧನೆ ಇಂದಿನ ಶಿಕ್ಷಕರಿಗೆ ಮಾದರಿಯಾಗಬೇಕು. ಇಂದು ತಾವು ಸಲ್ಲಿಸುತ್ತಿರುವ ಸೇವೆಯ ಬಗ್ಗೆ ಆತ್ಮವಿಮರ್ಶೆ ಮೂಲಕ ಉನ್ನತ ಶಿಕ್ಷಣದ ಬೆಳವಣಿಗೆಗೆ ಶ್ರಮಿಸಬೇಕಾದ ಅಗತ್ಯವಿದೆ. ಹಳ್ಳಿಗಳು ಮತ್ತು ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಿ ಸ್ವಾಭಿಮಾನ ಬದುಕು ನಿರ್ಮಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಇಂದು ಉನ್ನತ ಶಿಕ್ಷಣ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ನಿವಾರಣೆಗೆ ಎಲ್ಲರ ಸಹಭಾಗೀತ್ವ ಅವಶ್ಯ. ಖಾಸಗಿ ಶಿಕ್ಷಣ ವ್ಯವಸ್ಥೆ ಮುಂದುವರೆಯುತ್ತಿದೆ. ಅಲ್ಲಿಯ ಶ್ರಮ ಯೋಜನೆಗಳ ಬಗ್ಗೆ ಗಮನಿಸಬೇಕು. ಹಿರಿಯ ಶಿಕ್ಷಷ ತಜ್ಞರ ಸಲಹೆಗಳನ್ನು ಪಡೆದುಕೊಂಡು ಶೈಕ್ಷಣಿಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯವಿದೆ ಎಂದು ಜಿ.ಟಿ. ದೇವೆಗೌಡ ಹೇಳಿದರು.

ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ವಜುಭಾಯಿ ಆರ್. ವಾಲಾ
ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪಾಲರು ಮಾತನಾಡಿ, ನಮ್ಮ ದೇಶದ ಉತ್ಪನಗಳ ಬಳಕೆ ಮತ್ತು ಮಾರಾಟ ಎಲ್ಲಿಯವರೆಗೆ ನಮ್ಮಿಂದ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ದಿ, ಉದ್ಯೋಗಾವಕಾಶ ಹಾಗೂ ತಾಂತ್ರಿಕ ಬೆಳವಣಿಗೆ ಸಾಧ್ಯವಿಲ್ಲ. ಹೀಗಾಗಿ ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎಂದು ಹೇಳಿದರು.

ವೈಯಕ್ತಿಕ ಬದುಕನ್ನು ಬದಿಗಿಟ್ಡು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ದೇಶಕ್ಕಾಗಿ ನಮ್ಮಿಂದ ಏನು ಕೊಡಲು ಸಾಧ್ಯ ಎಂಬುದನ್ನು ಯೋಚಿಸಿ, ವಿದ್ಯಾವಂತರು, ವಿಜ್ಞಾನಿಗಳು ಹಾಗೂ ತಾಂತ್ರಿಕ ಸಾಧಕರು ತಮ್ಮ ಕೊಡುಗೆ ನೀಡಬೇಕೆಂದು ಸಲಹೆ ನೀಡಿದರು.

ದೇಶದಲ್ಲಿ ತಾಂತ್ರಿಕತೆಯಿಂದ ಇನ್ನೂ ಚೈನಾ ದೇಶದ ಉತ್ಪನ್ನಗಳನ್ನು ಉಪಯೋಗಿಸಿ, ಮಾರಾಟ ಮಾಡುತ್ತಿದ್ದೇವೆ. ಇದು ನಿಲ್ಲಬೇಕು. ಗಾಂಧಿಜಿಯವರು ಇದನ್ನು ವಿರೋಧಿಸಿ ವಿದೇಶಿ ಉತ್ಪನ್ನಗಳನ್ನ ಸುಟ್ಟುಹಾಕಿ ಸ್ವದೇಶಿ ಉತ್ಪನ್ನಗಳ ಬಳಕೆಗೆ ಮುಂದಾಗಿ ಸಂದೇಶ ನೀಡಿದರು ಎಂದು ಹೇಳಿದರು.

ನಮ್ಮಲ್ಲಿ ಶಕ್ತಿ, ಜ್ಞಾನ ಹಾಗೂ ಹುಮ್ಮಸ್ಸಕ್ಕೆ ಕೊರತೆಯಿಲ್ಲ. ಕೊರತೆ ಇರುವುದು ಅವಕಾಶಕ್ಕೆ. ದೇಶದ ಯುವಶಕ್ತಿ, ವಿಜ್ಞಾನ ತಂತ್ರಜ್ಞಾನದ ಸೂಕ್ತ ಬಳಕೆಗೆ ಆದ್ಯತೆ ಸಿಗಬೇಕಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಕೇಂದ್ರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಕೇಂದ್ರ ರಕ್ಷಣಾ ಮಂತ್ರಿಗಳ ವೈಜ್ಞಾನಿಕ ಸಲಹೆಗಾರ ಡಾ. ವಿ.ಕೆ. ಅತ್ರೆ ವಿಶೇಷ ಉಪನ್ಯಾಸ ನೀಡಿದರು.

ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಸ್ವಾಗತಿಸಿ ಪ್ರಸ್ತಾವಿಕ ಮಾತಗಳನ್ನಾಡಿದರು.

ಈ ಸಂದರ್ಭದಲ್ಲಿ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಪೂರ್ವ ಕುಲಸಚಿವರು, ಹಣಕಾಸು ಅಧಿಕಾರಿಗಳು,
ವಿಶೇಷಾಧಿಕಾರಿಗಳು ಹಾಗೂ ಅತಿಥಿ ಉಪನ್ಯಾಸಕರಿಗೆ ಮತ್ತು ವಿಟಿಯು ವಿಶ್ರಾಂತ ಕುಲಪತಿಗಳಾದ ಡಾ. ಎಸ್.ರಾಜಶೇಖರಯ್ಯ, ಡಾ. ಕೆ.ಬಾಲವೀರ ರೆಡ್ಡಿ, ಡಾ. ಹೆಚ್. ಪಿ. ಖಿಂಚಾ ಅವರಿಗೆ ಸನ್ಮಾನಿಸಲಾಯಿತು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *