ಮಹಿಳಾ ದಿನದ ಸ್ಪೇಶಲ್…
ತಾಯಿಯ ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.ತಾಯಿಯ ಪ್ರೀತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ ತಂದೆ ತಾಯಿ ಇಲ್ಲದ ನೂರಾರು ಅನಾಥ ಜೀವಗಳ ತಾಯಿಯಾಗಿ ಹಗಲು ರಾತ್ರಿ ಮಕ್ಕಳ ಆರೈಕೆ ಮಾಡುತ್ತಿರುವ ಮಹಾನ್ ತಾಯಿಯ ಮಮತೆಯ ಮಡಿಲು ಇಲ್ಲಿದೆ ನೋಡಿ
ಬೆಳಗಾವಿ- ಅವರೆಲ್ಲ ಕನಸುಗಳನ್ನ ಹೊತ್ತುಕೊಂಡು ಓಡಾತ್ತಿರುವ ಪುಟ್ಟ ಪುಟ್ಟ ಮಕ್ಕಳು. ತಾಯಿಯ ಆಶ್ರೆ ಇಲ್ಲದೆ, ಭಾವನೆಗಳ ಬರಿದಾದ ಜೀವನದಲ್ಲಿ ತಾಯಿಯ ಮಡಿಲು ಬೇಡುತ್ತಿರುವ ಚಿಕ್ಕ ಚಿಕ್ಕ ಕಂದಮ್ಮಗಳು. ಯ್ಯಾರೊ ಮಾಡಿದ ತಪ್ಪಿಗೆ ಇನ್ಯಾರೊ ನೋವು ಅನುಭವಿಸುತ್ತಿರುವ ಆ ಜೀವಗಳು. ತಂದೆ ತಾಯಿ ಮಾಡಿದ ತಪ್ಪಿಗೆ ಮಕ್ಕಳಿಗೆ ಶಿಕ್ಷೆ. ಈ ಎಲ್ಲ ನೋವು ಗಳನ್ನ ಅರಿತು, ತಾಯಿ ಮನಸ್ಸಿನಿಂದ ಆರೈಕೆ ಮಾಡುತ್ತಿರುವ ಹೃದಯ ವಂತಿಕೆಯ ನೂರು ಮಕ್ಕಳ ತಾಯಿ… ಮಹಿಳಾ ದಿನಾಚರಣೆ ಅಂಗವಾಗಿ ಈ ವಿಶೇಷ. ವರದಿ ಇಲ್ಲಿದೆ ಓದಿ…
– ತಾಯಿಯ ಮಡಿಲಲ್ಲಿ ಜೋಜುಳ ಕೇಳುತ್ತ ಮಲಗಬೇಕಿದ್ದ ಹಸುಗಳು ಭೂ ತಾಯಿ ಮಡಿಲಲ್ಲಿ. ಅಮ್ಮನ ಪ್ರೀತಿ ,ವಾತ್ಸಲ್ಯ ಹುಡುಕ್ಕುತ್ತಿರುವ ಪುಟಾನಿ ಮಕ್ಕಳು.ಈವೆಲ್ಲವನ್ನು ಅರಿತೂ ನಾನೇ ನಿಮ್ಮ ತಾಯಿ ಹೆತ್ತಮ್ಮ ಅಂತಾ ತಾಯಿಯ ಮಮತೆ ,ಪ್ರೀತಿ , ವಾತ್ಸಲ್ಯ ತೋರಿಸಿ ಮಕ್ಕಳನ್ನ ಮುದ್ದುಮಾಡುತ್ತಿರುವ ಮಹಾತಾಯಿ. ಹೌದು ಇಂತಹ ಮನ ಕುಲುಕುವ ದೃಶ್ಯ ಕಂಡುಬಂದದ್ದು ಬೆಳಗಾವಿ ಅನಾತಾಶ್ರಮದಲ್ಲಿ. ಹೀಗೆ ನಾವು ನೋಡ್ತಾಇರುವ ಇವಳ ಹೆಸರು ಸುನಂದಾ ಉಂಡಾಳ್ಕರ್ , ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ನ ಶ್ರೀಮತಿ ಗಂಗಾಮ್ಮ ಚಿಕ್ಕಂಬಿಮಠ ಅನಾತಾಶ್ರಮದ ನೂರಾರು ಅನಾತ ಮಕ್ಕಳಿಗೆ ಈ ಸುನಂದಾ ಉಂಡಾಳ್ಕರೆ ತಾಯಿ. ತಾಯಿಯಂತೆ ಪಾಲನೆ ಪೋಷಣೆ ಪ್ರೀತಿ ವಾತ್ಸಲ್ಯ ಮಮತೆ ತೊರುವ ಕರುಣಾ ಮಯಿ ಈ ತಾಯಿ. ದಿನದ ೨೪ ತಾಸು ಈ ಅನಾಥ ಮಕ್ಕಳಿಗ ಬಗ್ಗೆ ಕಾಳಜಿ ತೊರಿಸುತ್ತಾಳೆ. ತನ್ನ ಮನೆಗೆ ಹೊಗದೆ ಅನಾತಾಶ್ರಮದಲ್ಲೇ ಇದ್ದು ತನ್ನ ಮಕ್ಕಳಂತೆ ಎಲ್ಲ ಮಕ್ಕಳನ್ನು ಬೆಳಸುವ ಕರುಣಾಮಯಿ. ಮಕ್ಕಳು ಮೈಮೆಲೆ ಮಲ ಮೂತ್ರ ವಿಸರ್ಜನೆ ಮಾಡಿದ್ರೂ ಪ್ರೀತಿ ಯಿಂದಾ ಮುದ್ದಾಡಿ ಸ್ವಚ್ಛ ಗೊಳಿಸುತ್ತಾಳೆ. ಇಲ್ಲಿರುವ ಮಕ್ಕಳಿಗಷ್ಟೆ ಅಲ್ಲ ಹೊರಗಿನ ಮಕ್ಕಳೂ ಸಹಿತ ಈಕೇಯ ಪ್ರತಿಗೆ ಮನಸೊತ್ತಿದ್ದಾರೆ. ಅದಕ್ಕೆ ಈಕೆಯನ್ನ ಎಲ್ಲರೂ ನೂರು ಮಕ್ಕಳ ತಾಯಿ ಅಂತಾನೇ ಕರೆಯೊದು..
ಅನಾಥಾಶ್ರಮದಲ್ಲಿ ಸುಮಾರು ೭೫ ಮಕ್ಕಳು ಅನಾಥರಿದ್ದಾರೆ. ಅದಲ್ಲಿ ೧೦ ಹಸೂಗೂಗುಗಳು ೬೫ ಚಿಕ್ಕ ಮಕ್ಕಳು ಇದ್ದಾರೆ. ಇದಲ್ಲಿ ಅನಾಥ ಮಕ್ಕಳಾದ್ರೆ , ಪಾಪಿ ತಂದೆ ತಾಯಿಗಳು ಬೇಕು ಅಂತಲೇ ಬಿಟ್ಟು ಹೊಗಿದ್ದಾರೆ. ಸುಮಾರು ೧೯೮೨ ರಲ್ಲಿ ಪ್ರಾರಂಭವಾದ ಈ ಅನಾತಾಶ್ರಮದ ಅಲ್ಲಿಂದ ಇಲ್ಲಿಯವರೆಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ದಾರಿ ದೀಪವಾಗಿದೆ. ಇಲ್ಲಿಯ ಮಕ್ಕಳಿಗೆ ಶಿಕ್ಷಣ ಜೊತೆಗೆ ಮಕ್ಕಳು ಬೆಳದಂತೆಲ್ಲ ಕೌಶಲ್ಯ ತರಬೇತಿಯನ್ನು ಸಹ ನೀಡಲಾಗುತ್ತದೆ.. ಇಲ್ಲಿಯ ಅನಾಥ ಏಳು ಮಕ್ಕಳನ್ನ ದತ್ತು ಮಕ್ಕಳನ್ನ ನೀಡಲಾಗಿದ್ದು, ಅನಾಥ ಹೆಣ್ಣುಮಕ್ಕಳಿಗೆ ಮದುವೆಯೂ ಸಹ ಮಾಡಿ ಕೊಡಲಾಗಿದೆ..
ಒಟ್ಟಿನಲ್ಲಿ ಬುದ್ದಿವಂತನರು ಅನಿಸಿಕೊಳ್ಳುವ ಪಾಪಿಗಳು ಮಾಡಿದ ತಪ್ಪಿಗೆ ಈ ಚಿಕ್ಕ ಮಕ್ಕಳು ಶಿಕ್ಷೆ ಅನುಭವಿಸುತ್ತಾ ಅನಾಥರಾಗಿದ್ದಾರೆ. ತಾಯಿಯ ಪ್ರೀತಿ ಮಮತೆ ವಾತ್ಸಲ್ಯ ಕಾಣದ ನೂರಾರು ಅನಾಥ ಮಕ್ಳಳಿಗೆ ಈ ಸುನಂದಾ ಅವರೇ ತಂದೆ ತಾಯಿ, ಬಂಧು ಎಲ್ಲವೂ ಇವಳೆ ಆಗಿದ್ದಾಳೆ. ನೂರು ಮಕ್ಕಳ ತಾಯಿಗೆ ಒಂದು ಸಲಾಮ್..