Breaking News

ಅಭಯ ಕಾ.ಚರ್ಚಾ..,ಬಿಸ್ಕೀಟ್ ಪೇ..ಖರ್ಚಾ…!

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಮುಟ್ಟುಗೋಲು ಮಾಡಿಕೊಳ್ಳಲು ೫೦೦ ಹಾಗು ೧೦೦೦ ಸಾವಿರ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ದೇಶದಲ್ಲಿ ಕ್ರಾಂತಿ ಮಾಡಿದ್ದು ಸಾರ್ವಜನಿಕರು ತಾಸುಗಟ್ಟಲೇ ಕ್ಯುನಲ್ಲಿ ನಿಂತುಕೊಂಡು ಮೋದಿ ಅವರ ನಿರ್ಧಾರಕ್ಕೆ ಸಹರಿಸುತ್ತಿದ್ದು ಮಾಜಿ ಶಾಸಕ ಹಣ ಬದಲಾವಣೆಗಾಗಿ ಸರದಿಯಲ್ಲಿ ನಿಂತ ಜನರಿಗೆ ಕುಡಿಯುವ ನೀರು ಹಾಗು ಬಿಸ್ಕೀಟ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ

ಬೆಳಗಾವಿಯ ಶಹಾಪೂರ ವಡಗಾಂವಿ ಖಾಸಬಾಗ ಆರ್ ಪಿ ಡಿ ಪ್ರದೇಶದಲ್ಲಿರುವ ರಾಷ್ಟ್ರೀಕ್ರತ ಬ್ಯಾಂಕಗಳ ಎದುರು ಬೆಳಗಾವಿ ದಕ್ಷಿಣ ಬಿಜೆಪಿ ಕಾರ್ತಕರ್ತರು ಅಭಯ ಪಾಟೀಲ ನೇತ್ರತ್ವದಲ್ಲಿ ಸರದಿಯಲ್ಲಿ ನಿಂತ ಜನರಿಗೆ ಉಚಿತವಾಗಿ ನೀರು ಹಾಗು ಬಿಸ್ಕೀಟ್ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು ಸರದಿಯಲ್ಲಿ ಯುವಕರು ಮಹಿಳೆಯರು ವೃದ್ಧರು ಹಾಗು ಡಯಾಬೀಟಸ್ ಕಾಯಿಲೆ ಇರುವವರು ತಾಸುಗಟ್ಟಲೇ ನಿಲ್ಲುತ್ತಿದ್ದು ಅವರಿಗೆ ಕನಿಷ್ಠ ನೀರು ಹಾಗು ಬಿಸ್ಕೀಟ್ ನೀಡಲಾಗುತ್ತಿದೆ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ನಾಲ್ಕು ಘಂಟೆಯವರೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾರ್ಯಕರ್ತರು ಈ ಕಾರ್ಯವನ್ನು ನಿಭಾಯಿಸುತ್ತಾರೆ ಎಂದು ಅಭಯ ಪಾಟೀಲ ತಿಳಿಸಿದರು

ಮೋದಿ ಅವರು ಚಾಯ ಪೇ ಚರ್ಚಾ ಮಾಡಿ ಎಲ್ಲರ ಗಮನ ಸೆಳೆದರೆ ಅಭಯ ಪಾಟೀಲರು ಬಿಸ್ಕೀಟ್ ಪೇ ಖರ್ಚಾ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *