ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿಯ ನೇಕಾರರಿಂದ ಬೇಕಾಬಿಟ್ಟಿಯಾಗಿ ತೆರಿಗೆ /ದಂಡ ವಸೂಲಿ ಮಾಡುತ್ತಿರುವದನ್ನು ವಿರೋಧಿಸಿ ಹೆಸ್ಕಾಂ ಹೆಚ್ಚುವರಿ ಡಿಪಾಜಿಟ್ ವಸೂಲಿ ಮಾಡುತ್ತಿರುವದನ್ನು ದಿಕ್ಕರಿಸಿ ಬೆಳಗಾವಿಯ ಸಾವಿರಾರು ಜನ ನೇಕಾರರು ಸೋಮವಾರ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಾವಿರಾರು ಜನ ನೇಕಾರ ಬಂಧುಗಳು ಮಾಜಿ ಶಾಸಕ ಅಭಯ ಪಾಟೀಲ ನೇತ್ರತ್ವದಲ್ಲಿ ಬೃಹತ್ತ ಪ್ರತಿಭಟನಾ ರ್ಯಾಲಿ ನಡೆಸಿದರು
ಮಹಾನಗರ ಪಾಲಿಕೆಯ ಅಧಿಕಾರಿಗಳ ಮನಬಂದಂತೆ ಆಸ್ತಿ ತೆರಿಗೆ ಮತ್ತು ದಂಡ ವಸೂಲಿ ಮಾಡುತ್ತಿದ್ದಾರೆ ಬರಗಾಲದ ಸಂಕಷ್ಟದ ಸಮಯದಲ್ಲಿ ಇದನ್ನು ತಡೆಯಬೇಕು ಹೆಸ್ಕಾಂ ಅಧಿಕಾರಿಗಳು ಹೆಚ್ಚುವರಿ ಡೆಪಾಜಿಟ್ ವಸೂಲಿ ಮಾಡುತ್ತಿರುವದನ್ನು ಜಿಲ್ಲಾಧಿಕಾರಿಗಳು ತಡೆಯಬೇಕೆಂದು ನೇಕಾರರು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ನೇಕಾರ ಬಂಧುಗಳಿದ್ದಾರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ ಇಂತಹ ಸಂಕಷ್ಟದ ಸಂಧರ್ಬದಲ್ಲಿ ನೇಕಾರರಿಂದ ದಂಡ ವಸೂಲಿ ಮಾಡಬಾರದು ಜಿಲ್ಲಾಧಿಕಾರಿಗಳು ಮದ್ಯಸ್ಥಿಕೆ ವಹಿಸಿ ನೇಕಾರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಭಯ ಪಾಟೀಲ ಒತ್ತಾಯಿಸಿದರು
ಹೆಸ್ಕಾಂ ಅಧಿಕಾರಿಗಳು ನೇಕಾರರಿಂದ ಹೆಚ್ಚುವರಿ ಡಿಪಾಜಿಟ್ ಪಡೆಯುವದನ್ನು ತಕ್ಷಣ ನಿಲ್ಲಿಸಬೇಕು ಪಾಲಿಕೆ ಅಧಿಕಾರಿಗಳು ಶೇ 15 ರಷ್ಟು ಮೂರು ವರ್ಷದ ಹೆಚ್ಚುವರಿ ತೆರಿಗೆ ವಸೂಲಿ ಮಾಡುವದನ್ನು ಕೈಬಿಡಬೇಕು ಎಂದು ಅಭಯ ಪಾಟೀಲ ಒತ್ತಾಯಿಸಿದರು
ನಗರದ ಬಸವೇಶ್ವರ ಸರ್ಕಲ್ ನಿಂದ ಆರಂಭವಾದ ನೇಕಾರರ ಪಾದ ಯಾತ್ರೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಅರ್ಪಿಸಲಿದೆ
ಉನ್ನತ ಮಟ್ಟದ ತನಿಖೆಗೆ ಒತ್ತಾಯ
ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಆಸ್ತಿ ತೆರಿಗೆಗೆ ಸಮಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಇಟ್ಟಿಲ್ಲ ಯಾರು ಎಷ್ಟು ಆಸ್ತಿ ತೆರಿಗೆ ತುಂಬಬೇಕು ಯಾರದ್ದು ಎಷ್ಡು ಟ್ಯಾಕ್ಸ ಬಾಕಿ ಇದೆ ಅನ್ನೋದು ಪಾಲಿಕೆಯಲ್ಲಿ ಸಮರ್ಪಕವಾದ ದಾಖಲೆಗಳು ಇಲ್ಲ ಟ್ಯಾಕ್ಸ ಲೆಕ್ಕಪತ್ರ ಕುರಿತು ಗೋಲ್ ಮಾಲ್ ನಡೆದಿದೆ ಎನ್ನುವ ಅನುಮಾನ ಬರುತ್ತಿದ್ದು ಈ ಕುರಿತು ಉನ್ನತ ಮಟ್ಟದ ತನಿಖೆ ಮಾಡುವಂತೆ ಮಾಜಿ ಶಾಸಕ ಅಭಯ ಪಾಟೀಲ ಒತ್ತಾಯಿಸಿದ್ದಾರೆ