ಕೆನಡಾ ಕಂಟ್ರಿಗೂ…ಯಲ್ಲಮ್ಮನ ಪವಾಡ ಎಂಟ್ರಿ….!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಯಲ್ಲಮ್ಮನ ದೇವಸ್ಥಾನ ಜಗತ್ಪ್ರಸಿದ್ಧ ದೇವಸ್ಥಾನ ಎನ್ನುವದು ಸಾಭೀತಾಗಿದೆ ಯಾಕಂದ್ರೆ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ ಕೆನಡಾ ದೇಶದ ಕರೆನ್ಸಿ ಸಿಕ್ಕಿದೆ.
ಬೆಳಗಾವಿಯ ಪ್ರಸಿದ್ಧ ಯಲ್ಲಮ್ಮನ ದೇವಸ್ಥಾನಕ್ಕೆ ಕೆನಡಾ ದೇಶದ ಭಕ್ತರೂ ಬರ್ತಾರೆ ಎನ್ನುವ ವಿಚಾರವೂ ಖಾತ್ರಿಯಾಗಿ,ಬರಗಾಲದ ಸಮಯದಲ್ಲೂ ಹುಂಡಿಯಲ್ಲಿ ಈ ವರ್ಷ ಪ್ರತಿವರ್ಷಕ್ಕಿಂತ ಎರಡು ಕೋಟಿ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಈ ವರ್ಷ ವಿದೇಶದ ಅಂದ್ರೆ ಕೆನಡಾ ದೇಶದ ಕಾಣಿಕೆಯೂ ಮುಟ್ಟಿರುವದು ದೇವಿಯ ಪವಾಡ.
ಬರದ ಬವಣೆ ಮಧ್ಯೆಯೂ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭರಪೂರ ಕಾಣಿಕೆ ಹರಿದುಬಂದಿದೆ.
ಒಂದೇ ವರ್ಷದಲ್ಲಿ ಎರಡು ಕೋಟಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ. ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಶಕ್ತಿದೇವಿಗೆ ಕೋಟಿ ಕೋಟಿ ಕಾಣಿಕೆ ಬಂದಿದೆ.
ದೇಶದ ನಾನಾ ಭಾಗದ ಭಕ್ತರಿಂದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.
2023–24ರಲ್ಲಿ ₹11.23 ಕೋಟಿ ಕಾಣಿಕೆ ಸಂಗ್ರಹ.
ಕಳೆದ ವರ್ಷಕ್ಕೆ ಹೋಲಿಸಿದರರೆ 2ಕೋಟಿ 40ಲಕ್ಷ ಹೆಚ್ಚಿಗೆ ಕಾಣಿಕೆ ಸಂಗ್ರಹ ವಾಗಿದೆ ಕಳೆದ ವರ್ಷ ಅಂದ್ರೆ, 2022–23ರಲ್ಲಿ 8.01ಕೋಟಿ ನಗದು, 66.28ಲಕ್ಷ ಮೌಲ್ಯದ ಚಿನ್ನ ಮತ್ತು 15.43 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿ 8.83 ಕೋಟಿಯ ಕಾಣಿಕೆ ಸಂಗ್ರಹವಾಗಿತ್ತು. ಈ ವರ್ಷ
2023–24ರಲ್ಲಿ 10.22ಕೋಟಿ ನಗದು, 84.14ಲಕ್ಷ ಚಿನ್ನ ಮತ್ತು 16.65ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23ಕೋಟಿ ಕಾಣಿಕೆ ಸಂಗ್ರಹವಾಗಿದ್ದು ದಾಖಲೆಯಾಗಿದೆ.
ಜತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದ್ದು ವಿದೇಶದ ಕಾಣಿಕೆಯೂ ದೇವಿಗೆ ಸಮರ್ಪಣೆಯಾಗಿದೆ.