Breaking News

ಶಿಕಾರಿಪೂರದ ರಾಜನ ಕೇಳಿ ಆಟ ಆಡಿದ್ರೆ ಶಿಕಾರಿಪುರ ರಾಜನೂ ಹೋಗ್ತಾನೆ,ನೀವು ಹೋಗ್ತೀರಾ- ಯತ್ನಾಳ ಗರಂ..

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 24 ತಾಸಿನೊಳಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ಎಲ್ಲ ಸ್ಥಾನಮಾನಗಳನ್ನು ನೀಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ‌ ಯತ್ನಾಳ ಗಡುವು ನೀಡಿದರು.

ನಗರದಲ್ಲಿ ಗಾಂಧಿ ಭವನದಲ್ಲಿ ಗುರುವಾರ ನಡೆದ ಪಂಚಮಸಾಲಿ ಸಮಾಜಕ್ಕೆ 2ಡಿ ಪಂಚಮಸಾಲಿಗಳ ಸಿಕ್ಕ ನ್ಯಾಯವೋ ಅನ್ಯಾಯವೋ? ಎಂಬ ಕುರಿತ ರಾಜ್ಯ ಕಾರ್ಯಕಾರಿಣಿ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

24 ಗಂಟೆಯೊಳಗೆ ಮೀಸಲಾತಿ ಕಲ್ಪಿಸದಿದ್ದರೆ ಮುಖ್ಯಮಂತ್ರಿ ಗಳು ಸ್ಪರ್ಧಿಅಉವ ಹಾವೇರಿ ಜಿಲ್ಲೆ ಶಿಗ್ಗಾಂವ ಕ್ಷೇತ್ರದಿಂದ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ, ಮೀಸಲಾತಿ ನೀಡುವ ಮುಖ್ಯಮಂತ್ರಿಗಳು ತಮ್ಮ ತಾಯಿಯ ಮೇಲೆ ಆಣೆ ಮಾಡಿದ್ದರು. ಮುಖ್ಯಮಂತ್ರಿ ಆದಾಗಿನಿಂದ ಇಲ್ಲಿಯವರೆಗೆ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರ ಮಾತು ಕೇಳಿ ನಮಗೆ ಮೋಸ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ಅಂತಿಮ ಹೋರಾಟ ಇದಾಗಲಿದೆ ಎಂದು‌ ಎಚ್ಚರಿಕೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಯತ್ನಾಳ

*ಮೀಸಲಾತಿ ಕೊಡ್ತಿರೋ ಇಲ್ವೋ ಅದನ್ನ ಹೇಳಿ*
ನೀವು ತಾಯಿ ಆಣೆ ಮಾಡಿ ಹೇಳಿರಿ.ತಾಯಿ ಮೇಲೆ ಗೌರವ ಇದ್ರೆ 24 ತಾಸಿನಲ್ಲಿ ಹೇಳ್ತಾರೆ.ಧಮ್ಕಿ ಮಾಡಿ ನಾವು ಮೀಸಲಾತಿ ಕೇಳ್ತಿಲ್ಲ.ಧಮ್ಕಿ ಮಾಡಿದ್ರೆ ಸುವರ್ಣಸೌಧ ಮುತ್ತಿಗೆ ಹಾಕ್ತಿದ್ದೀವಿ.ನಿಮ್ಮನ್ನು ಮೂತ್ರವಿಸರ್ಜನೆಗೂ ಬಿಡುತ್ತಿರಲಿಲ್ಲ.ಏನೂ ಮಾಡದೇ ಧಮ್ಕಿ ಅಂತಾ ಅಪವಾದ ಕೊಡ್ತೀರಾ?ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಗರಂ ಆಗಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ನೀಡುವ ಸಿಎಂ ಭರವಸೆ ಕೊಟ್ರು.ಕ್ಯಾಬಿನೆಟ್ ಸಭೆಯಲ್ಲಿ ವಿಷಯ ಹಾಕದೇ ಚರ್ಚೆ ಮಾಡಿದ್ರೋ ಇಲ್ವೋ ಗೊತ್ತಿಲ್ಲ.ಕರ್ನಾಟಕ ರಾಜಕೀಯ ಭವಿಷ್ಯದಲ್ಲಿ ಭಾರೀ ತೀರ್ಮಾನ ಕೈಗೊಳ್ಳಲು ಸಭೆ.ಬೊಮ್ಮಾಯಿ ಸಿಎಂ ಆಗಿದಾಗಿನಿಂದ ನಮ್ಮ ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.
ವರದಿ ಕೊಡುವ ಪುಣ್ಯಾತ್ಮ ಮಳೆ ಐತಿ ಕೊರೊನಾ ಐತಿ ಅಂತಾ ನೆಪ ಹೇಳಿದ್ರು.ಸುಮ್ಮನ ಕೊಡಬ್ಯಾಡ ಅಂತಾ ಹೇಳಿರಬೇಕು.ಇದರ ಹಿಂದ ಶಿಕಾರಿಪುರ ರಾಜ ಇದಾರ.
ನಾನು ಬೊಮ್ಮಾಯಿಗೆ ಹೇಳಿಬಿಟ್ಟಿದೀನಿ.
ಸೂರ್ಯಚಂದ್ರ ಇರೋವರೆಗೂ ಪಕ್ಷದಿಂದ ಉಚ್ಚಾಟನೆ ಮಾಡ್ತೀವಿ ಅನ್ನಬಹದು.ನೀವು ಕಟೀಲ್ ಅಷ್ಟೇ ಹೇಳಬಹುದು.ಬೊಮ್ಮಾಯಿ ತಾಯಿ ಆಣೆ ಮಾಡಿ ಈ ರೀತಿ ಮಾಡೋದು.ಬೊಮ್ಮಾಯಿಯವರು ಹುಚ್ಚರಲ್ಲಿ ತಗೆದುಬಿಟ್ರು .ಯಡಿಯೂರಪ್ಪ ಮಾತು ಕೇಳಿ ಎಷ್ಟು ದಿವಸ ನಮಗೆ ಟೋಪಿ ಹಾಕೋರು?
ನಿಮ್ಮ ಮಂತ್ರಿ ಗಳಿಗೆ 2ಡಿ ಮೀಸಲಾತಿ ಅಂದ್ರೆ ಗೊತ್ತಿಲ್ಲ.
ಇನ್ನೊಬ್ಬ ಮಂತ್ರಿಗೆ ಸಮಾಜ ಬೇಕಿಲ್ಲ, ಬರೀ ರೊಕ್ಕ ಬೇಕ.
ಬೊಮ್ಮಾಯಿಯವರೇ ನಿಮ್ಮನ್ನ ನಂಬಿದ್ದಕ್ಕೆ ಈ ಕಾಣಿಕೆ ಕೊಟ್ಟೀರಿ.ಬೊಮ್ಮಾಯಿ ನಂಬಬೇಡ್ರಿ ಅಂತಾ ಹಲವು ಜನ ಹೇಳಿದ್ರು.ನಾವು ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರೆ,ಬೊಮ್ಮಾಯಿಯವರೇ ನಿಮ್ಮ ಕೊನೆ ದಿವಸ ಆಗ್ತಿತ್ತು.ನೀವು ತಾಯಿ ಆಣೆ ಕೊಟ್ಟೀರಿ ಅಂತಾ ನಾವು ಒಪ್ಪಿದ್ದೇವು.ನೀವು ಟಿಕೆಟ್ ನೀಡದೇ ಇರಬಹುದು ಇಲ್ಲ ಪಕ್ಷದಿಂದಉಚ್ಛಾಟಿಸಬಹುದು.ಬೊಮ್ಮಾಯಿ ಕ್ಷೇತ್ರದಿಂದ ನಮ್ಮ ಹೋರಾಟ ಶ್ರೀಗಳು ಈಗ ಹೇಳ್ತಾರೆ.
ಶಿಕಾರಿಪುರ ರಾಜನ ಕೇಳಿ ಆಟ ಆಡಿದ್ರೆ ಶಿಕಾರಿಪುರ ರಾಜನೂ ಹೋಗ್ತಾನೆ,ನೀವು ಹೋಗ್ತೀರಾ.
ಆ ಜಯಪ್ರಕಾಶ್ ಹೆಗಡೆಗೆ ವರದಿ ಕೊಡಬೇಡಿ ಅಂತಾ ಹೇಳಿ ಬಿಟ್ಟೀರಿ.ಸುಮ್ಮನೇ ಮಧ್ಯಂತರ ವರದಿ ಪಡೆದರು.
ಬಿಜೆಪಿಯಲ್ಲಿ ನಾನೇ ಕೊನೆಯ ಸಿಎಂ ಆಗಬೇಕು ಅಂತಾ ಬೊಮ್ಮಾಯಿಗೆ ಇದೆ ಅನಿಸುತ್ತೆ.ಮೇವರೆಗೂ ಸಿಎಂ ಆಗೂನೂ ಆಮೇಲೆ ಏನರ ಆಗವಲ್ತ ಅಂತಾ ಬಂದೇರಿ ಅನಿಸುತ್ತೆ ಸಿಎಂ ಮೋಸ ಮಾಡಿದ್ದಾರೆ ಎಂಬ ಭಾವನೆ ಇಡೀ ಸಮುದಾಯಕ್ಕಿದೆ.ಮತ್ತೊಬ್ಬರಿಗೆ ಕೊಡಲು ನಾವು ವಿರೋಧ ಮಾಡಲ್ಲ.2ಡಿ ಕೊಡ್ತೀವಿ 2Aದಲ್ಲಿ ಎಲ್ಲ ಸಮಾನಾಗಿ ಕೊಡ್ತೀನಿ ಅಂದಿದ್ರಿ ಅದರ ಬಗ್ಗೆ ಸ್ಪಷ್ಟೀಕರಣ ಇಲ್ಲ*
ಕಾನೂನು ಸಚಿವರು ಹೇಳ್ತಾರೆ ಇ ಡಬ್ಲ್ಯೂ ಎಸ್ ನಲ್ಲಿ ತಗೆದು ಕೊಡ್ತಾರಂತ.ಹಿಂಗ ಹಿಂಗ ತಗದ ಹಂಗ ಮಾಡ್ತೀನಿ ಅಂತಾ ಕಾನೂನು ಮಂತ್ರಿ ಹೇಳ್ತಾರೆ.ಎಂದು ಬಸನಗೌಡ ಯತ್ನಾಳ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *