ಬೆಳಗಾವಿ- ಮಾಜಿ ಸಚಿವ,ಚಾಮರಾಜನಗರ ಶಾಸಕ,ಮುಸ್ಲಿಂ ಸಮುದಾಯದ ಮುಖಂಡ, ಮಾಜಿ ಸಿಎಂ ಸಿದ್ರಾಮಯ್ಯನವರ ಪರಮಾಪ್ತ,ಜಮೀರ್ ಅಹ್ಮದ ನಿನ್ನೆ ಶನಿವಾರ ಬೆಳಗಾವಿಯಲ್ಲಿ,ಅದರಲ್ಲೂ ಮುಸ್ಲೀಂ ಸಮುದಾಯದಲ್ಲಿ ಹೊಸ ಸಂಚಲನ ಮೂಡಿಸಿದರು.
ಜಮೀರ್ ಅಹ್ಮದ ಬೆಳಗಾವಿಯಲ್ಲಿ ಸರಣಿ ಸಭೆಗಳನ್ನು ಮಾಡಿದ್ರು, ಜೊತೆಗೆ ಅಲ್ಪಸಂಖ್ಯಾತರ ಸಮಾವೇಶ ಮಾಡಿದ್ರು, ಈ ಸಮಾವೇಶದಲ್ಲಿ ಅಂಗವಿಕಲನೊಬ್ಬನಿಗೆ,ಲ್ಯಾಪ್‌ಟಾಪ್ ಖರೀದಿಸಲು ವೇದಿಕೆ ಮೇಲೆ 50 ಸಾವಿರ ರೂ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದ್ರು.
ಸಮಾವೇಶ ಮುಗಿಸಿ,ಜಮೀರ್ ಅಹ್ಮದ್ ಮುಸ್ಲಿಂ ನಗರ ಸೇವಕರ ಮನೆಗೆ ಭೇಟಿ ನೀಡಿದ್ರು, ಬೆಳಗಾವಿಯ ಗಾಂಧಿ ನಗರದಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿ ಕೊಂಡಿದ್ದನ್ನು ನೋಡಿ, ಭಾವುಕರಾದ ಜಮೀರ್ ಅಹ್ಮದ ನಾನು ಇನ್ಮುಂದೆ ಆಗಾಗ್ಗೆ ಬೆಳಗಾವಿಗೆ ಬರ್ತಾ ಇರ್ತಿನಿ ಅಂದ್ರು…
ಜಮೀರ ಅಹ್ಮದ ಸ್ಪರ್ದಿಸುವ ಚಾಮರಾಜನಗರ ಕ್ಷೇತ್ರದಿಂದ ಸಿದ್ರಾಮಯ್ಯ ಸ್ಪರ್ದೆ ಮಾಡಬೇಕೆಂದು ಜಮೀರ್ ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಸಿದ್ರಾಮಯ್ಯ ಜಮೀರ್ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ರೆ, ಜಮೀರ್ ಅಹ್ಮದ ಬೆಳಗಾವಿ ಉತ್ತರ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾರೆ ಎನ್ನುವ ಮುನ್ಸೂಚನೆಯನ್ನು ಜಮೀರ್ ಬೆಳಗಾವಿಯ ನಾಯಕರಿಗೆ ಕೊಟ್ಟಿದ್ದಾರೆ.
ಗಾಂಧಿನಗರದ ನಗರ ಸೇವಕ ಅಝೀಂ ಪಟವೇಗಾರ ನಿವಾಸದಲ್ಲಿ, ಹಲವಾರು ಜನ ನಗರಸೇವಕರು,ನಗರದ ಮುಸ್ಲಿಂ ಮುಖಂಡರು ಜಮೀರ್ ಅಹ್ಮದ ಅವರ ಜೊತೆ ಪ್ರತ್ಯೇಕವಾಗಿಯೇ ಚರ್ಚೆ ಮಾಡಿ,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಉತ್ತರದಿಂದ ಯಾರಿಗೆ ಟಿಕೆಟ್ ಕೊಡಿಸಬೇಕು.ಯಾರಿಗೆ ಟಿಕೆಟ್ ಕೊಡಬಾರ್ದು ಅನ್ನೋದನ್ನು ಜಮೀರ್ ಗಮನಕ್ಕೆ ತಂದಿದ್ದಾರೆ.
ಬೆಳಗಾವಿಯ ಮುಸ್ಲಿಂ ಮುಖಂಡರ ಅಹವಾಲು ಆಲಿಸಿದ ಜಮೀರ್ ಅಹ್ಮದ ನಿಮ್ಮ ವಿಚಾರವನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತೀನಿ,ಬೆಳಗಾವಿಯ ಲೀಡರ್ ಗಳು ಸೇರಿ ಒಂದು ದಿನ ಬೆಂಗಳೂರಿಗೆ ಬನ್ನಿ ಎಂದು ಜಮೀರ್ ಆಮಂತ್ರಣ ನೀಡಿದ್ದಾರೆ.
ಒಟ್ಟಾರೆ,ಜಮೀರ ಅಹ್ಮದ ಬೆಳಗಾವಿ ನಗರದ ಹಲವಾರು ಜನ ಅಂಗವಿಕಲರಿಗೆ ಕಿಸೆಯಲ್ಲಿ ಕೈಹಾಕಿ,ಕೈಗೆ ಬಂದಷ್ಟು ದುಡ್ಡು ಕೊಟ್ಟಿದ್ದೇ ಕೊಟ್ಡಿದ್ದು, ಜಮೀರ್ ಅಹ್ಮದ ಉದಾರತೆ ಕಂಡು ಬೆಳಗಾವಿಯ ಜನ ಫುಲ್ ಫಿದಾ ಆಗಿದ್ದಾರೆ.
ಜಮೀರ್ ಬೆಳಗಾವಿಯಿಂದ ಹೊರಡುವಾಗ ಭಾವುಕರಾಗಿ ಬೆಳಗಾವಿಯಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದನ್ನು ಕಂಡು ನಗರಸೇವಕರಾದ ಅಝೀಂ ಫತೇಖಾನ್,ಮತ್ತು ಮಾಜಿ ನಗರ ಸೇವಕ ಮತೀನ್ ಸೇರಿದಂತೆ ಎಲ್ಲ ಬೆಳಗಾವಿಯ ನಾಯಕರನ್ನು ಜಮೀರ್ ಹಾಡುಹೊಗಳಿದ್ರು…